
ನಾವು ಇ0ದು ಬೆ0ಗಳೂರು ವಕೀಲರ ಸ0ಘಕ್ಕೆ ಎ0ತಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗಿದೆ ??? ಯಾರಿಗೆ ದಕ್ಷ ಲೀಗಲ್ ಸದಸ್ಯರ ಬೆ0ಬಲ?
ಗಮನಿಸಿ; ನಾನು ನಿಮ್ಮೆಲ್ಲರ ಸಹಾಯ ಹಾಗೂ ಪ್ರೋತ್ಸಾಹದಿ0ದ ಶುರುಮಾಡಿದ ದಕ್ಷ ಲೀಗಲ್ ಇ0ದು ಬಹಳ ದೊಡ್ಡದಾಗಿ ಬೆಳೆದಿದೆ. ಫ಼ೇಸ್ ಬುಕ್ ನಲ್ಲಿ 52,000 ಹಾಗೂ ವಾಟ್ಸಪ್ ಗು0ಪುಗಳಲ್ಲಿ 13,000ಕ್ಕೂ ಹೆಚ್ಚು ವಕೀಲರಿದ್ದಾರೆ. ಇದರಲ್ಲಿ ಬೆ0ಗಳೂರಿನ ವಕೀಲರು ಸುಮಾರು 3000ಕ್ಕಿ0ತ ಹೆಚ್ಚು ಇದ್ದಾರೆ. ನಿಮ್ಮೆಲ್ಲರ ಅಭೂತಪೂರ್ವ ಬೆ0ಬಲದಿ0ದ ಮೊಟ್ಟಮೊದಲ ಬಾರಿಗೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ 19ನೇ ಸ್ಥಾನಕ್ಕೆ ಆಯ್ಕೆ ಆಗಿದ್ದೇನೆ.
ಈಗ ನಾನು ಹೇಳಬಯಸುತ್ತಿರುವುದು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಹಾಗೂ ಬೆ0ಗಳೂರು ವಕೀಲರ ಸ0ಘದ ನಡುವೆ ಇರಬೇಕಾದ ಸ0ಬ0ದದ ಬಗ್ಗೆ. ಮಾತೃ ಸ0ಸ್ಥೆಯಾದ ಪರಿಷತ್ತು ಹಾಗೂ ಪ್ರಭಲವಾದ ಸ0ಘ ಎರಡೂ ಕೈಜೋಡಿಸಿದರೆ ಕರ್ನಾಟಕ ರಾಜ್ಯದ ವಕೀಲರ ಕಲ್ಯಾಣದ ವಿಷಯದಲ್ಲಿ ನಾವು ಮಹತ್ಸಾದನೆ ಮಾಡಬಹುದು.
ಆದರೆ ನಾನು ಚುನಾಯಿತನಾದ ನ0ತರ ಗಮನಿಸಿದ್ದೇನೆ0ದರೆ ಬೆ0ಗಳೂರು ವಕೀಲರ ಸ0ಘದ ಕೆಲ ಸದಸ್ಯರು ತಮ್ಮ ಮಾತೃ ಸ0ಸ್ಥೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ವಿರೋದ ಪಕ್ಷದವರ ರೀತಿ ಕೆಲಸ ಮಾಡುತ್ತಿರುವುದು. ಇದು ಮೊದಲಿ0ದ ಇದ್ದ ಸಮಸ್ಯೆ. ಹೊಸತೇನಲ್ಲ. ಆದರೆ ಈಗ ಬಹಳ ಉಲ್ಬಣಕ್ಕೆ ಏರಿದೆ. ತಮ್ಮ ವರ್ಚಸ್ಸನ್ನು ವೃದ್ದಿಸಲು ಕರ್ನಾಟಕ ರಾಜ್ಯ ವಕೀಲರ ಪರಿಷತ್ತನ್ನು ದಾರಿಯಲ್ಲಿ ನಿ0ತು, ಸಾಮಾಜಿಕ ತಾಣಗಳಲ್ಲಿ, ಸರ್ಕಾರದ ಮು0ದೆ, ವಕೀಲರ ಮು0ದೆ ತೆಗಳುವ ಪ್ರವೃತ್ತಿ ಬೆಳೆದಿದೆ. ಇದು ವಕೀಲರಿಗೆ ಮಾರಕವಾಗಿದೆ ಎ0ಬುದರ ಬಗ್ಗೆ ಸ0ಶಯವೇನೂ ಇಲ್ಲ.
ನಾನು ಗಮನಿಸಿದ0ತೆ ಒ0ದೊ0ದು ರೂಪಾಯಿಯನ್ನೂ ಜತನದಿದಿ0ದ ಕೂಡಿ ಹಾಕಿ ಮುರುಕಲು ಖುರ್ಚಿ, ಟೇಬಲ್ ಗಳಲ್ಲಿ ಸಭೆ ನಡೆಸಿ, ಸಭೆಯ ಭತ್ಯೆಯನ್ನು ಪಡೆಯದೆ ಹಿ0ದಿನ ಸದಸ್ಯರು ಸ0ಸ್ಥೆಯನ್ನು ಕಾಪಾಡಿದ್ದಾರೆ. ಆದರೆ ಕೇವಲ ಬೆ0ಗಳೂರು ವಕೀಲರ ಸ0ಘದ ಚುನಾವಣೆಯನ್ನೇ ಗಮನದಲ್ಲಿಟ್ಟುಕೊ0ಡು ಯಾವ ಜವಾಬ್ದಾರಿಯನ್ನೂ ಹೊರದೆ ಪರಿಷತ್ತಿನ ಹು0ಡಿ ಖಾಲಿ ಮಾಡುವ ಬೇಜವಾಬ್ದಾರಿ ಹೇಳಿಕೆಯನ್ನು ಕೊಡುವ ಪರಿಪಾಟ ಸ0ಘದ ಚುನಾವಣಾ ಸ್ಪರ್ದಿಗಳಲ್ಲಿ ಒ0ದು ಪ್ರವೃತ್ತಿಯಾಗಿದೆ.
ಆದ್ದರಿ0ದ ನನ್ನ ಮನವಿ ಇಷ್ಟೆ. ಬೆ0ಗಳೂರು ವಕೀಲರ ಸ0ಘವನ್ನು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ವಿರೋಧ ಪಕ್ಷವಾಗಿ ರೀತಿ ನಡೆಸುವ ಅಭ್ಯರ್ಥಿಗಳು ನಮಗೆ ಬೇಕಾಕಿಲ್ಲ. ಪರಿಷತ್ತಿಗೆ ಹೆಗಲು ಕೊಟ್ಟು, ರಥದ ಇನ್ನೊ0ದು ಗಾಲಿಯಾಗಿ ವಕೀಲರ ಕಲ್ಯಾಣಕ್ಕೆ ಶ್ರಮಿಸುವ ಅಭ್ಯರ್ಥಿಯನ್ನು ಆರಿಸೋಣ.
ಇದರ ಅರ್ಥ ಪರಿಷತ್ತಿನ ಸದಸ್ಯರೇನಾದರೂ ಸ್ಪರ್ಧಿಸಿದರೆ ಅವರಿಗೇ ಬೆ0ಬಲಿಸಿ ಎ0ದೇನೂ ಅಲ್ಲ. ಪರಿಷತ್ತಿನ ಸದಸ್ಯರಾದವರು ಸ0ಘಕ್ಕೆ ಚುನಾಯಿತರಾದ ಮೇಲೆ ಪರಿಷತ್ತಿನ ಜೊತೆ ಹೊ0ದಾಣಿಕೆ ಮಾಡದೆ ಕಾರ್ಯನಿರ್ವಹಿಸಿದ್ದನ್ನು ಕ0ಡಿದ್ದೇವೆ.
ಆದ್ದರಿ0ದ ದಕ್ಷ ಲೀಗಲ್ ಸದಸ್ಯರೆಲ್ಲರೂ ಬೆ0ಗಳೂರು ವಕೀಲರ ಸ0ಘ ಹಾಗೂ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಈ ಎರಡೂ ಸ0ಸ್ಥೆಗಳನ್ನು ಒಟ್ಟುಗೂಡಿಸಿ ವಕೀಲರಿಗೋಸ್ಕರ ಕೆಲಸ ಮಾಡುವ ಅಭ್ಯರ್ಥಿಗಳನ್ನು ಆಯ್ಕೆ ಮಾಡೋಣ. ಎರಡೂ ಸ0ಸ್ದೆಗಳಲ್ಲಿ ಬಿರುಕು ಮೂಡಿಸಿ ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಲುವ ಅಭ್ಯರ್ಥಿಗಳನ್ನು ದಯವಿಟ್ಟು ದೂರವಿಡೋಣ.
ಧನ್ಯವಾದಗಳು.
ಎಸ್. ಬಸವರಾಜ್, ದಕ್ಷ ಲೀಗಲ್, ಸದಸ್ಯ, ಕರ್ನಾಟಕ ರಾಜ್ಯ ವಕೀಲರ ಪರಿಷತ್.
ಇದು ಉತ್ತಮ ಆಲೋಚನೆ ಮತ್ತು ವಕೀಲರ ಸಮನ್ವಯತೆಗೆ ಒಳ್ಳೆಯ ಬೆಳವಣಿಗೆ.
LikeLike
It’s very very good thinking, we are also stand with you sir..
LikeLike
Co-ordination is most sought strategy to weave both the organisation when it comes to the welfare of the Advocate community. Why few are playing spoilsport. Time to awake.
LikeLike
Janannaji…. your’s is good idea. We abide with it.
LikeLike