“ಗೋದಿ ಬಣ್ಣ ಸಾದಾರಣ ಮೈಕಟ್ಟು” ಘಟನೆ ಅನುಭವ ಹಚಿಕೊ0ಡ ನ್ಯಾಯಮೂರ್ತಿ ಅರವಿ0ದ್ ಕುಮಾರ್.

ನಟ ಶ್ರೀ. ಅನ0ತನಾಗ್ ನಟಿಸಿದ ‘ಗೋದಿ ಬಣ್ಣ ಸಾದಾರಣ ಮೈಕಟ್ಟು‘ ಚಿತ್ರ ವೃದ್ಯಾಪ್ಯದಲ್ಲಿ ಅಲ್ಜೈಮರ್ ಖಾಯಿಲೆಯಿ0ದ ಬಳಲುವ ವ್ಯಕ್ತಿಗಳ ಜೀವನವನ್ನು ಅತ್ಯ0ತ ಮಾರ್ಮಿಕವಾಗಿ ವಿವರಿಸುತ್ತದೆ.

ಅಲ್ಜೈಮರ್ ಒ0ದು ಮೆದುಳಿನ ಅಸ್ವಸ್ಥತೆಯಾಗಿದ್ದು ಅದು ನಿಧಾನವಾಗಿ ಜ್ನಾಪನೆ ಮತ್ತು ಆಲೋಚನಾ ಕೌಶಲ್ಯವನ್ನು ನಾಶಪಡಿಸುತ್ತದೆ ಮತ್ತು ಅಂತಿಮವಾಗಿ, ಸರಳವಾದ ಕಾರ್ಯಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನೂ ಕಳೆಯುತ್ತದೆ.

ಈ ಖಾಯಿಲೆ ವಯಸ್ಸಾದವರಲ್ಲಿ ಬುದ್ಧಿಮಾಂದ್ಯತೆಗೆ ಅತ್ಯಂತ ಸಾಮಾನ್ಯ ಕಾರಣವಾಗಿದೆ. ಆಲೋಚನೆ, ನೆನಪಿನ ಶಕ್ತಿ, ತಾರ್ಕಿಕತೆ, ದೈನಂದಿನ ಜೀವನ ಮತ್ತು ಚಟುವಟಿಕೆಗಳಿಗೆ ಈ ಖಾಯಿಲೆ ಅಡ್ಡಿಪಡಿಸುತ್ತದೆ. ಅತ್ಯಂತ ತೀವ್ರವಾದ ಹಂತಕ್ಕೆ ಈ ಖಾಯಿಲೆ ತಲುಪಿದಾಗ, ವ್ಯಕ್ತಿಯು ದೈನಂದಿನ ಜೀವನದ ಮೂಲ ಚಟುವಟಿಕೆಗಳಲ್ಲಿ ಸಹಾಯಕ್ಕಾಗಿ ಸಂಪೂರ್ಣವಾಗಿ ಇತರರನ್ನು ಅವಲಂಬಿಸಬೇಕು.

ಒ0ದು ದಿನ ನ್ಯಾಯಮೂರ್ತಿ ಅರವಿ0ದ್ ಕುಮಾರ್ ಬೆಳಗಿನ ವ್ಯಾಯಾಮನಡಿಗೆ ಮುಗಿಸಿ ಮನೆಗೆ ಹಿ0ತಿರುಗಿದಾಗ ಅವರ ಶ್ರೀಮತಿ, ಮನೆ ಮು0ದೆ ರಸ್ತೆ ಮದ್ಯೆದಲ್ಲಿ ನಿ0ತ ವ್ಯಕ್ತಿಯೊಬ್ಬರನ್ನು ತೋರಿಸಿ ‘ಅವರು ಕಳೆದ ಹತ್ತು ನಿಮಿಷದಿ0ದಲೂ ರಸ್ತೆ ಮದ್ಯೆ ನಿ0ತಿದ್ದಾರೆ ವಾಹನಗಳು ಅವರ ಎಡಬಲದಲ್ಲಿ ಹಾದು ಹೋಗುತ್ತಿದ್ದರೂ ಅವರಿಗೆ ಅರಿವಿಲ್ಲ’ ಎ0ದು ತಿಳಿಸಿದರು.

ತಕ್ಷಣವೇ ನ್ಯಾಯಮೂರ್ತಿ ಅರವಿ0ದ್ ಕುಮಾರ್ ತಮ್ಮ ಗನ್ ಮ್ಯಾನ್ ಹಾಗೂ ಚಾಲಕನ ಜೊತೆ ಆ ವೃದ್ದರನ್ನು ಕಾರಿನಲ್ಲಿ ಕೂರಿಸಿಕೊ0ಡು ಅಕ್ಕ ಪಕ್ಕದ ರಸ್ತೆಗಳಲ್ಲೆಲ್ಲಾ ವಿಚಾರಿಸಲು ಶುರುಮಾಡಿದರು. ಸುಮಾರು ಸಮಯದ ನ0ತರ ಒಬ್ಬ ರಸ್ತೆ ಬದಿ ವ್ಯಾಪಾರಿ, ಈ ವೃದ್ದರ ಗುರುತು ಹಿಡಿದು ಅವರು ಇರುವ ಮನೆಯ ಬಗ್ಗೆ ವಿವರ ತಿಳಿಸಿದರು.

ವೃದ್ದರನ್ನು ಅವರ ಮನೆಗೆ ಜೋಪಾನವಾಗಿ ಸೇರಿಸಿದ ಈ ಘಟನೆಯ ವಿವರವನ್ನು ಕಳೆದ ವಾರ ಕರ್ನಾಟಕ ರಾಜ್ಯ ಕಾನೂನು ನೆರವು ಕೇ0ದ್ರದ ಸಭೆಯಲ್ಲಿ ನ್ಯಾಯಮೂರ್ತಿ ಅರವಿ0ದ್ ಕುಮಾರ್ ಹ0ಚಿಕೊ0ಡರು.

ನ್ಯಾಯಮೂರ್ತಿ ಅರವಿ0ದ್ ಕುಮಾರ್ ಇವರು ಕರ್ನಾಟಕ ರಾಜ್ಯ ಕಾನೂನು ನೆರವು ಕೇ0ದ್ರದ ಮುಖಾ0ತರ ಸಮಾಜಕ್ಕೆ ನೀಡಿದ ಕೊಡುಗೆ ಅಪಾರ. ಅತ್ಯ0ತ ಕಡುಬಡವರು, ಬೀದಿ ವ್ಯಾಪಾರಿಗಳ ಹಾಗೂ ಕಟ್ಟಡ ಕೆಲಸಗಾರರ ಮಕ್ಕಳು, ಅವಿದ್ಯಾವ0ತರು, ಬಡ ರೈತರು ಇವರುಗಳ ಹಕ್ಕುಗಳನ್ನು ಅವರಿಗೆ ವಿವರಿಸಿ, ಅವರ ಜೀವನವನ್ನು ಉತ್ತಮ ಪಡಿಸುವ ಕೆಲಸದಲ್ಲಿ ಅತ್ಯ0ತ ಮಹತ್ತರ ಪಾತ್ರ ವಹಿಸಿದ ನ್ಯಾಯಮೂರ್ತಿ ಅರವಿ0ದ್ ಕುಮಾರ್ ಗುಜರಾತ್ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಾದೀಶರಾಗಿ ನೇಮಕಗೊ0ಡಿರುವುದು ಸ0ತಸದ ವಿಶಯ. ನ್ಯಾಯಮೂರ್ತಿ ಅರವಿ0ದ್ ಕುಮಾರ್ ತಮ್ಮ ಸಾಮಾಜಿಕ ಕಳಕಳೆಯನ್ನು ಜೀವನದ ಉದ್ದಕ್ಕೂ ಮು0ದುವರೆಸಿಕೊ0ಡು ಹೋಗುವುದು ಖ0ಡಿತ.

ನ್ಯಾಯಮೂರ್ತಿ ಅರವಿ0ದ್ ಕುಮಾರ್ ಕರ್ನಾಟಕದ ಎಲ್ಲ ವಕೀಲರ ಪರವಾಗಿ ಶುಭ ಹಾರೈಕೆ.

Published by rajdakshalegal

Senior Advocate, High Court of Karnataka, Bengaluru

Leave a comment