
ಉಚ್ಚ ನ್ಯಾಯಾಲಯದ ವಕೀಲರು ಸರ್ವೋಚ್ಚ ನ್ಯಾಯಾಲಯದ ವಕೀಲರಿಗಿ0ತ ಕೀಳು ಎ0ದು ಠರಾವು ಮಾಡಿದ ಹಿನ್ನೆಲೆಯಲ್ಲಿಯೇ ಈಗ ಸುಪ್ರೀ0 ಕೋರ್ಟ್ ಬಾರ್ ಅಸೋಸಿಯೇಶನ್ ಕರ್ನಾಟಕ ಸೇರಿದ0ತೆ ಉಚ್ಚ ನ್ಯಾಯಾಲಯಗಳಿಗೆ ಸರ್ವೋಚ್ಚ ನ್ಯಾಯಾಲಯದ ವಕೀಲರನ್ನು ನೇಮಿಸಲು ತನ್ನದೇ ಆದ ಪಟ್ಟಿಯನ್ನು ತಯಾರಿಸಿದೆ! (ಪಟ್ಟಿಯನ್ನು ನೋಡಿ)
ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪ್ರಕಾರ ಮುಖ್ಯ ನ್ಯಾಯಾದೀಶರಿಗೆ ಮಾತ್ರ ಈ ರೀತಿ ಅಧಿಕಾರವಿದೆ. ಆದರೆ ಸುಪ್ರೀ0 ಕೋರ್ಟ್ ಬಾರ್ ಅಸೋಸಿಯೇಶನ್ ಅತ್ಯ0ತ ಅಹ0ಕಾರದಿ0ದ ನಡೆಯುತ್ತಿದೆ. ಯಾರ ಹಿಡಿತವೂ ಇಲ್ಲದ ಈ ಅಸೋಸಿಯೇಶನ್ ಕೆಲವೊ0ದು ಪಟ್ಟಭದ್ರ ಹಿತಾಸಕ್ತಿಗಳ ಮನೆಯಾಗಿದೆ. ಈ ವ್ಯಕ್ತಿಗಳು ಸರ್ವೋಚ್ಚ ನ್ಯಾಯಾಲಯದ ಮು0ದೆ ವೃತ್ತಿ ಮಾಡುತ್ತಿರುವ ವಕೀಲರನ್ನು ದೇಶದ ಉಚ್ಚ ನ್ಯಾಯಾಲಯಗಳಿಗೆ ತು0ಬಲು ತರಾತುರಿ ನಡೆಸಿವೆ.
ಇ0ತಹ ಕಾನೂನು ಬಾಹಿರ ದುರ್ನಡತೆಯನ್ನು ನಾವೆಲ್ಲರೂ ಖ0ಡಿಸಬೇಕಾಗಿದೆ.