ವಕೀಲರ ವಿರುದ್ದ ಕ್ಷುಲ್ಲಕ ದೂರು. ಅರ್ಜಿದಾರನಿಗೆ 50 ಸಾವಿರ ರೂ ದ0ಡ ವಿಧಿಸಿದ ಕರ್ನಾಟಕ ರಾಜ್ಯ ವಕೀಲರ ಪರಿಷತ್.

ಕಳೆದ ಹಲವಾರು ವರ್ಷಗಳಲ್ಲಿ ಯಾವುದೇ ಸ್ವತ್ವವಿಲ್ಲದೆ ತಮ್ಮ ವ್ಯಾಜ್ಯಗಳನ್ನು ಕಳೆದುಕೊ0ಡ ಕಕ್ಷಿದಾರರು ವಕೀಲರ ವಿರುದ್ದ ಕ್ಷುಲ್ಲಕ ದೂರು ಕೊಡುವುದನ್ನು ವಕೀಲರ ಪರಿಷತ್ತು ಗಮನಿಸಿದೆ. ಆದರೆ ತಮ್ಮ ಕಕ್ಷಿದಾರರ ಪರವಾಗಿ ಕಷ್ಟಪಟ್ಟು ಹೋರಾಡಿದ ವಕೀಲರೊಬ್ಬರ ಮೇಲೆ ಎದುರುದಾರರೊಬ್ಬರು ದೂರು ನೀಡಿ ವಿನಾಕಾರಣ ಎರಡು ವರ್ಷಗಳ ಕಾಲ ಕಿರುಕುಳ ನೀಡಿದ್ದಕ್ಕಾಗಿ ಅರ್ಜಿದಾರರಿಗೆ ಪರಿಷತ್ತು ರೂ. 50,000 ದ0ಡ ವಿಧಿಸಿದೆ.

ಆದಿತ್ಯ ವಿವಿದೊದ್ದೇಶ ಸಹಕಾರಿ ಸ0ಘವು ತಾನು ಸಾಲ ಕೊಟ್ಟವರ ಪರವಾಗಿ ವಕಾಲತ್ತು ವಹಿಸಿ ಪ್ರಭಲವಾಗಿ ವ್ಯಾಜ್ಯ ನಡೆಸಿ ಭಾರಿ ನಷ್ಟವು0ಟು ಮಾಡಿದಾರೆ0ದು ವಕೀಲರೊಬ್ಬರ ಮೇಲೆ ದೂರು ನೀಡಿತ್ತು.

ವಕೀಲರೊಬ್ಬರು ತಮ್ಮ ಕೆಲಸವನ್ನು ಕಷ್ಟಪಟ್ಟು ಮಾಡಿದ ಬಗ್ಗೆ ದೂರು ನೀಡಿ ತೊ0ದರೆಕೊಟ್ಟ ಬಗ್ಗೆ ಪರಿಶತ್ ಗ0ಬೀರವಾಗಿ ಪರಿಗಣಿಸಿತ್ತು.

ಈ ಸ0ಬ0ದ ಕಳೆದ ಎರಡು ವರ್ಷಗಳಿ0ದ ವಿಚಾರಣೆ ನಡೆದು ಅರ್ಜಿಯನ್ನು ಕೂಲ0ಕುಷವಾಗಿ ಪರಿಶೀಲಿಸಿದ ಶಿಸ್ತು ಸಮಿತಿಯು ಇ0ತಹ ದೂರುಗಳಿ0ದ ವಕೀಲರ ಮನಸ್ತೈರ್ಯವು ಕುಗ್ಗುತ್ತದೆ ಈ ಅರ್ಜಿಯನ್ನು ವಜಾಗೊಳಿಸಬೇಕಾಗುತ್ತದೆ ಎ0ದು ಅಭಿಪ್ರಾಯಪಟ್ಟಿತು. ಮತ್ತು ವಕೀಲರನ್ನು ವಿನಾಕಾರಣ ಕಿರುಕುಳಕ್ಕೆ ಒಳಪಡಿಸಿದ್ದಕ್ಕಾಗಿ 50,000 ದ0ಡವನ್ನು ಸಹ ವಿಧಿಸಿದೆ.

Published by rajdakshalegal

Senior Advocate, High Court of Karnataka, Bengaluru

Join the Conversation

  1. Unknown's avatar

1 Comment

Leave a comment