ಮುಸ್ಲಿಮರ ಮಸೀದಿ ಮು0ದೆ ಗಣೇಶ ಆಚರಣೆ. ಹೊಸ ಜಾತ್ಯಾತೀತ ಪರ್ವದ ಆರ0ಭ.

ಮೊನ್ನೆ ಮುಸ್ಲಿಮ್ ಮಸೀದಿಯೊ0ದರ ಮು0ದೆ ಗಣೇಶನ ಮೆರವಣಿಗೆ ವೇಳೆ ಹಿ0ದೂಗಳು ಮಸೀದಿಗೆ ಮ0ಗಳಾರತಿ ಮಾಡುತ್ತಿರುವ ಹಾಗೂ ಇನ್ನೊ0ದು ಗಣೇಶ ಮೆರವಣಿಗೆ ವೇಳೆ ಮುಸ್ಲಿ0 ಸಮುದಾಯದವರು ಹಿ0ದೂಗಳಿಗೆ ಪ್ರಸಾದ ನೀಡುತ್ತೀರುವ ಚಿತ್ರಗಳನ್ನು ಕ0ಡು ಖುಶಿಯಾಯ್ತು.

ಕೆಲ ದಶಕಗಳ ಹಿ0ದಿನ ಮಾತು. ನಮ್ಮ ತಾಲೂಕಿನ ಗಣೇಶ ಮೆರವಣಿಗೆ, ಮದುವೆ ಮೆರವಣಿಗೆ ಆಥವಾ ದೇವರ ಜಾತ್ರೆ ಸಮಯದಲ್ಲಿ ಯಾವ ಕಾರಣಕ್ಕೂ ಸಾಬರ ಮಸೀದಿ ಮು0ದೆ ಸಾಗುವ ಅನುಮತಿ ಇರಲಿಲ್ಲ. ಅಕಸ್ಮಾತ್ ಮೆರವಣಿಗೆ ಆ ಹಾದಿಯಲ್ಲಿ ಹೋಗಲೇಬೇಕಾದರೂ ಮಸೀದಿಗೆ ಮು0ಚೆ ಹಾಗೂ ಮಸೀದಿ ನ0ತರ ಅರ್ಧ ಕಿಲೋಮೀಟರವರೆಗೆ ನಿಶ್ಯಬ್ಧ ಕಾಪಾಡಬೇಕಾಗಿತ್ತು. ಘೋಷಣೆ ಇರಲಿ ಸ0ಪ್ರದಾಯದ ಓಲಗ ತಮ್ಮಟೆ ಕೂಡ ನಿಶಿದ್ದ.

ಮೊದಲು ಇದು ಬರಿ ಆಜ಼ಾಮ್ ಕೂಗುವ ಸಮಯದಲ್ಲಿ ಇದ್ದದ್ದು ಕಾಲಕ್ರಮೇಣ ಎಲ್ಲ ಸಮಯದಲ್ಲೂ ಪಾಲಿಸಬೇಕಾದ, ಒ0ದು ಉಸಿರುಕಟ್ಟುವ ವಾತಾವರಣವಾಗಿ ಬದಲಾಯಿತು. ಇದನ್ನುಕರ್ನಾಟಕದ ಎಲ್ಲ ಹಳ್ಳಿ, ತಾಲೂಕು, ಜಿಲ್ಲಾ ಮಟ್ಟದಲ್ಲಿ ವ್ಯವಸ್ತಿತವಾಗಿ ಖಡ್ಡಾಯವಾಗಿ ಪಾಲಿಸಬೇಕಾಗಿತ್ತು.

ಕ್ರಮೇಣ ಈ ಪದ್ದತಿ ವಿರುದ್ದ ಅಸಮದಾನದಿ0ದ ಪ್ರಾರ0ಭವಾಗಿ ತೀವ್ರತರವಾದ ಹೊಡೆದಾಟ ಬಡಿದಾಟದ ಮಟ್ಟಕ್ಕೆ ಹೋಯಿತು. ಪ್ರತಿ ವರ್ಷದ ಮೆರವಣಿಗೆ, ಪ್ರತಿ ಜಾತ್ರೆ ಸಮಯದಲ್ಲಿ ರಸ್ತೆಗಳು ಯುದ್ದಭೂಮಿಗಳಾಗಿ ಪರಿವರ್ತನೆಗೊ0ಡವು.

ಮು0ದೆ ”ಹಿ0ದೂ ಜಾಗೃತನಾಗಿದ್ದಾನೆ”, ”ಜೈ ಶ್ರೀರಾಮ್” ಇತ್ಯಾದಿ ಘೋಷಣೆಗಳು ಮೊಳಗುವ ಜೊತೆಗೆ ಮಸೀದಿ ಮು0ದೆಯೇ ಮೆರವಣಿಗೆ ತೆಗೆಯುತ್ತೇವೆ ಅ0ತ ಹಿ0ದೂಗಳೂ, ಯಾವ ಕಾರಣಕ್ಕೂ ಬಿಡಲ್ಲ ಅ0ತ ಸಾಬರೂ ತಮ್ಮ ದೇವರುಗಳನ್ನು ಕಾಪಾಡುವ ನಿಟ್ಟಿನಲ್ಲಿ ಭದ್ರವಾಗಿ ನಿ0ತರು.

ನ0ತರ ಯಾರ ಕೈ ಮೇಲಾಯಿತೊ, ಯಾರು ಸೋತರೋ ಅ0ಬುವ ಬಗ್ಗೆ ಚರ್ಚೆ ಬೇಡ.

ಇ0ದು ಕಾಲ ಬದಲಾಗಿದೆ. ಸಾಬರ ಮಸೀದಿ ಮು0ದೆ ಹಿ0ದೂ ದೇವರುಗಳ ಮೆರವಣಿಗೆ ಹೋಗುವುದಿರಲಿ, ಎರಡೂ ಪ0ಗಡಗಳೂ ಸೇರಿ ಎರಡೂ ಪ0ಗಡಗಳ ಹಬ್ಬ ಆಚರಿಸುವ ಮಟ್ಟಿಗೆ ಇ0ದು ಹೊಸ ಪರ್ವ ಜನಿಸಿದೆ.

ಈ ಮನಸ್ತಿತಿಯನ್ನು, ಈ ಧಾರ್ಮಿಕ ಸಮತೋಲನವನ್ನು ಕಾಪಾಡೋಣ. ಬಡ ಸಾಬರೂ ಹಿ0ದೂಗಳೂ ದೊಡ್ಡಮಟ್ಟದ ರಾಜಕೀಯ ಆಟವನ್ನು ಕೆಲವರಿಗೆ ಬಿಟ್ಟು ಈಗ ಬೀಸುತ್ತಿರುವ ಹೊಸ ಗಾಳಿಯಲ್ಲಿ ಜನಿಸಿದ ಹೊಸ ಸ್ವಚ್ಚ ಜಾತ್ಯತೀತ ವಾತಾವರಣವನ್ನು ಮು0ದಿನ ಪೀಳಿಗೆಗಳಿಗೂ ಹಬ್ಬಿಸುವ ಕೆಲಸ ಮಾಡೋಣ.

ಎಸ್. ಬಸವರಾಜ್,
ಹಿರಿಯ ವಕೀಲರು
ಬೆ0ಗಳೂರು
9845065416

Published by rajdakshalegal

Senior Advocate, High Court of Karnataka, Bengaluru

Leave a comment