
ಬಸವರಾಜ್ ಎಸ್. ಹಿರಿಯ ವಕೀಲರು.
ಭಾರತದಲ್ಲಿ ಕಾರ್ಮಿಕರು ಮತ್ತು ಉದ್ಯಮಗಳ ನಡುವಿನ ಸಂಘರ್ಷ ಬಹುಕಾಲದಿಂದ ನಡೆಯುತ್ತಿರುವ ವಿಷಯವಾಗಿದೆ. ಕಾರ್ಮಿಕರು ಉತ್ತಮ ವೇತನ, ಸಮಂಜಸವಾದ ಕೆಲಸದ ಸಮಯ, ಸುರಕ್ಷಿತ ಕೆಲಸದ ಪರಿಸರ ಮತ್ತು ಅನ್ಯಾಯಕರ ವಜಾಗೊಳಿಸುವಿಕೆಯಿಂದ ರಕ್ಷಣೆಯನ್ನು ಕೇಳಿದರೆ, ಉದ್ಯಮಗಳು ಉತ್ಪಾದಕತೆ, ಲಾಭದಾಯಕತೆ ಮತ್ತು ಕಾರ್ಯಕ್ಷಮತೆಯನ್ನು ಉಳಿಸಿಕೊಳ್ಳಲು ಹೆಚ್ಚು ಸ್ವಾತಂತ್ರ್ಯವನ್ನು ಬಯಸುತ್ತವೆ. ಈ ಹಿನ್ನೆಲೆದಲ್ಲಿ, ಕಾರ್ಮಿಕ ಹಕ್ಕುಗಳು ಮತ್ತು ಉದ್ಯಮಗಳ ಹಿತಾಸಕ್ತಿಗಳ ನಡುವೆ ಸಮತೋಲನ ಸಾಧಿಸುವುದು ಕಾನೂನು ವ್ಯವಸ್ಥೆಯ ಪ್ರಮುಖ ಗುರಿಯಾಗಿದೆ.
“ಕೈಗಾರಿಕೆ“ ಅ0ದರೆ ಏನು? ಯಾವ ಯಾವ ಚಟುವಟಿಕೆಗಳನ್ನು ಕೈಗಾರಿಕೆ ಎ0ದು ಕರೆಯಬಹುದು? ಎ0ಬ ಪ್ರಶ್ನೆ ದಶಕಗಳಿ0ದ ತೀರ್ಮಾನವಾಗದೆ ಉಳಿದಿದೆ. ಈ ವಿವಾದವನ್ನು ಅಂತಿಮವಾಗಿ ತೀರ್ಮಾನಿಸಲು ಸರ್ವೋಚ್ಚ ನ್ಯಾಯಾಲಯದ ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ವಾದಗಳನ್ನು ಕೇಳಿ ತನ್ನ ತೀರ್ಮಾನವನ್ನು ನೀಡಲಿದೆ.
ಮೇಲೆ ಹೇಳಿದ ಪ್ರಶ್ನೆ ಸರಳವಾಗಿ ಕ0ಡರೂ ಸರ್ವೋಚ್ಚ ನ್ಯಾಯಾಲಯದ ತೀರ್ಪು ಕೈಗಾರಿಕಾ ವಿವಾದ ಕಾಯಿದೆ ಹಾಗೂ ಭಾರತದ ಕಾರ್ಮಿಕ ನ್ಯಾಯಶಾಸ್ತ್ರದ ಮೇಲೆ ಮಹತ್ತರ ಪರಿಣಾಮ ಬೀರಲಿದೆ. ಯಾವ ಕೆಲಸದ ಸ್ಥಳಗಳು ಈ ಕಾನೂನಿನ ವ್ಯಾಪ್ತಿಗೆ ಬರುತ್ತವೆ, ಯಾವ ಉದ್ಯೋಗಿಗಳಿಗೆ ವೇತನ, ಕೆಲಸದ ಸಮಯ, ಮುಷ್ಕರ ಹಕ್ಕು, ಮತ್ತು ಅನಿಯಮಿತ ವಜಾಗೊಳಿಸುವಿಕೆಯಿಂದ ರಕ್ಷಣೆ ಸೇರಿದಂತೆ ಹೆಚ್ಚಿನ ಕಾನೂನುಬದ್ಧ ರಕ್ಷಣೆ ದೊರೆಯುತ್ತದೆ ಎಂಬುದೂ ನಿರ್ಧಾರವಾಗುತ್ತದೆ.
ಒ0ಬತ್ತು ನ್ಯಾಯಾದೀಶರು. (1) ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾ0ತ್, (2) ನ್ಯಾಯಮೂರ್ತಿ ಬಿ. ವಿ. ನಾಗರತ್ನ, (3) ನ್ಯಾಯಮೂರ್ತಿ ಪಿ. ಎಸ್. ನರಸಿ0ಹ (3) ನ್ಯಾಯಮೂರ್ತಿ ದೀಪಾ0ಕರ್ ದತ್ತಾ, (4) ನ್ಯಾಯಮೂರ್ತಿ ಉಜ್ಜಲ್ ಭುಯಾನ್, (5) ನ್ಯಾಯಮೂರ್ತಿ ಎಸ್. ಸಿ. ಶರ್ಮ, (6) ನ್ಯಾಯಮೂರ್ತಿ ಜೋಮಲ್ಯ ಬಾಕ್ಚಿ, (7) ನ್ಯಾಯಮೂರ್ತಿ ಅಲೋಕ್ ಅರಾಧೆ ಹಾಗೂ (8) ನ್ಯಾಯಮೂರ್ತಿ ವಿಪುಲ್ ಎಮ್ ಪಾ0ಚೋಲಿ.
ಸರ್ವೋಚ್ಚ ನ್ಯಾಯಾಲಯದ ಈ ಹಿ0ದೆ 1978ರಲ್ಲಿ ನೀಡಿದ್ದ ಮಹತ್ತರ ತೀರ್ಪನ್ನು ಮರುಪರಿಶೀಲಿಸಲಿದೆ.
1978ರ ತೀರ್ಪು ಏನು? ಬೆಂಗಳೂರು ಜಲ ಸರಬರಾಜು ಮತ್ತು ಒಳಚರಂಡಿ ಮಂಡಳಿ vs ಎ. ರಾಜಪ್ಪ ಈ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ನೀಡಿದ ತೀರ್ಪಿನಲ್ಲಿ “ಉದ್ಯಮ/ಕೈಗಾರಿಕೆ” ಎಂಬ ಪದವನ್ನು ವ್ಯಾಪಕವಾಗಿ ವ್ಯಾಖ್ಯಾನಿಸಲಾಗಿದೆ. ಅದರ ಪರಿಣಾಮವಾಗಿ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಧಾರ್ಮಿಕ/ಪರೋಪಕಾರಿ ಸಂಸ್ಥೆಗಳು ಮತ್ತು ಸರ್ಕಾರದ ಕಲ್ಯಾಣ ಇಲಾಖೆಗಳನ್ನು ಕೂಡ ಕೈಗಾರಿಕಾ ವಿವಾದ ಕಾಯಿದೆಯ ವ್ಯಾಪ್ತಿಗೆ ಒಳಪಡಿಸಲಾಗಿತ್ತು. ನ್ಯಾಯಮೂರ್ತಿ ಕೃಷ್ಣ ಅಯ್ಯರ್ ನೀಡಿದ ಬಹುಮತದ ಅಭಿಪ್ರಾಯದಲ್ಲಿ, ನ್ಯಾಯಾಲಯವು ಅತ್ಯಂತ ವ್ಯಾಪಕವಾದ, “ಕಾರ್ಮಿಕ-ಕೇಂದ್ರೀತ” ದೃಷ್ಟಿಕೋಣವನ್ನು ಅಳವಡಿಸಿಕೊಂಡಿತು.
ಸರ್ವೋಚ್ಚ ನ್ಯಾಯಾಲಯವು “ಉದ್ಯಮ/ಕೈಗಾರಿಕೆ” ಗುರುತಿಸಲು ‘ಮೂರು ವಿಧದ ಪರೀಕ್ಷೆ‘ ಮಾನದಂಡವನ್ನು ಸ್ಥಾಪಿಸಿತು. ಅದರ ಪ್ರಕಾರ, ಒಂದು ಸಂಸ್ಥೆ ಕೆಳಗಿನ ಅಂಶಗಳನ್ನು ಹೊಂದಿದ್ದರೆ ಅದನ್ನು ಉದ್ಯಮವೆಂದು ಪರಿಗಣಿಸಲಾಗುತ್ತದೆ: “ವ್ಯವಸ್ಥಿತ ಚಟುವಟಿಕೆ”, “ನಿಯೋಜಕ ಮತ್ತು ಉದ್ಯೋಗಿಗಳ ಸಹಕಾರದೊಂದಿಗೆ ಸಂಘಟಿತವಾಗಿರುವುದು”, ಹಾಗೂ “ಮಾನವೀಯ ಅಗತ್ಯಗಳು ಮತ್ತು ಆಶೆಗಳ ತೃಪ್ತಿಗಾಗಿ ಸರಕುಗಳು ಅಥವಾ ಸೇವೆಗಳ ಉತ್ಪಾದನೆ ಮತ್ತು/ಅಥವಾ ವಿತರಣೆ.” ಲಾಭದ ಉದ್ದೇಶದ ಕೊರತೆ ಅಥವಾ ಮೂಲಧನ ಹೂಡಿಕೆ ಇಲ್ಲದಿರುವುದು – ಈ ಕಾರಣಗಳಿ0ದ “ಉದ್ಯಮ/ಕೈಗಾರಿಕೆ” ಗುರುತಿಸಲು ಸಾದ್ಯವಿಲ್ಲ ಎ0ದು ಕೂಡ ಸರ್ವೋಚ್ಚ ನ್ಯಾಯಾಲಯವು ಹೇಳಿತ್ತು.
ಮೇಲೆ ಹೇಳಿದ ಮೂರು ತತ್ವಗಳನ್ನು ಅನ್ವಯಿಸಿ, ಧಾರ್ಮಿಕ/ಪರೋಪಕಾರಿ ಸಂಸ್ಥೆಗಳು, ಆಸ್ಪತ್ರೆಗಳು, ವಿಶ್ವವಿದ್ಯಾಲಯಗಳು, ದಾನಶೀಲ ಸಂಸ್ಥೆಗಳು ಮತ್ತು ಕೆಲವು ರಾಜ್ಯದ ಕಲ್ಯಾಣ ಚಟುವಟಿಕೆಗಳನ್ನೂ “ಉದ್ಯಮಗಳು” ಎಂದು ಸರ್ವೋಚ್ಚ ನ್ಯಾಯಾಲಯವು ತೀರ್ಮಾನಿಸಿತು. ಒಂದು ಸಂಸ್ಥೆ ಅನೇಕ ಚಟುವಟಿಕೆಗಳನ್ನು ನಡೆಸುತ್ತಿದ್ದರೆ, ಅದರ ಮುಖ್ಯ ಕಾರ್ಯವೇ ಕಾನೂನಿನಡಿ ಅದರ ಸ್ಥಾನಮಾನವನ್ನು ನಿರ್ಧರಿಸುತ್ತದೆ ಎ0ದು ಕೂಡ ತೀರ್ಪು ಹೇಳಿದೆ.
ಬೆಂಗಳೂರು ಜಲ ಸರಬರಾಜು ಮತ್ತು ಒಳಚರಂಡಿ ಮಂಡಳಿ vs ಎ. ರಾಜಪ್ಪ ಈ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ನೀಡಿದ ತೀರ್ಪಿನ ನ0ತರ ವ್ಯಾಪಕವಾಗಿ ವ್ಯಾಜ್ಯಗಳು ಹುಟ್ಟುಕೊ0ಡವು. ಹಲವಾರು ಪ್ರಕರಣಗಳಲ್ಲಿ ಉದ್ಯಮ/ಕೈಗಾರಿಕೆ ಎ0ದು ಗುರುತಿಸಲ್ಪಟ್ಟ ಸ0ಸ್ಥೆಗಳು ಹಾನಿಗೆ ಒಳಗಾದವು.
1982ರ ತಿದ್ದುಪಡಿ. ಮೇಲಿನ ಬೆಳವಣಿಗೆಗಳನ್ನು ಗಮನದಲ್ಲಿ ಇಟ್ಟುಕೊ0ಡು ಭಾರತೀಯ ಸಂಸತ್ತು 1982ರ ತಿದ್ದುಪಡಿಯ ಮೂಲಕ “ಉದ್ಯಮ” ಎಂಬ ಪದದ ವ್ಯಾಖ್ಯಾನವನ್ನು ಸೀಮಿತಗೊಳಿಸಲು ಪ್ರಯತ್ನಿಸಿತು. ಈ ತಿದ್ದುಪಡಿ ಮೂಲಕ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರದ ಸರ್ವಭೌಮ ಕಾರ್ಯಗಳು ಸೇರಿದಂತೆ ಹಲವು ಚಟುವಟಿಕೆಗಳನ್ನು ವಿಶೇಷವಾಗಿ ಹೊರತಾಗಿಸಲಾಯಿತು. ಆದರೆ ಈ ತಿದ್ದುಪಡಿಯನ್ನು ಜಾರಿಗೆ ತರಲೇ ಇಲ್ಲ. ಇದರ ಪರಿಣಾಮವಾಗಿ, 1978ರಲ್ಲಿ ಸರ್ವೋಚ್ಚ ನ್ಯಾಯಾಲಯವು ನೀಡಿದ ತೀರ್ಪಿನ ವ್ಯಾಖ್ಯಾನವೇ ಕಾನೂನಾಗಿ ಉಳಿಯಿತು.
ನ0ತರ ಬOದ ಹಲವಾರು ತೀರ್ಪುಗಳಲ್ಲಿ ನ್ಯಾಯಾಲಯಗಳು ವಿವಿದ ವ್ಯಾಖ್ಯಾನಗಳನ್ನು ನೀಡಿದವು. ಯಾವ ಸ0ಸ್ಥೆ ಕೈಗಾರಿಕೆ/ಉದ್ಯಮ ಎ0ದು ಘೋಷಿಸಬೇಕು ಎ0ಬ ಬಗ್ಗೆ ಜಿಜ್ನಾಸೆಗಳು ಹುಟ್ಟಿಕೊOಡವು.
ಸರ್ವೋಚ್ಚ ನ್ಯಾಯಾಲಯ ಉತ್ತರ ಪ್ರದೇಶ ಸರ್ಕಾರ vs ಜೈ ಬೀರ್ ಸಿ0ಘ್ ಈ ಪ್ರಕರಣದಲ್ಲಿ ಈ ವಿಚಾರದಲ್ಲಿ ಸ್ಪಷ್ಟತೆ ನೀಡಲು ಐದು ನ್ಯಾಯಮೂರ್ತಿಗಳ ಸಂವಿಧಾನ ಪೀಠಕ್ಕೆ ಒಪ್ಪಿಸಿತು.
ಐದು ನ್ಯಾಯಮೂರ್ತಿಗಳ ಪೀಠವು 1978ರ ತೀರ್ಪಿನ ಬಗ್ಗೆ ಸಂಶಯಗಳನ್ನು ವ್ಯಕ್ತಪಡಿಸಿ, “ಉದ್ಯಮ” ಎಂಬ ಪದದ ಅತಿಯಾಗಿ ವ್ಯಾಪಕವಾದ ವ್ಯಾಖ್ಯಾನವು ಖಾಸಗಿ ಉದ್ಯಮಗಳಿಗೆ ಮಾರಕವಾಗಬಹುದು ಎಂದು ಅಭಿಪ್ರಾಯಪಟ್ಟಿತು. ರಾಜ್ಯವು ಕೈಗೊಳ್ಳುವ ಕಲ್ಯಾಣ ಚಟುವಟಿಕೆಗಳನ್ನೂ ಕೂಡ ಕೈಗಾರಿಕಾ ಕಾನೂನಿನ ವ್ಯಾಪ್ತಿಗೆ ತರಬೇಕೇ ಎಂಬುದನ್ನೂ ಪ್ರಶ್ನಿಸಿತು. 1978ರ ತೀರ್ಪು ಏಳು ನ್ಯಾಯಮೂರ್ತಿಗಳಿಂದ ನೀಡಲ್ಪಟ್ಟಿತ್ತು ಎಂಬುದನ್ನು ಗಮನಿಸಿ, ಐದು ನ್ಯಾಯಮೂರ್ತಿಗಳ ಪೀಠವು ಈ ವಿಷಯವನ್ನು ಇನ್ನೂ ದೊಡ್ಡ ಪೀಠಕ್ಕೆ ಒಪ್ಪಿಸಿತು. ಬಳಿಕ 2017ರಲ್ಲಿ, ಏಳು ನ್ಯಾಯಮೂರ್ತಿಗಳ ಪೀಠವು ಈ ಪ್ರಕರಣವನ್ನು ಅಂತಿಮ ನಿರ್ಣಯಕ್ಕಾಗಿ ಒಂಬತ್ತು ನ್ಯಾಯಮೂರ್ತಿಗಳ ಪೀಠದ ಮುಂದೆ ಇಡಲು ನಿರ್ದೇಶಿಸಿತು.
ಸರ್ವೋಚ್ಚ ನ್ಯಾಯಾಲಯದ ಮುOದೆ ಇರುವ ಪ್ರಶ್ನೆಗಳು.
1978ರ ತೀರ್ಪು ಇಂದಿಗೂ ಸರಿಯಾದ ಕಾನೂನೇ.? ಅಧಿಸೂಚನೆಗೊಳ್ಳದ 1982ರ ತಿದ್ದುಪಡಿ ಪರಿಣಾಮವೇನು. ಕಾರ್ಮಿಕ ಕಾನೂನುಗಳನ್ನು ಏಕೀಕರಿಸಲು ಸಂಸತ್ತು ಅಂಗೀಕರಿಸಿದರೂ ಇನ್ನೂ ಸಂಪೂರ್ಣ ಜಾರಿಗೆ ಬರದಿರುವ ಕೈಗಾರಿಕಾ ಸಂಬಂಧಗಳ ಸಂಹಿತೆ 2020 ಪರಿಣಾಮ ಏನು.?
ಸರ್ಕಾರದ ಇಲಾಖೆಗಳು ಕೈಗೊಳ್ಳುವ ಸಾಮಾಜಿಕ ಕಲ್ಯಾಣ ಚಟುವಟಿಕೆಗಳು ಮತ್ತು ಯೋಜನೆಗಳನ್ನು ಕೈಗಾರಿಕಾ ಚಟುವಟಿಕೆಗಳೆಂದು ಪರಿಗಣಿಸಬಹುದೇ.
“ರಾಜ್ಯದ ಸರ್ವಭೌಮ ಕಾರ್ಯಗಳು” ಎಂದರೇನು? ಈ ಚಟುವಟಿಕೆಗಳನ್ನು “ಉದ್ಯಮ” ಎಂಬ ಪರಿಧಿಯಿಂದ ಸಂಪೂರ್ಣವಾಗಿ ಹೊರಗಿಡಬೇಕೆ.?
ಸರ್ವೋಚ್ಚ ನ್ಯಾಯಾಲಯದ ಮು0ದೆ ವಾದ ಮ0ಡಿಸಿದ ಪ್ರಸಿದ್ದ ವಕೀಲರು.
ಭಾರತದ ಅಟಾರ್ನಿ ಜನರಲ್ ಆರ್. ವೆ0ಕಟರಮಣಿ, ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ. ಎಮ್. ನಟರಾಜ್,
ಹಿರಿಯ ವಕೀಲರಾದ ಶೇಕರ್ ನಫಾಡೆ, ನ್ಯಾಯಾಲಯ ನೇಮಿಸಿದ ಜೆ.ಪಿ. ಕಾಮ, ಹಿರಿಯ ವಕೀಲರಾದ ಇ0ದಿರಾ ಜೈಸಿ0ಘ್, ಸಿ.ಯು. ಸಿ0ಘ್, ಗೋಪಾಲ್ ಶ0ಕರನಾರಾಯಣ್, ವಿಜಯ್ ಹನ್ಸಾರಿಯ, ಜೈನಾ ಕೊಥಾರಿ.