ಸಾಂವಿಧಾನಿಕ ನೈತಿಕತೆ (Constitutional Morality).

ಬಸವರಾಜ್ ಎಸ್. ಹಿರಿಯ ವಕೀಲರು.

ಭಾರತದ ಸರ್ವೋಚ್ಚ ನ್ಯಾಯಾಲಯದ 9 ನ್ಯಾಯಮೂರ್ತಿಗಳ ಮುOದೆ ವಾದ ಮOಡಿಸಿದ ಭಾರತದ ಸಾಲಿಸಿಟರ್ ಜನರಲ್ ಶ್ರಿ. ತುಶಾರ್ ಮೆಹತಾರವರು ‘ಸಾಂವಿಧಾನಿಕ ನೈತಿಕತೆ’ಯ ಮೂಲಕ ಕಾನೂನುಗಳನ್ನೂ ಹಾಗೂ ಭಾರತೀಯ ಪರOಪರೆ/ಪದ್ದತಿಗಳನ್ನೂ ಪರಿಶೀಲಿಸುವ ಕುರಿತು ತೀವ್ರ ಅಸಮದಾನ ವ್ಯಕ್ತಪಡಿಸಿದ್ದಾರೆ. ತಮ್ಮ ಸುದೀರ್ಘ ವಾದದಲ್ಲಿ “ಸಾಂವಿಧಾನಿಕ ನೈತಿಕತೆ ಮಾರ್ಗದರ್ಶಕ ತತ್ವವಾಗಬಹುದು; ಆದರೆ ಕಾನೂನುಗಳ ಮಾನ್ಯತೆಯನ್ನು ನಿರ್ಧರಿಸುವ ಸ್ವತಂತ್ರ ಕಾನೂನು ಪರೀಕ್ಷೆಯಾಗಿ ಬಳಸಬಾರದು“ ಎOದು ಪ್ರತಿಪಾದಿಸಿದರು.

ಶ್ರಿ. ತುಶಾರ್ ಮೆಹತಾರವರ ಪ್ರಕಾರ ನ್ಯಾಯಾಲಯವು ಕಾನೂನನ್ನು ರದ್ದುಪಡಿಸಬೇಕಾದರೆ ಸ್ಪಷ್ಟವಾದ ಸಂವಿಧಾನ ಉಲ್ಲಂಘನೆ ಇರಬೇಕು. “ನೈತಿಕತೆ” ಆಧಾರದ ಮೇಲೆ ಮಾತ್ರ ಕಾನೂನು ರದ್ದುಪಡಿಸುವುದು ಪ್ರಜಾಪ್ರಭುತ್ವದ ಸಿದ್ಧಾಂತಕ್ಕೆ ವಿರುದ್ಧ.

ನ್ಯಾಯಮೂರ್ತಿ ಬಿ. ವಿ. ನಾಗರತ್ನರವರು ಸಾಂವಿಧಾನಿಕ ನೈತಿಕತೆ Constitutional Morality ಎOಬುದನ್ನು ಸಾಂವಿಧಾನಿಕ ಧರ್ಮ Constitutonal Dharma ಎOದು ವ್ಯಾಕ್ಯಾನಿಸಿದರು.

ಸಾಂವಿಧಾನಿಕ ನೈತಿಕತೆ ಎಂದರೆ ಏನು? – ದೇಶದ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೌಲ್ಯಗಳು, ತತ್ವಗಳು ಮತ್ತು ಆದರ್ಶಗಳನ್ನು ಗೌರವಿಸುವುದು, ಅನುಸರಿಸುವುದು ಹಾಗೂ ಸಂರಕ್ಷಿಸುವುದು. ಇದು ಕೇವಲ ಕಾನೂನು ಪಾಲನೆ ಮಾತ್ರವಲ್ಲ; ಸಂವಿಧಾನದ ಆತ್ಮವನ್ನು ಅರಿತು, ಅದರ ಪ್ರಜಾಪ್ರಭುತ್ವ, ಸಮಾನತೆ, ಸ್ವಾತಂತ್ರ್ಯ ಮತ್ತು ನ್ಯಾಯದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮನೋಭಾವ.

ಸರಳವಾಗಿ ಹೇಳುವುದಾದರೆ: ಸಮಾಜದ ಪದ್ಧತಿ, ಪರಂಪರೆ ಅಥವಾ ಬಹುಮತದ ಅಭಿಪ್ರಾಯವು ಸಂವಿಧಾನದ ಮೂಲಭೂತ ಹಕ್ಕುಗಳಿಗೆ ವಿರುದ್ಧವಾದರೆ, ಸಂವಿಧಾನದ ಮೌಲ್ಯಗಳನ್ನು ಮೊದಲಿಗವಾಗಿ ಗೌರವಿಸುವುದು ಸಾಂವಿಧಾನಿಕ ನೈತಿಕತೆ.

ಮುಖ್ಯ ಅಂಶಗಳು: ಸಂವಿಧಾನದ ಮೇಲುಗೈ – ಎಲ್ಲಾ ಕಾನೂನುಗಳು ಮತ್ತು ಕ್ರಮಗಳು ಸಂವಿಧಾನದೊಂದಿಗೆ ಹೊಂದಿಕೆಯಾಗಬೇಕು. ಮೂಲಭೂತ ಹಕ್ಕುಗಳ ರಕ್ಷಣೆ – ವ್ಯಕ್ತಿಯ ಗೌರವ, ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಕಾಪಾಡುವುದು. ಸಾಮಾಜಿಕ ನ್ಯಾಯ – ದುರ್ಬಲ ವರ್ಗಗಳಿಗೆ ನ್ಯಾಯ ಮತ್ತು ರಕ್ಷಣೆ ಒದಗಿಸುವುದು. ಅಲ್ಪಸಂಖ್ಯಾತರ ಹಕ್ಕುಗಳು – ಬಹುಮತದ ಒತ್ತಡಕ್ಕೆ ಒಳಗಾಗದೆ ಅವರ ಹಕ್ಕುಗಳನ್ನು ಕಾಪಾಡುವುದು. ಪ್ರಜಾಪ್ರಭುತ್ವ ಮೌಲ್ಯಗಳು – ಸಹಿಷ್ಣುತೆ, ಭಿನ್ನಾಭಿಪ್ರಾಯಗಳ ಗೌರವ ಮತ್ತು ಕಾನೂನಿನ ಆಳ್ವಿಕೆ.

ಸಾಂವಿಧಾನಿಕ ನೈತಿಕತೆ ಎಂದರೆ “ಸಂವಿಧಾನದ ಆತ್ಮದ ಪ್ರಕಾರ ನಡೆದುಕೊಳ್ಳುವ ನೈತಿಕ ಬದ್ಧತೆ”. ಇದು ನ್ಯಾಯಾಂಗ, ಸರ್ಕಾರ ಮತ್ತು ನಾಗರಿಕರೆಲ್ಲರಿಗೂ ಮಾರ್ಗದರ್ಶಕ ತತ್ವವಾಗಿದೆ.

ಡಾ. ಬಿ. ಆರ್. ಅಂಬೇಡ್ಕರ್ ಅವರ ಪ್ರಕಾರ ಸಾಂವಿಧಾನಿಕ ನೈತಿಕತೆ ಎಂದರೆ, ಸಂವಿಧಾನದ ಪುಸ್ತಕ ಮಾತ್ರವಲ್ಲ, ಅದರ ಆತ್ಮ ಮತ್ತು ಮೌಲ್ಯಗಳನ್ನು ಗೌರವಿಸಿ ಅನುಸರಿಸುವ ನೈತಿಕ ಬದ್ಧತೆ.

ಭಾರತದ ಸರ್ವೋಚ್ಚ ನ್ಯಾಯಾಲಯ ತನ್ನ State (NCT of Delhi) v. Union of India, (2018) 8 SCC 501 ತೀರ್ಪಿನಲ್ಲಿ ಹೀಗೆ ಹೇಳಿದೆ “ಸಾಂವಿಧಾನಿಕ ನೈತಿಕತೆ ಎಂಬ ಪದದ ಕಠಿಣ ಅರ್ಥದಲ್ಲಿ, ಸಂವಿಧಾನದ ವಿವಿಧ ಭಾಗಗಳಲ್ಲಿ ಅಂಕಿತಗೊಂಡಿರುವ ತತ್ವಗಳಿಗೆ ಕಟ್ಟುನಿಟ್ಟಾಗಿ ಹಾಗೂ ಸಂಪೂರ್ಣವಾಗಿ ಅನುಸರಿಸುವುದನ್ನು ಸೂಚಿಸುತ್ತದೆ. ಒಂದು ದೇಶವು ಸಂವಿಧಾನವನ್ನು ಹೊಂದಿದಾಗ, ಅದರೊಂದಿಗೆ ಒಂದು ಭರವಸೆ ಕೂಡ ಇರುತ್ತದೆ; ಅದು ಏನೆಂದರೆ, ಸಾಮಾನ್ಯ ನಾಗರಿಕರಿಂದ ಹಿಡಿದು ಉನ್ನತ ಸಾಂವಿಧಾನಿಕ ಹುದ್ದೆಧಾರಿಗಳವರೆಗೆ ದೇಶದ ಪ್ರತಿಯೊಬ್ಬ ಸದಸ್ಯರೂ ಸಂವಿಧಾನದ ಮೂಲಭೂತ ತತ್ವಗಳನ್ನು ಅತ್ಯುನ್ನತವಾಗಿ ಗೌರವಿಸಬೇಕು ಎಂಬುದು.

ಸಂವಿಧಾನ ವಿಧಿಸುವ ಈ ಕರ್ತವ್ಯವು, ಸಂವಿಧಾನವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರಕ್ಷಿಸಿ, ಅದು ಅಲುಗಾಡದೆ ಮುಂದುವರಿಯುವಂತೆ ಮಾರ್ಗದರ್ಶಕ ಶಕ್ತಿಯಾಗಿ ಕಾರ್ಯನಿರ್ವಹಿಸುವ ಅನಿವಾರ್ಯ ಮೂಲಾಧಾರವಾಗಿರುವುದರಿಂದ ಉಂಟಾಗಿದೆ. ಸಾಂವಿಧಾನಿಕ ಹುದ್ದೆಧಾರಿಗಳು ಈ ಮಹತ್ವದ ದಸ್ತಾವೇಜಿನತ್ತ ಇನ್ನಷ್ಟು ಹೆಚ್ಚಿನ ಹೊಣೆಗಾರಿಕೆಯನ್ನು ಹೊಂದಿರುತ್ತಾರೆ; ಏಕೆಂದರೆ ಅವರು ತಮ್ಮ ಅಧಿಕಾರ ಮತ್ತು ಶಕ್ತಿಯನ್ನು ಇದೇ ದಸ್ತಾವೇಜಿನಿಂದ ಪಡೆಯುತ್ತಾರೆ. ಆದ್ದರಿಂದ, ಸಹಜ ಪರಿಣಾಮವಾಗಿ, ಅವರು ಕೈಗೊಳ್ಳುವ ಪ್ರತಿಯೊಂದು ಕ್ರಮವೂ ಸಂವಿಧಾನದ ಮೂಲಭೂತ ತತ್ವಗಳಿಗೆ ಅನುಗುಣವಾಗಿರುವಂತೆ, ಸಂವಿಧಾನಾತ್ಮಕತೆಯ ಮನೋಭಾವವನ್ನು ಬೆಳೆಸಿ ಅಭಿವೃದ್ಧಿಪಡಿಸಬೇಕು.“

ಶಬರಿಮಲೆ ಪ್ರಕರಣದಲ್ಲಿ ಸಾಂವಿಧಾನಿಕ ನೈತಿಕತೆಯ ಬಳಕೆ. Indian Young Lawyers Association v. State of Kerala ಪ್ರಕರಣದಲ್ಲಿ, ಭಾರತದ ಸರ್ವೋಚ್ಚ ನ್ಯಾಯಾಲಯವು ಸಾಂವಿಧಾನಿಕ ನೈತಿಕತೆ ಎಂಬ ತತ್ವವನ್ನು ಪ್ರಮುಖ ಆಧಾರವಾಗಿ ಬಳಸಿತು. ಇದು ಶಬರಿಮಲೆ ದೇವಾಲಯಕ್ಕೆ 10–50 ವಯಸ್ಸಿನ ಮಹಿಳೆಯರ ಪ್ರವೇಶದ ಮೇಲಿನ ನಿರ್ಬಂಧದ ಮಾನ್ಯತೆಯನ್ನು ಪರಿಶೀಲಿಸಲು ಉಪಯೋಗಿಸಲಾಯಿತು.

ಈಗ ಮತ್ತೆ ಶಬರಿಮಲೆ ವಿಚಾರ ಭಾರತದ ಸರ್ವೋಚ್ಚ ನ್ಯಾಯಾಲಯದ 9 ನ್ಯಾಯಾದೀಶರ ಮುOದೆ ವಿಚಾರಣೆಗೆ ನಡೆಯುತ್ತಿದೆ. ಶ್ರಿ. ತುಶಾರ್ ಮೆಹತಾರವರ ವಾದದ ಪ್ರಕಾರ ಸಾಂವಿಧಾನಿಕ ನೈತಿಕತೆ ಎOದರೆ ಸOವಿದಾನದ ಅಡಿಯಲ್ಲಿ ಸರ್ಕಾರಗಳು ಅದರ ಅOಗಗಳು ಹಾಗೂ ವ್ಯಕ್ತಿಗಳು ಹೇಗೆ ನಡೆದುಕೊಳ್ಳಬೇಕು ಎನ್ನುವ ಬಗೆಗಿನ ವಿಚಾರಗಳೆ ಹೊರೆತು, ಒOದು ಕಾನೂನಿನ ಮಾನ್ಯತೆಯನ್ನು ಪರಿಶೀಲಿಸಲು ಅಥವಾ ಒOದು ಪದ್ದತಿ, ಪರOಪರೆಯ ಅಭಿವ್ಯಕ್ತಿಗಳನ್ನು ಒರೆಹಚ್ಚಲು ಬಳಸಬಾರದು.

ಶ್ರಿ. ತುಶಾರ್ ಮೆಹತಾರವರ ವಾದವನ್ನು ಸರ್ವೋಚ್ಚ ನ್ಯಾಯಾಲಯ ಒಪ್ಪುತ್ತದೆಯೋ ಎOಬುದನ್ನು ಕಾದು ನೋಡಬೇಕಿದೆ.

Published by rajdakshalegal

Senior Advocate, High Court of Karnataka, Bengaluru

Leave a comment