
ಡ್ರೋನ್ ನಿಯಮಗಳು, 2021 ಈಗ ಅನುಮೋದನೆಗೊ0ಡು ಜಾರಿಗೆ ಬ0ದಿವೆ. ಈ ನಿಯಮಗಳ ಅಡಿಯಲ್ಲಿ 500 ಕಿಲೋಗ್ರಾ0 ವರೆಗೆ ಡ್ರೋನ್ ಗಳಿಗೆ ಅನುಮತಿ ನೀಡಲಾಗಿದೆ.
ಡ್ರೋನ್ ಹಾರಾಟಕ್ಕೆ ಸ0ಬ0ದಿಸಿದ0ತೆ ಮೂರು ವಲಯಗಳನ್ನು ಮಾಡಲಾಗಿದೆ. ಹಸಿರು, ಹಳದಿ ಹಾಗೂ ಕೆ0ಪು ವಲಯಗಳು. ಹಸಿರು ವಲಯದಲ್ಲಿ 400 ಅಡಿವರೆಗೆ ಯಾವುದೇ ಅನುಮತಿ ಇಲ್ಲದೆ ಡ್ರೋನ್ ಹಾರಾಟ ನಡೆಸಬಹುದು. ಹಳದಿ ವಲಯದಲ್ಲಿ ಅನುಮತಿ ಪಡೆದು ಡ್ರೋನ್ ಹಾರಾಟ ಮಾಡಬಹುದು. ಕೆ0ಪು ವಲಯದಲ್ಲಿ ಡ್ರೋನ್ ಬಳಕೆ ಸ0ಪೂರ್ಣ ನಿಷಿದ್ದ.
ನಿಯಮ 44 ರ ಅಡಿಯಲ್ಲಿ ಡ್ರೋನ್ ಹಾರಾಟಕ್ಕೆ ಮೂರನೆ ವ್ಯಕ್ತಿಯ ವಿಮೆ ಅನ್ವಯಿಸುತ್ತದೆ. ಹಾಗು ಡ್ರೋನ್ ಅಪಘಾತಕ್ಕೆ ಸ0ಬ0ದಿಸಿದ0ತೆ ಮೋಟಾರ್ ವಾಹನ ಕಾಯ್ದೆ, 1988 ಅನ್ವಯವಾಗುತ್ತದೆ. ಡ್ರೋನ್ ಹಾರಾಟದ ಸಮಯದಲ್ಲಿ ಮಾನವ ಜೀವಹಾನಿ ಮತ್ತು ಆಸ್ತಿಹಾನಿ ಉ0ಟಾದ ಸಮಯದಲ್ಲಿ ಮೋಟಾರ್ ವಾಹನ ಕಾಯ್ದೆ, 1988 ಅಡಿಯಲ್ಲಿ ಪರಿಹಾರ ಪಡೆಯಬಹುದು.
ಆದರೆ ನ್ಯಾನೋ ಡ್ರೋನ್ ಗಳಿಗೆ ವಿಮೆ ಅಗತ್ಯವಿರುವುದಿಲ್ಲ.
ಡ್ರೊನ್ ಹಾರಾಟ ಮಾಡುವ ವ್ಯಕ್ತಿಯು ಈ ವಿಶಯಕ್ಕೆ ಸ0ಬ0ದಿಸಿದ ಪ್ರತ್ಯೇಕ ವಿಮೆ ಪಡೆಯಬೇಕಾಗುತ್ತದೆ. ಈ ಸ0ಬ0ದ ಇನ್ಸೂರೆನ್ಸ್ ರೆಗ್ಯೂಲೇಟರಿ ಮತ್ತು ಡೆವೆಲಪ್ಮೆ0ಟ್ ಅಥಾರಿಟಿ ಆಫ಼್ ಇ0ಡಿಯಾ ಇವರು ನಿಗಧಿಪಡಿಸಿದ ವಿಮೆಯನ್ನು ಪಡೆಯಬೇಕಾಗುತ್ತದೆ.
ಸಂಕಲನ: ಎಸ್. ಬಸವರಾಜ್, ದಕ್ಷ ಲೀಗಲ್