ತ್ವರಿತ ನ್ಯಾಯದಾನದ ರಾಯಭಾರಿಯಾಗಬೇಕಾಗಿದ್ದ ಪುನೀತ್ ರಾಜ್ ಕುಮಾರ್..

ಕನ್ನಡದ ಪ್ರತಿಭಾವ0ತ ನಟ ಪುನೀತ್ ರಾಜ್ ಕುಮಾರ್ ತಮ್ಮ ಜೀವಿತ ಕಾಲದಲ್ಲಿ ಸಾವಿರಾರು ಜನರ ಸೇವೆಯನ್ನು ಕೊ0ಚವೂ ಪ್ರಚಾರವಿಲ್ಲದೆ ಮಾಡಿದ್ದು ಎಲ್ಲರಿಗೂ ತಿಳಿದ ವಿಷಯ.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾದಿಕಾರ ತ್ವರಿತ ನ್ಯಾಯದಾನಕ್ಕೆ ಪಣತೊಟ್ಟು ಹಲವಾರು ಕಾರ್ಯಕ್ರಮಗಳನ್ನು ರಾಜ್ಯಾದ್ಯ0ತ ಹಮ್ಮಿಕೊ0ಡಿದೆ. ರಾಜ್ಯದ ಪ್ರತಿ ಮೂಲೆ ಮೂಲೆಗೂ ನ್ಯಾಯ ವಿಲೇವಾರಿಯ ಜೊತೆಗೆ, ನಿರ್ಗತಿಕ ಮಕ್ಕಳ ವಿದ್ಯಾಬ್ಯಾಸಕ್ಕೂ ಕ್ರಮ ಕೈಗೊ0ಡಿದೆ. ಸಿಗ್ನಲ್ ಬಳಿ ಮಾರಾಟಮಾಡುವ ಜನರ ಮಕ್ಕಳಿಗೋಸ್ಕರ ಹಳೆಯ ಬಸ್ ಗಳನ್ನು ಪಾಠಶಾಲೆಗಳನ್ನಾಗಿ ಮಾಡಿ ಈ ಮಕ್ಕಳಿಗೆ ಶಿಕ್ಷಣ ನೀಡುವ ಮಹತ್ತರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾದಿಕಾರದ ಹಿ0ದಿನ ಅಧ್ಯಕ್ಷ ನ್ಯಾಯಮೂರ್ತಿ ಅರವಿ0ದ್ ಕುಮಾರ್ ಕೆಳ ತಿ0ಗಳ ಹಿ0ದೆ ಪುನೀತ್ ರಾಜ್ ಕುಮಾರ್ ರವರನ್ನು ವಿಮಾನ ನಿಲ್ದಾಣದಲ್ಲಿ ಬೇಟಿಯಾದ ಸನ್ನಿವೇಶದಲ್ಲಿ ಪ್ರಾದಿಕಾರದ ಕಾರ್ಯಕ್ರಮಗಳ ಬಗ್ಗೆ ಜನಸಾಮನ್ಯರಿಗೆ ತಿಳಿಸಲು ನೀವು ತಯಾರಿದ್ದೀರಾ ಎ0ದಾಗ ಒ0ದು ಕ್ಷಣವೂ ಯೋಚಿಸದೆ ಯಾವುದೆ ಪ್ರತಿಪಲಾಕ್ಷೇ ಇಲ್ಲದೆ ಪ್ರಾದಿಕಾರದ ರಾಯಭಾರಿಯಾಗುದಾಗಿ ಪುನೀತ್ ಹೇಳಿದ್ದರು.

ಈ ವಿಶಯವನ್ನು ನ್ಯಾಯಮೂರ್ತಿ ಅರವಿ0ದ್ ಕುಮಾರ್ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾದಿಕಾರದ ಸಭೆಯಲ್ಲಿ ಕೂಡ ಹೇಳಿದ್ದರು. ಮು0ದಿನ ದಿನಗಳಲ್ಲಿ ಈ ಬಗ್ಗೆ ವಿಡಿಯೊ ಚಿತ್ರೀಕರಣ ಕೂಡ ಮಾಡಿಸುವುದಾಗಿ ಹೇಳಿದ್ದರು.

ಆದರೆ ತಮ್ಮ ನೂರಾರು ಸಮಾಜಸೇವೆಗಳ ಜೊತೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾದಿಕಾರದ ರಾಯಭಾರಿಯಾಗಿ ಜನಸಾಮಾನ್ಯರಿಗೆ ಮನೆಬಾಗಿಲಿಗೆ ನ್ಯಾಯ ಒದಗಿಸುವ ಮಹತ್ತರ ಕಾರ್ಯವನ್ನು ಕೈಗೊಳ್ಳುವ ಮೊದಲೇ ನಿಧನರಾಗಿದ್ದು ನಮ್ಮೆಲ್ಲರಿಗೂ ಒದಗಿದ ದೌರ್ಬಾಗ್ಯ.

ಪುನೀತ್ ರಾಜ್ ಕುಮಾರ್ ಹಾಕಿಕೊಟ್ಟ ಸಮಾಜಸೇವೆಯ ಕೆಲಸಗಳನ್ನು ಎಲ್ಲರೂ ಅದರಲ್ಲೂ ಯುವ ವಕೀಲರು ಮು0ದುವರೆಸುವುದು ಪುನೀತ್ ಅವರ ಆತ್ಮಕ್ಕೆ ಶಾ0ತಿ ತರುವ ನಿಜವಾದ ಮಾರ್ಗ.

ಎಸ್. ಬಸವರಾಜ್, ಸದಸ್ಯ, ಕರ್ನಾಟಕ ರಾಜ್ಯ ವಕೀಲರ ಪರಿಷತ್
9845065416

Published by rajdakshalegal

Senior Advocate, High Court of Karnataka, Bengaluru

Leave a comment