ಹಿ0ದೂ ಮಹಿಳೆಯರ ಆಸ್ತಿ ಹಕ್ಕು ಕಾಯಿದೆಗಳು 1933 ಹಾಗೂ 1937 – ಒ0ದು ವಿಷ್ಲೇಶಣೆ.

ಎಸ್. ಬಸವರಾಜ್, ಹಿರಿಯವಕೀಲರು, ಬೆ0ಗಳೂರು

ಕರ್ನಾಟಕ ಉಚ್ಚನ್ಯಾಯಾಲಯವು, (ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ನ್ಯಾಯಮೂರ್ತಿ ಶಿವಶಂಕರೇಗೌಡ), ತಾರೀಖು 30 ಜನವರಿ 2025 ರ0ದು ನೀಡಿದ ತೀರ್ಪಿನಲ್ಲಿ (ಭೀಮಗೌಡ ರುದ್ರಗೌಡ ಪಾಟೀಲ್ ಮತ್ತು ಮತ್ತೊಬ್ಬರು ವಿರುದ್ದ ಪ್ರೀತಿ ರಾಮಗೌಡ ಪಾಟೀಲ್ RFA 100091/2018) ಹಿ0ದೂ ಮಹಿಳೆಯರ ಆಸ್ತಿ ಹಕ್ಕು ಕಾಯಿದೆ 1937 ರ ಬಗ್ಗೆ ಚರ್ಚೆ ಮಾಡಿದೆ. ಹಿ0ದೂ ಮಹಿಳೆಯರ ಆಸ್ತಿ ಹಕ್ಕು ಕಾಯಿದೆ ಬಗ್ಗೆ ವಿಷ್ಲೇಶಣೆ ಮಾಡುವುದು ಈ ಲೇಖನದ ಉದ್ದೇಶ. 


ಭಾರತದಲ್ಲಿ ಮಹಿಳೆಯರ ಆಸ್ತಿ ಹಕ್ಕಿನ ವಿಕಾಸ, ಮಹಿಳೆಯರ ಪಾತ್ರ ಮತ್ತು ಹಕ್ಕುಗಳ ಬದಲಾವಣೆಯನ್ನು ಹಲವಾರು ಮಹತ್ವದ ಕಾನೂನು ಘಟ್ಟಗಳಿಂದ ಗುರುತಿಸಲಾಗಿದೆ. ಆಸ್ತಿ ಹಕ್ಕಿನಲ್ಲಿ ಲಿಂಗ ಸಮಾನತೆಯತ್ತ ಸಾಗುವ ಪ್ರಗತಿಯ ಪಥವು ಹಂತ ಹಂತವಾಗಿ ನಡೆದ ಕಾನೂನು ಪರಿಷ್ಕರಣೆಗಳ ಮೂಲಕ ರೂಪುಗೊಂಡಿದೆ. ಇದರಲ್ಲಿ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಅಂಶಗಳ ಪ್ರಭಾವವಿತ್ತು. 


ಬ್ರಿಟೀಷ ಕಾಲಕ್ಕೂ ಮುನ್ನ ಭಾರತೀಯ ಸಮಾಜವು ಸಂಪ್ರದಾಯಬದ್ಧ ಕಾನೂನುಗಳನ್ನು ಅನುಸರಿಸುತ್ತಿತ್ತು ಮತ್ತು ಅವುಗಳಡಿಯಲ್ಲಿ ಮಹಿಳೆಯರಿಗೆ ಸಮಾನ ಆಸ್ತಿ ಹಕ್ಕುಗಳನ್ನು ಒದಗಿಸಲಾಗಿರಲಿಲ್ಲ. ಹಿಂದೂ ಸಮಾಜದಲ್ಲಿ ಮಹಿಳೆಯರು ಸಾಮಾನ್ಯವಾಗಿ ಕುಟುಂಬದ ಪುರುಷ ಸದಸ್ಯರ ಅವಲಂಬಿತರಾಗಿ ಆಸ್ತಿಯ ಮೇಲಿನ ನಿಯಂತ್ರಣದ ಹಕ್ಕುಗಳನ್ನು ಹೊ0ದಿದ್ದರು. ಬ್ರಿಟಿಷ್ ಸಮಯದ ಕಾನೂನುಗಳು ಕೆಲವು ಬದಲಾವಣೆಗಳನ್ನು ತಂದಿದ್ದರೂ ಮಹಿಳೆಯರಿಗೆ ಸಂಪೂರ್ಣ ಆಸ್ತಿ ಹಕ್ಕು ನೀಡುವಲ್ಲಿ ಸಫಲವಾಗಲಿಲ್ಲ.


ಮೈಸೂರು ಹಿಂದೂ ಕಾನೂನು ಮಹಿಳೆಯರ ಹಕ್ಕುಗಳ ಅಧಿನಿಯಮ, 1933. ಈ ಅಧಿನಿಯಮವು 1 ಜನವರಿ 1934 ರಿ0ದ ಜಾರಿಗೆ ಬ0ದು ಮಹಿಳೆಯರಿಗೆ ಕುಟುಂಬದ ಆಸ್ತಿಯಲ್ಲಿ ಹಕ್ಕನ್ನು ನೀಡಿದ ಮೊದಲ ಕಾನೂನು ಆಗಿತ್ತು. ಅಧಿನಿಯಮದ 8ನೇ ವಿಭಾಗದ ಪ್ರಕಾರ ಸಂಯುಕ್ತ ಕುಟುಂಬದ ಆಸ್ತಿ ವಿಭಜನೆಯ ಸಂದರ್ಭದಲ್ಲಿ, ತಂದೆ ಮತ್ತು ಪುತ್ರ(ರು) ನಡುವಿನ ಹಂಚಿಕೆಯಲ್ಲಿ, ಅವರ ತಾಯಿ, ಅವಿವಾಹಿತ ಪುತ್ರಿಯರು, ಮತ್ತು ಅವರ ಮೃತ ಅವಿಭಕ್ತ ಪುತ್ರ ಹಾಗೂ ಸಹೋದರರ ಪತ್ನಿಗಳು ಮತ್ತು ಅವಿವಾಹಿತ ಪುತ್ರಿಯರು ಸಹ ಅವರೊಂದಿಗೆ ಪಾಲುಗಾರರಾಗಲು ಅರ್ಹರಾಗಿದ್ದರು. ಹಾಗೆಯೇ, ಸಹೋದರರ ನಡುವಿನ ಕುಟುಂಬ ಆಸ್ತಿ ವಿಭಜನೆಯ ಸಂದರ್ಭದಲ್ಲೂ ಅವರ ತಾಯಿ, ಅವಿವಾಹಿತ ಸಹೋದರಿಯರು, ಮತ್ತು ಮೃತ ಅವಿಭಕ್ತ ಸಹೋದರರ ವಿಧವೆಯರು ಮತ್ತು ಅವಿವಾಹಿತ ಪುತ್ರಿಯರು ಸಹ ಅವರೊಂದಿಗೆ ಪಾಲುಗಾರರಾಗಲು ಅರ್ಹರಾಗಿದ್ದರು. 


ಕುಟು0ಬದ ಆಸ್ತಿಯು ಏಕಮಾತ್ರ ಕೋಪಾರ್ಸನರ್ ವ್ಯಕ್ತಿಗೆ ಬ0ದಾಗಲೂ ಮಹಿಳೆಗೆ ಮೇಲೆ ಹೇಳಿದ ಹಕ್ಕು ದೊರಕಿತ್ತು. 


ಕುಟು0ಬದ ಆಸ್ತಿಯಲ್ಲಿ ಗ0ಡನಿಗೆ ದೊರಕಬಹುದಾದ ಆಸ್ತಿಯಲ್ಲಿ ಅರ್ಧ ಪಾಲಿಗೆ ವಿಧವೆ ಹಾಗೂ ಮಗನಿಗೆ ದೊರಕಬಹುದಾದ ಆಸ್ತಿಯಲ್ಲಿ ಅರ್ದ ಪಾಲಿಗೆ ತಾಯಿ ಅರ್ಹಳಾಗಿದ್ದರು. 


1933ರ ಹಿಂದೂ ಕಾನೂನು ಮಹಿಳೆಯರ ಹಕ್ಕುಗಳ ಅಧಿನಿಯಮ ಜಾರಿಗೆ ಬರುವ ತನಕ, ಮೈಸೂರು ಪ್ರಾ0ತದಲ್ಲಿ ಮಹಿಳೆಗೆ ಸಂಯುಕ್ತ ಹಿಂದೂ ಕುಟುಂಬದ ಆಸ್ತಿಯಲ್ಲಿ ಪಾಲು ಪಡೆಯುವ ಹಕ್ಕು ಇರಲಿಲ್ಲ. ಸಂಯುಕ್ತ ಕುಟುಂಬದಲ್ಲಿ ಹಿಂದೂ ಮಹಿಳೆಯ ಹಕ್ಕುವನ್ನು ಕೇವಲ ಜೀವನೋಪಾಯ, ವಾಸಸ್ಥಳ ಮತ್ತು ವಿವಾಹ ಖರ್ಚುಗಳಿಗೆ ಮಾತ್ರ ಸೀಮಿತಗೊಳಿಸಲಾಗಿತ್ತು. ಈ ಅಧಿನಿಯಮವು ಮೊದಲ ಬಾರಿಗೆ ಮಹಿಳೆಯರ ಹಕ್ಕುಗಳನ್ನು ವಿಸ್ತರಿಸುವ ಪ್ರಮುಖ ಕಾಯಿದೆಯಾಗಿತ್ತು. (ನಾಗೇ0ದ್ರ ಪ್ರಸಾದ್ ವಿರುದ್ದ ಕೆ0ಪನ0ಜಮ್ಮ AIR 1968 SC 209) 


ಈ ನಿಯಮವು ಮಹಿಳೆಯರಿಗೆ ಕುಟುಂಬದ ಆಸ್ತಿಯಲ್ಲಿ ಸಮಾನ ಪಾಲು ಪಡೆಯಲು ಅವಕಾಶ ನೀಡಿದ ಪ್ರಮುಖ ಕಾನೂನು ಆಗಿದ್ದರೂ ಕುಟು0ಬದಲ್ಲಿ ವಿಭಜನೆ ಆದಾಗ ಮಾತ್ರ ಮಹಿಳೆ ತನ್ನ ಹಕ್ಕನ್ನು ಪಡೆಯಬಹುದಿತ್ತು. ಮಹಿಳೆ ಬದುಕಿರುವವರೆಗೂ ಕುಟು0ಬದಲ್ಲಿ ಆಸ್ತಿ ವಿಭಜನೆ ಆಗದ ಸನ್ನಿವೇಶದಲ್ಲಿ ಆಕೆಗೆ ಆಸ್ತಿಯ ಮೇಲೆ ಯಾವ ಹಕ್ಕೂ ಇರಲಿಲ್ಲ. 


ಆದರೆ 1933 ರ ಕಾನೂನಿನಲ್ಲಿ ಮಹಿಳೆಗೆ ಕೇವಲ ಜೀವಿತ ಕಾಲದವರೆಗೆ ಸೀಮಿತ ಹಕ್ಕು ಇತ್ತು. ಆಕೆ ಈ ಆಸ್ತಿಗಳ ಮೇಲೆ ಸ0ಪೂರ್ಣ ಹಕ್ಕು ಹೊ0ದಿರಲಿಲ್ಲ. ಮಹಿಳೆ ಕಾಲವಾದ ನ0ತರ ಆಸ್ತಿಯು ಮರಳಿ ಮೂಲ ಒಡೆತನಕ್ಕೆ ಸೇರುತ್ತಿತ್ತು. 1956 ಹಿ0ದೂ ಉತ್ತರಾದಿಕಾರದ ಕಾನೂನು ಜಾರಿಯಾದ ನ0ತರ ವಿಭಾಗ 14 ರ ಪ್ರಕಾರ ಈ ಸೀಮಿತ ಹಕ್ಕು ಸ0ಪೂರ್ಣ ಒಡೆತನಕ್ಕೆ ಮಾರ್ಪಾಟಾಯಿತು. ಇದರ ಬಗ್ಗೆ ಮು0ದಿನ ಪುಟಗಳಲ್ಲಿ ಚರ್ಚೆ ಮಾಡಿದ್ದೇನೆ. 


ಹಿಂದೂ ಮಹಿಳೆಯರ ಆಸ್ತಿ ಹಕ್ಕುಗಳ ಅಧಿನಿಯಮ, 1937. ಭಾರತದ ಮಟ್ಟದಲ್ಲಿ, ಇದು ಮಹಿಳೆಯರ ಆಸ್ತಿ ಹಕ್ಕುಗಳ ಬಗ್ಗೆ ಗಮನ ನೀಡಿದ ಮೊದಲ ಕಾನೂನು ಕ್ರಮಗಳಲ್ಲಿ ಒಂದಾಗಿತ್ತು. ಈ ಅಧಿನಿಯಮವು ಹಿಂದೂ ಮಹಿಳೆಯರಿಗೆ ಆಸ್ತಿ ಪರಂಪರೆಗೆ ಹಕ್ಕುದಾರರಾಗುವ ಅವಕಾಶ ನೀಡಿತು. ಈ ಕಾನೂನು 14 ಏಪ್ರಿಲ್ 1937 ರಿ0ದ ಜಾರಿಗೆ ಬ0ದಿತು.  


1937ರ ಕಾನೂನಿನ ಅಡಿಯಲ್ಲಿ ವಿಧವೆಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ವಿಧವೆಯು ತನ್ನ ಅಧಿಕಾರದಿ0ದ ಕುಟು0ಬದ ಆಸ್ತಿಯಲ್ಲಿ ಭಾಗ ಕೇಳಬಹುದಿತ್ತು. 1933 ರ ಕಾನೂನಿಗೆ ಇದು ಭಿನ್ನವಾಗಿದ್ದು ವಿಧವೆಯು ಕುಟು0ಬದ ಆಸ್ತಿ ವಿಭಜನೆವರೆಗೆ ಕಾಯಬೇಕಾಗಿರಲಿಲ್ಲ. ಆಕೆ ತನ್ನ ಭಾಗವನ್ನು ಕಾನೂನು ಮುಖಾ0ತರ ಪಡೆಯಬಹುದಿತ್ತು. 


ಆದರೆ 1937ರ ಕಾನೂನು ಕೂಡ 1933 ರ ಕಾನೂನಿನ ರೀತಿ ಮಹಿಳೆಗೆ ಕೇವಲ ಜೀವಿತ ಕಾಲದವರೆಗೆ ಸೀಮಿತ ಹಕ್ಕನ್ನು ಕೊಟ್ಟಿತ್ತು.  ಆಕೆ ಈ ಆಸ್ತಿಗಳ ಮೇಲೆ ಸ0ಪೂರ್ಣ ಹಕ್ಕು ಹೊ0ದಿರಲಿಲ್ಲ. ಮಹಿಳೆ ಕಾಲವಾದ ನ0ತರ ಆಸ್ತಿಯು ಮರಳಿ ಮೂಲ ಒಡೆತನಕ್ಕೆ ಸೇರುತ್ತಿತ್ತು. 


ಹಿಂದೂ ಉತ್ತರಾಧಿಕಾರ ಅಧಿನಿಯಮ, 1956 ಜಾರಿಯಾದ ನ0ತರದ ಬದಲಾವಣೆ. ಹಿಂದೂ ಉತ್ತರಾಧಿಕಾರ ಅಧಿನಿಯಮವು 7 ಜೂನ್ 1956 ರಿ0ದ ಜಾರಿಗೆ ಬ0ದಿತು. ಈ ಅಧಿನಿಯಮವು ಹಿಂದೂ ವ್ಯಕ್ತಿಗತ ಕಾನೂನುಗಳನ್ನು ಸಂಹಿತೀಕರಿಸಿ ಮತ್ತು ಸುಧಾರಿಸಿ, ಆಸ್ತಿ ಪರಂಪರೆಯ ಸಂಬಂಧಿತ ನಿಯಮಗಳನ್ನು ಸ್ಥಿರಗೊಳಿಸಿತು, ಹಾಗೆಯೇ ಮಹಿಳೆಯರಿಗೆ ಹಳೆಯ ಕಾನೂನುಗಳಿಗಿಂತ ಹೆಚ್ಚಿನ ಹಕ್ಕುಗಳನ್ನು ನೀಡಿತು. ಆದಾಗ್ಯೂ, ಇದರಲ್ಲಿ ಕೆಲವು ನಿರ್ಬಂಧಗಳು ಉಳಿದಿದ್ದವು, ಮತ್ತು ಅವುಗಳನ್ನು ಹಿಂದೂ ಉತ್ತರಾಧಿಕಾರ (ತಿದ್ದುಪಡಿ) ಅಧಿನಿಯಮ, 2005 ಮೂಲಕ ಪರಿಹರಿಸಲಾಯಿತು, ಇದರಿಂದ ಹೆಣ್ಣುಮಕ್ಕಳು ಕೂಡ ಪೂರ್ವಿಕ ಆಸ್ತಿಯಲ್ಲಿ ಸಮಾನ ಹಕ್ಕನ್ನು ಪಡೆಯುವ ಅವಕಾಶ ದೊರಕಿತು.
ಹಿಂದೂ ಉತ್ತರಾಧಿಕಾರ ಅಧಿನಿಯಮ ವಿಭಾಗ 14 ಮಹಿಳೆಗೆ 1956 ರವರೆಗೆ ಇದ್ದ ಸೀಮಿತ ಹಕ್ಕುಗಳನ್ನು ಸ0ಪೂರ್ಣ ಒಡೆತನಕ್ಕೆ ಮಾರ್ಪಾಟು ಮಾಡಿತು. 1933 ಹಾಗೂ 1937 ರ ಕಾನೂನಿ ಅಡಿ ಮಹಿಳೆಗೆ ದೊರಕಿದ್ದ ಸೀಮಿತ ಹಕ್ಕುಗಳು ಸ0ಪೂರ್ಣ ಹಕ್ಕುಗಳಾದವು. 


ಹಿಂದಿನ ಹಿಂದೂ ಕಾನೂನುಗಳ ಪ್ರಕಾರ, (1933 ಹಾಗೂ 1937) ಮಹಿಳೆಯರು ಆಸ್ತಿಯ ಮೇಲೆ ಕೇವಲ ಸೀಮಿತ ಹಕ್ಕು ಹೊಂದಿದ್ದರು, ಅಂದರೆ ಅವರು ಆಸ್ತಿಯನ್ನು ಬಳಸಬಹುದಾಗಿತ್ತು, ಆದರೆ ತಮ್ಮ ಇಚ್ಛೆಯಂತೆ ಮಾರಾಟ ಅಥವಾ ಹಸ್ತಾಂತರ ಮಾಡಲಾಗುತ್ತಿರಲಿಲ್ಲ. ಆದರೆ, 14ನೇ ವಿಧಿಯು ಈ ಪರಿಸ್ಥಿತಿಯನ್ನು ಬದಲಿಸಿ, ಮಹಿಳೆಯರಿಗೆ ಸಂಪೂರ್ಣ ಸ್ವಾಮ್ಯವನ್ನು ನೀಡಿತು.


ಈ ಬಗ್ಗೆ ಸರ್ವೊಚ್ಚ ನ್ಯಾಯಾಲಯದ ಅತ್ಯ0ತ ಪ್ರಮುಖವಾದ ತೀರ್ಪು ಎ0ದರೆ ವಿ. ತುಳಸಮ್ಮ ವಿರುದ್ದ ಸೇಶ ರೆಡ್ಡಿ (1977) 3 SCC 99. ಸರ್ವೊಚ್ಚ ನ್ಯಾಯಾಲಯವು 1956ರ ನ0ತರ ಮಹಿಳೆಯ ಸಿಮೀತ ಹಕ್ಕುಗಳು ಹೇಗೆ ಸ0ಪೂರ್ಣ ಒಡೆತನಕ್ಕೆ ಮಾರ್ಪಾಟಾದವು ಎ0ಬ ಬಗ್ಗೆ ಈ ತೀರ್ಪಿನಲ್ಲಿ ಚರ್ಚೆ ಮಾಡಿದೆ. ಹಲವಾರು ಹಿ0ದೂ ಶಾಸ್ತ್ರಘ್ನರ ಮಹಾಕೃತಿಗಳನ್ನು ಈ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. 


ಹಿಂದೂಮಹಿಳೆಯರಆಸ್ತಿಹಕ್ಕುಗಳಅಧಿನಿಯಮ, 1937‌ನಪ್ರಕಾರ, ವಿಧವೆಯಪೋಷಣೆಗಾಗಿಹಕ್ಕುಸ್ಪಷ್ಟವಾದಹಕ್ಕಾಗಿರೂಪುಗೊಂಡಿದೆ, ಮತ್ತುಪೋಷಣೆಯಬದಲಿಗೆಅವಳಿಗೆಹಂಚಿಕೆಯಾಗಿದಆಸ್ತಿ, ಮೊದಲುಸೀಮಿತಹಕ್ಕಿನೊಂದಿಗೆನೀಡಲ್ಪಟ್ಟಿದ್ದರೂ, 1956ರಅಧಿನಿಯಮದನಿಯಮಗಳಪ್ರಕಾರ, ಅದುಸಂಪೂರ್ಣಸ್ವಾಮ್ಯಹಕ್ಕಿಗೆವಿಸ್ತರಿಸಲ್ಪಟ್ಟಿದೆ” ಎ0ದು ಈ ತೀರ್ಪಿನಲ್ಲಿ ಹೇಳಲಾಗಿದೆ. 


ಆದರೆ ಸ0ಪೂರ್ಣ ಮಾಲಿಕತ್ವ ಹೊ0ದಲು ಮಹಿಳೆಯು 1956ರಲ್ಲಿ ಬದುಕಿರಬೇಕು. ಆಗ ಮಾತ್ರ ಆಕೆಗೆ ಮೇಲೆ ಹೇಳಿದ ಆಸ್ತಿಯಲ್ಲಿ ಸ0ಪೂರ್ಣ ಮಾಲಿಕತ್ವ ದೊರಕುತ್ತದೆ.  


ಮು0ದೆ ಬರುವ ತೀರ್ಪಿನ ಆಧಾರದ ಮೇಲೆ ಈ ಲೇಖನ ಮು0ದುವರೆಯುವುದು… 
ಎಸ್. ಬಸವರಾಜ್, ಹಿರಿಯವಕೀಲರು, ಬೆ0ಗಳೂರು

Published by rajdakshalegal

Senior Advocate, High Court of Karnataka, Bengaluru

Leave a comment