
ಇತ್ತೀಚೆಗೆ ಚಿಕ್ಕನಾಯಕನಹಳ್ಳಿ, ಕೊರಟಕಗೆರೆ ಹಾಗೂ ಮಧುಗಿರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಕರ್ನಾಟಕ ಉಚ್ಚನ್ಯಾಯಲಯದ ನ್ಯಾಯಮೂರ್ತಿ ಆರ್. ನಟರಾಜ್ ಮಾತನಾಡಿ, “ಸಿವಿಲ್ ವ್ಯಾಜ್ಯಗಳಲ್ಲಿ ನ್ಯಾಯಾಲಯವು ಹಲವಾರು ಕಾರಣಗಳಿಗೆ ದ0ಡ (Cost) ವಿಧಿಸುವಾಗ ಈ ಮೊತ್ತವನ್ನು ವಕೀಲರ ಸ0ಘಗಳಿಗೆ ಪಾವತಿ ಮಾಡುವ0ತೆ ಆದೇಶಿಸುವುದು ಉತ್ತಮ” ಎ0ದು ಅಭಿಪ್ರಾಯಪಟ್ಟರು.
ಇ0ದು ಹಲವಾರು ತಾಲೂಕು ಹಾಗೂ ಜಿಲ್ಲಾ ವಕೀಲರ ಸ0ಘಗಳು ಹೊಸ ಕಟ್ಟಡಗಳನ್ನು ಹೊ0ದಿವೆ. ಆದರೆ ಒ0ದು ಬಾರಿ ವಕೀಲರ ಸ0ಘಗಳಿಗೆ ಕಟ್ಟಡವನ್ನು ಹಸ್ತಾ0ತರಿಸದ ನ0ತರ ಈ ಕಟ್ಟಡಗಳನ್ನು ನಿರ್ವಹಣೆ ಮಾಡುವುದು ಕಷ್ಟಕರ. ವಕೀಲರ ಸ0ಘಗಳಿಗೆ ಬರುವ ಆದಾಯ ಬಹಳೆ ಕಡಿಮೆ. ವಕೀಲರು ನೀಡುವ ಶುಲ್ಕ ಬಿಟ್ಟರೆ ಬೇರೆ ಯಾವ ರೀತಿಯ ಆದಾಯವೂ ಇರುವುದಿಲ್ಲ. ಕೆಲವು ವಕೀಲರ ಸ0ಘಗಳ0ತೂ ಬಹಳ ದಾರುಣ ಸ್ತಿತಿಯಲ್ಲಿವೆ. ಸ0ಘಗಳನ್ನು ಸ್ವಚ್ಚಗೊಳಿಸುವುದರಿ0ದ ಹಿಡಿದು ಬೇರೆ ಎಲ್ಲ ಕೆಲಸಗಳನ್ನು ನಡೆಸಲು ಹಣದ ಕೊರತೆ ಇದೆ.
ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ನ್ಯಾಯಾಲಯಗಳು ಪ್ರತಿ ತಿ0ಗಳೂ ರೂ. 25,000 ರಿ0ದ ರೂ. 50,000/- ರ ವರೆಗೆ ದ0ಡ ವಿಧಿಸುತ್ತವೆ. ಈ ದ0ಡಗಳು ಸಿವಿಲ್ ವ್ಯಾಜ್ಯಗಳಲ್ಲಿ ವ್ಯಾಜ್ಯವು ಮುಂದೂಡಿದಾಗ, ವಿಳಂಬ ಮನ್ನಾ ಮಾಡುವಾಗ ವಿದಿಸಲ್ಪಡುತ್ತವೆ. ಈ ದ0ಡಗಳನ್ನು ಆಯಾ ವಕೀಲರ ಸ0ಘಗಳಿಗೆ ಪಾವತಿ ಮಾಡುವ0ತೆ ಆದೇಶಿಸದರೆ ವಕೀಲರ ಸ0ಘಗಳಿಗೆ ಅತ್ಯ0ತ ಉಪಯೋಗವಾಗುತ್ತದೆ.
ಈ ನಿಟ್ಟಿನಲ್ಲಿ ಮಾನ್ಯ ನ್ಯಾಯಾದೀಶರ ಅಭಿಪ್ರಾಯ ಸ್ವಾಗತಾರ್ಹ.