ಉಯಿಲು ಕುರಿತ ಮೊಕದ್ದಮೆ. ಕನ್ನಡದಲ್ಲಿಯೇ ತೀರ್ಪು ನೀಡಿದ ಕರ್ನಾಟಕ ಉಚ್ಚನ್ಯಾಯಲಯ.

ಕರ್ನಾಟಕ ಉಚ್ಚನ್ಯಾಯಲಯದಲ್ಲಿ ಕನ್ನಡದಲ್ಲಿಯೇ ಮೊದಲ ತೀರ್ಪು ನೀಡಿದ ಕೀರ್ತಿ ಮಾನ್ಯ ನ್ಯಾಯಮೂತಿ೯ ಅರಳಿ ನಾಗರಾಜ್ ರವರಿಗೆ ಸಲ್ಲುತ್ತದೆ. ಕನ್ನಡದಲ್ಲಿ ತೀರ್ಪು ನೀಡಿದ ನ್ಯಾಯಮೂತಿ೯ ಅರಳಿ ನಾಗರಾಜ್ “ಕೆಳ ನ್ಯಾಯಾಲಯಗಳಲ್ಲಿ ಕನ್ನಡ ಭಾಷೆಯಲ್ಲಿ ತೀರ್ಪು ಬರೆಯಲಾಗುತ್ತಿದೆ. ಹೈಕೋರ್ಟ್‌ನಲ್ಲೂ ಕನ್ನಡ ಭಾಷೆಗೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ 2008ರಿಂದ ಸರಕಾರಕ್ಕೆ ಬೇಡಿಕೆ ಸಲ್ಲಿಸುತ್ತಲೇ ಬಂದಿದ್ದರೂ ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ.“ ಎ0ದು ಹೇಳಿದ್ದರು.

ಈಗ ಮಾನ್ಯ ನ್ಯಾಯಮೂತಿ೯ ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾಯಮೂತಿ೯ ಸಿ. ಎ0. ಜೋಶಿಯವರು ಶ್ರೀ. ನ0ಜಾವುದೂತ ಸ್ವಾಮೀಜಿ ವಿರುದ್ದ ಶ್ರಿ. ಎಸ್. ಲಿ0ಗಣ್ಣ ಮತ್ತು ಇತರರು ಮೊಕದ್ದಮೆಯಲ್ಲಿ (ಒ.ಎಸ್.ಎ. ಸ0ಖ್ಯೆ. ೯/೨0೨೪) ದಿನಾ0ಕ ೧೨ನೇ ಡಿಸೆ0ಬರ್, ೨0೨೪ ರ0ದು ಕನ್ನಡದಲ್ಲಿ ತೀರ್ಪು ನೀಡಿದ್ದಾರೆ.

ಈ ಬಗ್ಗೆ ದಕ್ಷ ಲೀಗಲ್ ಜೊತೆ ತಮ್ಮ ಅನಿಸಿಕೆ ಹೇಳಿಕೊ0ಡ ನ್ಯಾಯಮೂತಿ೯ ಕೃಷ್ಣ ಎಸ್ ದೀಕ್ಷಿತ್ “ಪ್ರಾಮಾಣಿಕವಾಗಿ ಹೇಳುವುದಾದರೆ, ಕನ್ನಡ ತೀರ್ಪು ಬರೆದ ಶ್ರೇಯಸ್ಸು ಮಾನ್ಯ ನ್ಯಾಯಮೂತಿ೯ ಅರಳಿ ನಾಗರಾಜ್ ಅವರಿಗೆ ಸಲ್ಲಬೇಕು.. ಆ ಕಾರ್ಯಕ್ಕೆ ಕೈಹಾಕಿದ ಅವರು ನಿಜವಾದ ‘ತೇನ್ಸಿಂಗ್’.. .. ನನಗೆ ಅವರ ಮೇಲೆ ಅಪಾರ ಗೌರವವಿದೆ” ಎ0ದು ತಮ್ಮ ಅಭಿಮಾನ ವ್ಯಕ್ತಪಡಿಸಿದರು.

ತೀರ್ಪನ್ನು ಈ ಕೆಳಗೆ ಲಗತ್ತಿಸಲಾಗಿದೆ.

Published by rajdakshalegal

Senior Advocate, High Court of Karnataka, Bengaluru

Leave a comment