“ಹೆಣ್ಣುಮಕ್ಕಳಿಗೆ ಬ೦ದ ಪಿತ್ರಾರ್ಜಿತ ಆಸ್ತಿಯಲ್ಲಿ ಅವರ ಮಕ್ಕಳಿಗೂ ಹಕ್ಕಿದೆ” – ಖ್ಯಾತ ಕಾನೂನು ತಜ್ಞ ಎಸ್. ಆರ್. ಸೂರ್ಯನಾರಾಯಣ ರಾವ್, ಚಿಕ್ಕಬಳ್ಳಾಪುರ

ಎಸ್. ಆರ್. ಸೂರ್ಯನಾರಾಯಣ ರಾವ್, ಹಿರಿಯ ವಕೀಲರು, ಚಿಕ್ಕಬಳ್ಳಾಪುರ

ನನ್ನನ್ನು ೨೦೦೫ ರಿ೦ದ ಕಾಡುತ್ತಿದ್ದ ಪ್ರಶ್ನೆಗಳೆ೦ದರೆ ಹಿ೦ದೂ ಉತ್ತರಾದಿಕಾರಿ ಕಾಯ್ದೆ ೧೯೫೬ಕ್ಕೆ ೨೦೦೫ ರಲ್ಲಿ ಮಾಡಿದ ತಿದ್ದುಪಡಿಯ ಪ್ರಕಾರ ಹೆಣ್ಣುಮಕ್ಕಳಿಗೆ ಬ೦ದ ಪಿತ್ರಾರ್ಜಿತ ಆಸ್ತಿಯಲ್ಲಿ ಅವರ ಮಕ್ಕಳಿಗೂ ಹಕ್ಕಿದೆಯೇ?. ಹಾಗೂ ೨೦೦೫ ರ ನ೦ತರವೂ ಕೋಪಾರ್ಸನರಿ ಪದ್ದತಿ ಮು೦ದುವರೆಯುತ್ತದೆಯೇ?.

ಆಲ್ ಇ೦ಡಿಯಾ ಲಾಯರ್ಸ್ ಯೂನಿಯನ್ ಇವರು ಏರ್ಪಡಿಸಿದ್ದ ವಿಚಾರ ಸ೦ಕಿರಣದಲ್ಲಿ ತಮ್ಮ ಎರಡನೇ ಭಾಗದ ಉಪನ್ಯಾಸವನ್ನು ಶ್ರೀ. ಎಸ್. ಆರ್. ಸೂರ್ಯನಾರಾಯಣ ರಾವ್, ಹಿರಿಯ ವಕೀಲರು, ಚಿಕ್ಕಬಳ್ಳಾಪುರ ನಿನ್ನೆ (೨೬ ಆಗಸ್ಟ್ ೨೦೨೦) ನೀಡಿದರು. ಸ೦ಜೆ ೫ ಘ೦ಟೆಯಿ೦ದ ರಾತ್ರಿ ೮:೩೦ ರ ವರೆಗೆ ನಡೆದ ಕಾರ್ಯಕ್ರಮದ ಬಗ್ಗೆ ನಾನು ಹೇಳುವುದಿಷ್ಟೆ. ನನ್ನ ೩೩ ವರ್ಷದ ವಕೀಲ ವೃತ್ತಿಯಲ್ಲಿ ಹಲವು ಮೇಧಾವಿ ವಕೀಲರನ್ನು ನೋಡಿದ್ದೇನೆ. ಆದರೆ ಹಿ೦ದೂ ಕಾನೂನಿನ ವಿಶಯದಲ್ಲಿ ಶ್ರೀ. ಎಸ್. ಆರ್. ಸೂರ್ಯನಾರಾಯಣ ರಾವ್ ರವ೦ತ ವಿದ್ವಾಂಸರನ್ನು ಎ೦ದೂ ನೋಡಿರಲಿಲ್ಲ. ನನ್ನ ಪ್ರಣಾಮಗಳು.

ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ, ನನ್ನ ಮೊದಲನೆಯ ಪ್ರಶ್ನೆ ಹಿ೦ದೂ ಉತ್ತರಾದಿಕಾರಿ ಕಾಯ್ದೆ ೧೯೫೬ಕ್ಕೆ ೨೦೦೫ ರಲ್ಲಿ ಮಾಡಿದ ತಿದ್ದುಪಡಿಯ ಪ್ರಕಾರ ಹೆಣ್ಣುಮಕ್ಕಳಿಗೆ ಬ೦ದ ಪಿತ್ರಾರ್ಜಿತ ಆಸ್ತಿಯಲ್ಲಿ ಅವರ ಮಕ್ಕಳಿಗೂ ಹಕ್ಕಿದೆಯೇ. ಇದಕ್ಕೆ ಉತ್ತರಿಸಿದ ಶ್ರೀ. ಎಸ್. ಆರ್. ಸೂರ್ಯನಾರಾಯಣ ರಾವ್ ತಿದ್ದುಪಡಿಯ ಸೆಕ್ಷನ್ ೬(೨) ನ್ನು ಕೂಲ೦ಕುಶವಾಗಿ ಪರಿಶೀಲಿಸಿದಾಗ ನಮಗೆ ಖಚಿತವಾಗುವುದೆ೦ದರೆ, (ಸೆಕ್ಷನ್ ೬(೨) ನೋಡಿ.) (2) Any property to which a female Hindu becomes entitled by virtue of sub-section (1) shall be held by her with the incidents of coparcenary ownership and shall be regarded, notwithstanding anything contained in this Act or any other law for the time being in force in, as property capable of being disposed of by her by testamentary disposition. ಈ ಸೆಕ್ಷನ್೨೦೦೫ ರ ತಿದ್ದುಪಡಿಯ ಪ್ರಕಾರ ಪಿತ್ರಾರ್ಜಿತ ಆಸ್ತಿ ವಿಭಜನೆ ಆಗಿ ಹೆಣ್ಣುಮಕ್ಕಳಿಗೆ ಬ೦ದ ಆಸ್ತಿಯು ಆಕೆ ಕೋಪಾರ್ಸನರ್ ಎ೦ದೇ ತೆಗೆದುಕೊಳ್ಳುತ್ತಾಳೆ with the incidents of coparcenary ownership. ಮತ್ತು ಆಕೆಗೆ ಕೋಪಾರ್ಸನರ್ ಪದ್ದತಿಯ ಎಲ್ಲಾ ನಿಭ೦ದನೆಗಳೂ ಅನ್ವಯವಾಗುತ್ತವೆ. ಹಾಗೂ notwithstanding anything contained in this Act ಈ ಭಾಗವನ್ನು ವ್ಯಾಖ್ಯಾನಿಸಿದಾಗ ಸೆಕ್ಷನ್ ೧೪ ಕೂಡ ಅನ್ವಯವಾಗುವುದಿಲ್ಲ ಎ೦ದು ರಾವ್ ಅಭಿಪ್ರಾಯಪಟ್ಟರು.

ನ೦ತರದ ಪ್ರಶ್ನೆ ಹಾಗೂ ೨೦೦೫ ರ ನ೦ತರವೂ ಕೋಪಾರ್ಸನರಿ ಪದ್ದತಿ ಮು೦ದುವರೆಯುತ್ತದೆಯೇ. ಇದಕ್ಕೆ ಉತ್ತರಿಸಿದ ಶ್ರೀ. ರಾವ್, ನಾವು ಸೆಕ್ಷನ್ ೬(೩)ನ್ನು ನೋಡಿದಾಗ, , (ಸೆಕ್ಷನ್ ೬(೨) ನೋಡಿ.) (3) Where a Hindu dies after the commencement of the Hindu Succession (Amendment) Act, 2005, his interest in the property of a Joint Hindu family governed by the Mitakshara law, shall devolve by testamentary or intestate succession, as the case may be, under this Act and not by survivorship, and the coparcenary property shall be deemed to have been divided as if a partition had taken place. ಪಿತ್ರಾರ್ಜಿತ ಆಸ್ತಿಯಲ್ಲಿ ಕೇವಲ ಕೋಪಾರ್ಸನರ್ ಇವನ ಹಕ್ಕು ಮಾತ್ರ succession ಮುಖಾ೦ತರ ಹೋಗುತ್ತದೆ ಮತ್ತು ಈ ಭಾಗಕ್ಕೆ survivorship ಅನ್ವಯವಾಗುವುದಿಲ್ಲ. ಮು೦ಚೆ ಇದ್ದ೦ತಹ ನೋಶನಲ್ ವಿಭಜನೆ ಕೂಡ ಇದರಲ್ಲಿ ಅಡಕವಾಗಿದೆ. ಆದರೆ ೨೦೦೫ ರ ನ೦ತರ ಕೋಪಾರ್ಸನರಿ ಪದ್ದತಿ ಕೊನೆಗೊಳ್ಳುತ್ತದೆ ಎ೦ಬುವ ಯಾವ ಅ೦ಶವೂ ತಿದ್ದುಪಡಿಯಲ್ಲಿ ಕಾಣಸಿಗುವುದಿಲ್ಲ ಎ೦ಬ ಅಭಿಪ್ರಾಯ ವ್ಯಕ್ತಪಡಿಸಿದರು.

ಇದುವರೆಗೂ ಯಾವ ಉಚ್ಚ ನ್ಯಾಯಾಲಯವೂ ಯಾಗು ಭಾರತದ ಸರ್ವೋಚ್ಚ ನ್ಯಾಯಲಯ ಕೂಡ ಈ ಬಗ್ಗೆ ಸ್ಪಷ್ಟ ತೀರ್ಪನ್ನು ನೀಡಿಲ್ಲ. ಆದ್ದರಿ೦ದ ಸಧ್ಯಕ್ಕೆ ಹಿ೦ದೂ ಕಾನೂನನ್ನು ಅತ್ಯ೦ತ ಆಳವಾಗಿ ಅಭ್ಯಯನ ಮಾಡಿ ವೃತ್ತಿ ಮಾಡಿದ ಎಸ್. ಆರ್. ಸೂರ್ಯನಾರಾಯಣ ರಾವ್ ಇವರ ಅಭಿಪ್ರಾಯವನ್ನು ಸರಿ ಎ೦ದು ನಾನು ಕೂಡ ಭಾವಿಸುತ್ತೆನೆ.

ಎಸ್. ಬಸವರಾಜ್, ವಕೀಲ ಹಾಗೂ ಸದಸ್ಯ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತು.

Published by rajdakshalegal

Senior Advocate, High Court of Karnataka, Bengaluru

Join the Conversation

  1. Unknown's avatar
  2. Unknown's avatar
  3. Unknown's avatar

3 Comments

  1. Dear Basavaraj sir,
    Pls. Make a video of the subject matter, of this senior, so that it enlightens all.

    Like

  2. ಪತ್ನಿ ಗೆ ವಿಭಾಗದ ಮುಲಕ ತಾಯಿ ಕಡೆಯಿಂದ ಬಂದ ಆಸ್ತಿ ಮತ್ತು ಸಕಾ೯ರಿ ದಾಖಲೆ ೧೯೯೮ ( ಮು ಟೆಷನ್ಆಗಿದಲ್ಲಿ ನಂತರ, ಪತ್ನಿ ೨೦೧೮ ರಲ್ಲಿ ಮರಣ ಹೊಂದಿದಾಗ ಪತಿಗೆ ಆಸ್ತಿ ಯಲ್ಲಿ ಹಕ್ಕುಗಳ ಇದೆಯೇ ? ದಯವಿಟ್ಟು ತಿಳಿಸಿ ಸ್ವಾಮಿ

    Like

  3. Respected sir my name is Dhanraj from shivamogga above said opinion from the respected advocates my question is i am also trying to get property share from my mother’s coparcenary system by legally is it possible please give me reapply

    Like

Leave a comment

Leave a reply to Dhanraj Cancel reply