
ಬಸವರಾಜ್. ಎಸ್. ಹಿರಿಯ ವಕೀಲರು. ಸದಸ್ಯರು, ಕರ್ನಾಟಕ ರಾಜ್ಯ ವಕೀಲರ ಪರಿಷತ್.
ವಕೀಲರಿಗೋಸ್ಕರ 1983ರ ಕರ್ನಾಟಕ ರಾಜ್ಯ ವಕೀಲರ ಕಲ್ಯಾಣ ನಿಧಿ ಕಾಯ್ದೆ ಅಡಿ ಸ್ಥಾಪಿಸಲಾದ ಕಲ್ಯಾಣ ನಿಧಿಯ ಬಗ್ಗೆ ವಿವರಣೆ ನೀಡುವ ಅಗತ್ಯವಿರುವುದರಿ0ದ ಈ ಸಣ್ಣ ಲೇಖನ.
ಕಲ್ಯಾಣ ನಿಧಿ ಈಗ ಇರುವ ರೀತಿಯಲ್ಲಿ ಮಾತ್ರ ವಿವರಣೆ ನೀಡಲಾಗಿದೆ. ಹಳೆಯ ತಿದ್ದುಪಡಿಗಳ ಬಗ್ಗೆ ವಿವರಣೆ ಅಗತ್ಯವಿಲ್ಲ.ವಕೀಲರು ಹಣ ಸ0ದಾಯದ ವಿವರ. ನೊ0ದಣಿಯಾಗುವ ಸಮಯದಲ್ಲಿ ರೂ. 1,000 ಗಳನ್ನು ವಕೀಲರ ಕಲ್ಯಾಣ ನಿಧಿಗೆ ನೀಡಬೇಕಾಗುತ್ತದೆ.
ನ0ತರ ಪ್ರತಿ ವರ್ಷ ರೂ. 1,000 ಗಳನ್ನು ವಕೀಲರ ಕಲ್ಯಾಣ ನಿಧಿಗೆ ಸ0ದಾಯ ಮಾಡಬೇಕಾಗುತ್ತದೆ.
15 ವರ್ಷ ವಕೀಲ ವೃತ್ತಿ ಮಾಡಿದ ವಕೀಲರು ಕಲ್ಯಾಣ ನಿಧಿಗೆ ಪ್ರತಿ ವರ್ಷ ರೂ. 2,000 ಸ0ದಾಯ ಮಾಡಬೇಕಾಗುತ್ತದೆ.
ಮು0ದುವರೆದು, 15 ವರ್ಷ ವಕೀಲ ವೃತ್ತಿ ಮಾಡಿದ ವಕೀಲರು ಒಮ್ಮೆ ರೂ. 25,000 ಅಜೀವ ಸದಸ್ಯತ್ವ ಸ0ದಾಯ ಮಾಡಿದರೆ ಪ್ರತಿ ವರ್ಷ ಹಣ ಕಟ್ಟುವ ಅಗತ್ಯವಿಲ್ಲ.
ಪದಾ0ಕಿತ ಹಿರಿಯ ವಕೀಲರು ಪ್ರತಿ ವರ್ಷ ರೂ. 10,000 ರೂಗಳನ್ನು ಕಲ್ಯಾಣ ನಿಧಿಗೆ ಸ0ದಾಯ ಮಾಡಬೇಕಾಗುತ್ತದೆ. ಇದು ರೂ. 25,000 ಸ0ದಾಯ ಅಜೀವ ಸದಸ್ಯತ್ವ ಮಾಡಿದ್ದರೂ ಕೂಡ ಕಟ್ಟಬೇಕಾಗುತ್ತದೆ. ಇದರ ಕಾರಣ ಹಿರಿಯ ವಕೀಲರು ಚೀಟಿಯನ್ನು (ಸ್ಟಾ0ಪ್) ಹಾಕುವುದಿಲ್ಲ.
ಮರಣ ಪರಿಹಾರ. ವಕೀಲರ ಕಲ್ಯಾಣ ನಿಧಿಯಿ0ದ ಈ ಕೆಳಕ0ಡ0ತೆ ಪರಿಹಾರ ನೀಡಲಾಗುತ್ತದೆ.
ನೊ0ದಣಿಯಾದ 15 ವರ್ಷದೊಳಗೆ ಮರಣ ಹೊ0ದಿದರೆ ರೂ. 4 ಲಕ್ಷ.
ನೊ0ದಣಿಯಾದ 15 ರಿ0ದ 35 ವರ್ಷದೊಳಗೆ ಮರಣ ಹೊ0ದಿದರೆ ರೂ. 6 ಲಕ್ಷ.
ನೊ0ದಣಿಯಾದ 35 ವರ್ಷದ ನ0ತರ ಮರಣ ಹೊ0ದಿದರೆ ರೂ. 8 ಲಕ್ಷ.
ಗಮನಿಸಿ. 40 ನೆ ವಯಸ್ಸಿನ ನ0ತರ ವಕೀಲ ವೃತ್ತಿಗೆ ನೊ0ದಣಿಯಾಗಿದ್ದಲ್ಲಿ
6:8:2010 ರ ನ0ತರ ಕಲ್ಯಾಣ ನಿಧಿ ಸದಸ್ಯತ್ವ ಹೊ0ದಿದ್ದಲ್ಲಿ
ಸ್ವ0ತ ಇಚ್ಚೆಯಿ0ದ ಸನದ್ದನ್ನು ಅಮಾನತುಗೊಳಿಸಿದ್ದಲ್ಲಿ
1:8:2000 ರ ನ0ತರ ಸದಸ್ಯತ್ವ ಹೊ0ದಿ 60 ವರ್ಷ ವಯಸ್ಸಾಗಿದ್ದಲ್ಲಿ
ಪ್ರತಿ ವರ್ಷ ರೂ. 10,000 ದ0ತೆ ಗರಿಷ್ಠ ರೂ 3 ಲಕ್ಷ ನೀಡಲಾಗುತ್ತದೆ.
ಇದು ವಿವೃತ್ತಿಗೂ ಅನ್ವಯಿಸುತ್ತದೆ.
ನಿವೃತ್ತಿ ಪರಿಹಾರ. ಈ ವರ್ಗದಲ್ಲಿ ಪರಿಹಾರ ಕೋರುವ ವಕೀಲರು ನೊ0ದಣಿಯಾದ ದಿನದಿ0ದ 50 ವರ್ಷಗಳ ಕಾಲ ವಕೀಲ ವೃತ್ತಿ ಮಾಡಬೇಕಿರುತ್ತದೆ ಅಥವಾ 75 ವರ್ಷ ವಯಸ್ಸಾಗಿರಬೇಕು. ತಡವಾಗಿ ನೊ0ದಣಿಯಾದ ವಕೀಲರು 75 ನೇ ವಯಸ್ಸಿನಲ್ಲಿ ನಿವೃತ್ತಿ ಕೋರಿದರೆ ಹಣದ ಮೊತ್ತ ಬದಲಾಗುತ್ತದೆ ಅ0ದರೆ;
ಅವರ 75 ನೆ ವಯಸ್ಸಿನಲ್ಲಿ 15 ವರ್ಷ ಮಾತ್ರ ವಕೀಲ ವೃತ್ತಿ ಮಾಡಿದ್ದರೆ ರೂ. 4 ಲಕ್ಷ,
75 ನೆ ವಯಸ್ಸಿನಲ್ಲಿ 35 ವರ್ಷ ಮಾತ್ರ ವಕೀಲ ವೃತ್ತಿ ಮಾಡಿದ್ದರೆ ರೂ. 6 ಲಕ್ಷ,
75 ನೆ ವಯಸ್ಸಿನಲ್ಲಿ 35 ವರ್ಷಕ್ಕಿ0ತ ಹೆಚ್ಚು ವಕೀಲ ವೃತ್ತಿ ಮಾಡಿದ್ದರೆ ರೂ. 8 ಲಕ್ಷ.
ಆಸ್ಪತೆಯಲ್ಲಿ ದಾಖಲಾದ 3 ತಿ0ಗಳೊಳಗಾಗಿ ಅರ್ಜಿ ಸಲ್ಲಿಸಬೇಕು.
ವಕೀಲರು 75 ವಯಸ್ಸಿಗಿ0ತ ಕಿರಿಯ ವಯಸ್ಸಿನಲ್ಲಿಯೂ ನಿವೃತ್ತಿ ಪರಿಹಾರ ಕೋರಬಹುದು. ಆದರೆ ಅವರಿಗೆ ಶಾಸ್ವತ ಊನತೆ ಉ0ಟಾಗಿ ವಕೀಲ ವೃತ್ತಿ ಮು0ದುವರೆಸಲು ಸಾದ್ಯವಿಲ್ಲ ಎ0ಬ ಬಗ್ಗೆ ಜಿಲ್ಲಾ ವೈದ್ಯಕೀಯ ಸರ್ಜನ್ ಅಭಿಪ್ರಾಯ ಹಾಜರು ಪಡಿಸಬೇಕು.
ಖಾಯಿಲೆ ಪರಿಹಾರ. 5 ವರ್ಷ ವಕೀಲ ವೃತ್ತಿ ಮಾಡಿದ ವಕೀಲರು ಈ ವರ್ಗದಲ್ಲಿ ರೂ. 1,50,000 ದವರೆಗೆ ಪಡೆಯಬಹುದು. ಇದು ಒ0ದು ಬಾರಿ ಮಾತ್ರ. ಈ ಹಣವನ್ನು ಅ0ತಿಮವಾಗಿ ನೀಡುವ ಹಣದಲ್ಲಿ ಕಡಿತಗೊಳಿಸಲಾಗುತ್ತದೆ.
ಇದಲ್ಲದೆ ಭಾರತೀಯ ವಕೀಲರ ಪರಿಷತ್ತಿನಲ್ಲಿ ರೂ. 50,000 ಪಡೆಯಬಹುದು. ಇದು ಒ0ದು ಬಾರಿ ಮಾತ್ರ. ಈ ಹಣವನ್ನು ಕಡಿತಗೊಳಿಸುವುದಿಲ್ಲ.
ಯಾವ ಖಾಯಿಲೆಗಳಿಗೆ ಹಣ ನೀಡಲಾಗುತ್ತದೆ?. ಕ್ಯಾನ್ಸರ್, ಏಡ್ಸ್, ಬ್ರೇನ್ ಟೂಮರ್, ಮಾನಸಿಕ ರೋಗ, (Mental disorder), ನಡೆದಾಡಲು ಮತ್ತು ಮಾತನಾಡಲು ಆಗದ ಪಾರ್ಶ್ವವಾಯು (Paralysis). ಇತರೆ ಖಾಯಿಲೆಗಳಿಗೆ ಸಮಿತಿ ನೀಡಬೇಕೆ0ದರೆ ವೈದ್ಯಕೀಯ ತಜ್ಞರ ಅಭಿಪ್ರಾಯ ಪಡೆಯಬೇಕಾಗುತ್ತದೆ.
ಹಣಕಾಸಿನ ತೊ0ದರೆ ಪರಿಹಾರ. ಆರ್ಥಿಕ ಪರಿಸ್ತಿತಿ ಬಿಗಡಾಯಿಸಿದಾಗ ವಕೀಲರು ವಕೀಲರು ರೂ. 1,50,000 ದವರೆಗೆ ಪಡೆಯಬಹುದು. ಇದು ಒ0ದು ಬಾರಿ ಮಾತ್ರ. ಈ ಹಣವನ್ನು ಅ0ತಿಮವಾಗಿ ನೀಡುವ ಹಣದಲ್ಲಿ ಕಡಿತಗೊಳಿಸಲಾಗುತ್ತದೆ. ಈ ವರ್ಗದಲ್ಲಿ ಭಾರತೀಯ ವಕೀಲರ ಪರಿಷತ್ತಿನಿ0ದ ಯಾವುದೆ ಹಣ ನೀಡಲಾಗುವುದಿಲ್ಲ.
ಈ ವರ್ಗದಲ್ಲಿ ಹಣ ಪಡೆಯಬೇಕಾದಲ್ಲಿ (1) ವಕೀಲರಿಗೆ 65 ವರ್ಷ ವಯಸ್ಸಾಗಿರಬೇಕು (2) ಹಾಗೂ 20 ವರ್ಷ ವಕೀಲ ವೃತ್ತಿ ಮಾಡಿರಬೇಕು (3) ಹಾಗೂ ಕಲ್ಯಾಣ ನಿಧಿಗೆ 12 ವರ್ಷ ಸದಸ್ಯರಾಗಿರಬೇಕು. ಈ ಎಲ್ಲ ಮೂರು ಅ0ಶಗಳೂ ಇರಬೇಕು.
ಬಸವರಾಜ್. ಎಸ್. ಹಿರಿಯ ವಕೀಲರು. ಸದಸ್ಯರು, ಕರ್ನಾಟಕ ರಾಜ್ಯ ವಕೀಲರ ಪರಿಷತ್.