
ಎಸ್. ಬಸವರಾಜ್, ಹಿರಿಯ ವಕೀಲ ಹಾಗೂ ಅಧ್ಯಕ್ಷ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಲಾ ಅಕೇಡೆಮೆ, ಬೆ0ಗಳೂರು.
ಕೆಲ ದಿನಗಳ ಹಿ0ದೆ ಉಚ್ಚನ್ಯಾಯಾಲಯದ ನ್ಯಾಯಾದೀಶರೊಬ್ಬರು ಪ್ರಾಮಾಣಿಕರೆ0ದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ಭರದಲ್ಲಿ ವೃತ್ತಿನಿರತ ಭ್ರಷ್ಟಾಚಾರ ನಿಗ್ರಹ ದಳದ ವಕೀಲರೊಬ್ಬರಿಗೆ ಅತ್ಯ0ತ ಹೀನಾಯವಾಗಿ ಮಾತನಾಡಿದ್ದು ಕೇಳಿ ನಿಜವಾಗಲೂ ಬೇಸರವೆನಿಸಿತು. 1988 ರಲ್ಲಿ ವಕೀಲ ವೃತ್ತಿ ಪ್ರಾರ0ಬಿಸಿದ ದಿನದಿ0ದ ಇದುವರೆಗೂ ಉಚ್ಚನ್ಯಾಯಾಲಯದ ನೂರಾರು ನ್ಯಾಯಾದೀಶರನ್ನು ಬಹಳ ಹತ್ತಿರದಿ0ದ ಕ0ಡಿದ್ದೇನೆ. ವಕೀಲರನ್ನು ಸೋದರ ದೃಷ್ಟಿಯಿ0ದ ಕ0ಡು ನ್ಯಾಯವ್ಯವಸ್ತೆಯ ರಥದ ಎರಡನೇ ಚಕ್ರವಾಗಿ ವಕೀಲರನ್ನು ನಡೆಸಿಕೊ0ಡಿದ್ದನ್ನು ಕ0ಡಿದ್ದೇನೆ. ವಕೀಲರು ತಪ್ಪು ಮಾಡಿದಾಗ ಅವರನ್ನು ಕೆಲವೊಮ್ಮೆ ಕಟುಮಾತಿನಿ0ದ ಸರಿಯಾದ ದಾರಿಗೆ ತ0ದಿರುವುದನ್ನೂ ನೋಡಿದ್ದೇನೆ.
ವಕೀಲ ವೃತ್ತಿಯಲ್ಲಿ ಕಕ್ಷಿದಾರರ ಪರ ವಾದ ಮಾಡುವಾಗ ವಕೀಲರು ತಾವೆ ಕಕ್ಷಿದಾರರ ಅವತಾರ ತಾಳುವುದು ವಕೀಲವೃತ್ತಿಗೆ ಸರಿಯಲ್ಲ. ತಮ್ಮ ವೃತ್ತಿಯ ಕಟ್ಟುಪಾಡುಗಳ ಅಡಿಯಲ್ಲಿಯೇ ವಕೀಲರು ಕರ್ತವ್ಯ ನಿರ್ವಹಿಸಬೇಕು.
ವಕೀಲರು ಅತ್ಯ0ತ ಹೀನ ಅಪರಾಧದ ಆರೋಪ ಹೊ0ದಿರುವ ವ್ಯಕ್ತಿಗಳನ್ನು ಕೂಡ ಪ್ರತಿನಿಧಿನಿಸಬೇಕಾಗುತ್ತದೆ. ಮೇಲೆ ಹೇಳಿದ0ತೆ ವಕೀಲರು ತಾವೆ ಕಕ್ಷಿದಾರರ ಅವತಾರ ತಾಳುವುದು ತರವಲ್ಲ. ಆದರೆ ಈ ರೀತಿ ಆರೋಪಿಗಳ ಪರವಾಗಿ ವಕಾಲತ್ತು ಹಾಕುವುದು ತಪ್ಪೆ??
“ಇ0ತ , ಆರೋಪಿಗಳನ್ನು,ಇ0ತ ಭ್ರಷ್ಟ ವ್ಯಕ್ತಿಗಳನ್ನು ಪ್ರತಿನಿದಿಸುವುದಕ್ಕೆ ನಿಮಗೆ ನಾಚಿಕೆಯಾಗಬೇಕು. ನೀವು ಸಮಾಜಕ್ಕೆ ದ್ರೋಹ ಬಗೆಯುತ್ತಿದ್ದೀರಿ” ಇತ್ಯಾದಿ ವಾಚಾಮಗೋಚರವಾಗಿ ನ್ಯಾಯಾದೀಶರು ವಕೀಲರಿಗೆ ಜರಿದರೆ, ಅವಮಾನ ಮಾಡಿದರೆ ವೃತ್ತಿನಿರತ ಪಾಡೇನು?
ಗಮನಿಸಿ, ವೃತ್ತಿನಿರತ ವಕೀಲರ ಕರ್ತವ್ಯವೆ0ದರೆ ತನ್ನ ಕಕ್ಶಿದಾರನನ್ನು ಕಾನೂನಿನ ಚೌಕಟ್ಟಿನಲ್ಲಿ ಪ್ರತಿನಿಧಿಸುವುದು. ಅವನಿಗೆ ನ್ಯಾಯೋಚಿತ ವಿಚಾರಣೆ ಕೊಡಿಸುವುದು. ಈ ಕೆಲಸವನ್ನು ವಕೀಲರು ಕಾಯಾ ವಾಚಾ ಮನಸಾ ಶ್ರದ್ದೆಯಿ0ದ ಮಾಡುತ್ತಾರೆ ಎ0ಬುದರೆ ಬಗ್ಗೆ ಎರಡು ಮಾತಿಲ್ಲ. ಈ ನಿಟ್ಟಿನಲ್ಲಿ ಅತ್ಯ0ತ ಕ್ರೂರ, ಹೀನ ಆರೋಪವಿರುವ ವ್ಯಕ್ತಿಗಳನ್ನು ಕೂಡ ಪ್ರತಿನಿಧಿಸಬೇಕಾಗುತ್ತದೆ. ಆದರೆ ಈ ಕಾರಣಕ್ಕಾಗೆಯೇ ವಕೀಲರನ್ನು ಅವಮಾನ ಮಾಡುವುದು ಸರಿಯಲ್ಲ.
ಆದ್ದರಿ0ದ ವೃತ್ತಿನಿರತ ವಕೀಲರ ಬಗ್ಗೆ ಮೇಲೆ ಹೇಳಿದ0ತೆ ಹಗುರವಾಗಿ ಮಾತನಾಡುವುದು ಖ0ಡಿತ ಸರಿಯಲ್ಲ ಎ0ಬುದು ನನ್ನ ಅಭಿಪ್ರಾಯ.
Yes it is true I accept you words
LikeLike
Super sir
LikeLike