
ರಾಷ್ಟ್ರ ಮಟ್ಟದಲ್ಲಿ ಒ0ದು ಪ್ರಭಲವಾದ ಜ್ಯಾತ್ಯಾತೀತ ಕಾನೂನು ವೇದಿಕೆ ಮಾಡಬೇಕು ಅನ್ನುವ ಆಸೆಯಿ0ದ ಶ್ರಿ. ದೇವೇಗೌಡರನ್ನು ಬೇಟಿಯಾಗಬೇಕು ಅ0ತ ಸ್ನೇಹಿತ ಎಮ್.ಎಲ್.ಸಿ ಶ್ರೀ. ಬೋಜೇಗೌಡರಿಗೆ ಕೇಳಿದ್ದೆ. ಶ್ರಿ. ದೇವೇಗೌಡರು ಕಳೆದ ವಾರ ಸ0ಜೆ 5:30ಕ್ಕೆ ಮನೆಗೆ ಬರಹೇಳಿದ್ದರು. ತಮ್ಮ ಪಕ್ಷದ ಕಚೇರಿಯಿ0ದ ಮನೆಗೆ ಸರಿಯಾಗಿ 5:20ಕ್ಕೆ ಬ0ದು ನನಗೆ ತಮ್ಮ ಕೊಠಡಿಗೆ ಬರಲು ಕೋರಿದರು. ಗೌಡರು “ಕುಮಾರಣ್ಣ ನಿಮ್ಮ ಬಗ್ಗೆ ಬಹಳ ಹೇಳಿದ್ದಾರೆ“ ಅ0ದಾಗ ನನಗೆ ಆಶ್ಚರ್ಯ. ನನ್ನ ಬಗ್ಗೆ ಆಗಲೇ ತಿಳಿದುಕೊ0ಡಿದ್ದಾರೆ ಮತ್ತು ನನ್ನ ಬಗ್ಗೆ ಒಳ್ಳೆಯದನ್ನು ಕೇಳಿದ್ದಾರೆ ಎ0ದು.
ಮು0ದಿನ 45 ನಿಮಿಷದವರೆಗೆ ಯಾವುದೋ ಹಳೆಯ ಪರಿಚಯದವರ0ತೆ ಬಹಳೆ ಮಾತನಾಡಿದರು. ನನ್ನ ಬಗ್ಗೆ ವಿಚಾರಿಸಿದರು. ಕೆಲ ತಿ0ಗಳ ಹಿ0ದೆ ಗೌಡರು ನನ್ನ ಹಳ್ಳಿಗೆ ಬೇಟಿ ನೀಡಿ ನನ್ನ ಚಿಕ್ಕಪ್ಪ ಹಾಗೂ ಜೆ.ಡಿ.ಎಸ್ ಮುಖ0ಡ ಶ್ರಿ. ರೇಣುಕಾರ್ಯರ ಮನೆಗೆ ಹೋಗಿದ್ದನ್ನು ನೆನಪಿಸಿದೆ.
ಶ್ರಿ. ದೇವೇಗೌಡರ ಅತ್ಯ0ತ ವಿಶಿಷ್ಟ ಗುಣವನ್ನು ಅ0ದು ಗಮನಿಸಿದೆ. ವಿದ್ಯಾವ0ತರಿಗೆ, ತಿಳಿದುಕೊ0ಡವರಿಗೆ ಅವರು ಕೊಡುವ ಮರ್ಯಾದೆ. ನಾನು ಅವರ ಜೊತೆ ಇದ್ದ ಸಮಯದಲ್ಲಿ ಅವರು ತೋರಿದ ಗೌರವಪೂರ್ವ ಭಾವನೆ ಶ್ಲಾಘನೀಯ.
ನಾನು ಹೊರಟಾಗ ನಾನು ದಯವಿಟ್ಟು ಕುಳಿತೇ ಇರಿ ಎ0ದರು ಕೋರಿದರೂ ಎದ್ದು ನಿ0ತು ವಿದಾಯ ಹೇಳಿದರು.
ಈಗಿನ ಪರಿಸ್ತಿತಿಯಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ತೀವ್ರವಾದವನ್ನು ಮ0ಡಿಸುತ್ತಿದ್ದಾರೆ. ಒ0ದು ಪ್ರಭಲ ಹಾಗೂ ಜಾತ್ಯಾತೀತ ಕಾನೂನು ವೇದಿಕೆ ಬೇಕಾಗಿದೆ. ಅತ್ಯ0ತ ಗ0ಬೀರವಾದ ವಿಷಯಗಳಲ್ಲಿ ಸ0ವಿದಾನದ ಹಿನ್ನೆಲೆಯಿ0ದ ಇ0ದು ಯಾವ ಪಕ್ಷದ ಕಾನೂನು ವೇದಿಕೆಗಳೂ ಮಾತನಾಡುತ್ತಿಲ್ಲ. ಆದ್ದರಿ0ದ ನನ್ನ ಪ್ರಯತ್ನ ರಾಷ್ಟ್ರ ಮಟ್ಟದಲ್ಲಿ ಒ0ದು ಒಳ್ಳೆಯ ಕಾನೂನು ವೇದಿಕೆ ನಿರ್ಮಿಸುವುದು.
ನನ್ನ ಪ್ರಯತ್ನ ಕೈಗೂಡುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಮಾಜಿ ಪ್ರದಾನಿ ಶ್ರಿ. ದೇವೇಗೌಡರು ಒಬ್ಬ ಸಾದಾರಣ ವಕೀಲನಿಗೆ ಈ ರೀತಿ ಗೌರವದಿ0ದ ನಡೆಸಿಕೊ0ಡಿದ್ದು ಮರೆಯಲಾರದ ಅನುಭವ.
ಎಸ್. ಬಸವರಾಜ್, ಹಿರಿಯ ವಕೀಲ ಹಾಗೂ ಅಧ್ಯಕ್ಷ, ಕರ್ನಾಟಕ ರಾಜ್ಯ ವಕೀಲರ ಪರಿಷತ್ ಕಾನೂನು ಅಕೇಡೆಮಿ.