ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಇತಿಹಾಸ ಮತ್ತು ಸಾದನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಾಜ್ಯಪಾಲರು.

ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾದ ಶ್ರಿ. ಎಲ್. ಶ್ರೀನಿವಾಸ ಬಾಬು ಹಾಗೂ ಸದಸ್ಯರಾದ ಶ್ರಿಯುತರಾದ ಬಿ.ವಿ. ಶ್ರೀನಿವಾಸ್, ವಿಶಾಲ್ ರಘು, ಮದುಸೂದನ್ ಹಾಗೂ ಎಸ್. ಬಸವರಾಜ್ ಇವರು ತಾರೀಖು 3 ಆಗಸ್ಟ್ ರ0ದು ಗೌರವಾನ್ವಿತ ರಾಜ್ಯಪಾಲರನ್ನು ಭೇಟಿಯಾಗಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ ಭೇಟಿ ಕೊಡಲು ವಿನ0ತಿಸಿದರು.

ವಕೀಲರ ಪರಿಷತ್ತಿನಲ್ಲಿ ಕರ್ನಾಟಕ ರಾಜ್ಯದಿ0ದ ರಾಜ್ಯಪಾಲರಾದ ವಕೀಲರ ಚಿತ್ರಗಳನ್ನು ಅನಾವರಣ ಮಾಡಲು ಗೌರವಾನ್ವಿತ ರಾಜ್ಯಪಾಲರನ್ನು ವಿನ0ತಿಸಲಾಯಿತು.

ಈ ಸ0ದರ್ಭದಲ್ಲಿ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಇತಿಹಾಸ, ಕಾರ್ಯವೈಕರಿ, ಸಾದನೆಗಳನ್ನು ಅಧ್ಯಕ್ಷರು ವಿವರಿಸಿದರು.

ಕರ್ನಾಟಕದ ಹಲಾವಾರು ವಕೀಲರು ರಾಜ್ಯದ ಮುಖ್ಯಮ0ತ್ರಿಗಳೂ ಆಗಿದ್ದ ಬಗ್ಗೆ ತಿಳಿಸಲಾಯಿತು. ಶ್ರಿಯುತರಾದ ಕೆ.ಸಿ.ರೆಡ್ದಿ, ಕೆ0ಗಲ್ ಹನುಮ0ತಯ್ಯ, ಕಡಿದಾಳ್ ಮ0ಜಪ್ಪ, ನಿಜಲಿ0ಗಪ್ಪ, ಬಿ.ಡಿ. ಜತ್ತಿ, ಎಸ್. ಆರ್. ಕ0ಠಿ, ವೀರೇ0ದ್ರ ಪಾಟೀಲ್, ರಾಮಕಷ್ಣ ಹೆಗಡೆ, ಎಸ್. ಆರ್, ಬೊಮ್ಮಾಯಿ, ಎಸ್. ಬ0ಗಾರಪ್ಪ, ವೀರಪ್ಪ ಮೊಯಿಲಿ, ಜೆ.ಹೆಚ್. ಪಟೇಲ್, ಎಸ್. ಎಮ್. ಕೃಷ್ಣ, ಎನ್. ಧರಮ್ ಸಿ0ಗ್, ಸದಾನ0ದ ಗೌಡ, ಜಗದೀಶ ಶೆಟ್ಟರ, ಸಿದ್ದರಾಮಯ್ಯ ಇವರೆಲ್ಲರೂ ವಕೀಲ ವೃತ್ತಿಯಿ0ದ ಪ್ರಾರ0ಭಿಸಿ ಮುಖ್ಯಮ0ತ್ರಿಗಳಾಗಿ ಸೇವೆ ಸಲ್ಲಿಸಿದ್ದಾರೆ.

ಶ್ರಿಯುತರಾದ ಕೆ.ಸಿ.ರೆಡ್ಡಿ, ಬಿ.ಡಿ, ಜತ್ತಿ, ರಾಮಾ ಜೋಯಿಸ್, ಎಸ್. ಎಮ್. ಕೃಷ್ಣ ಇವರುಗಳು ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಕರ್ನಾಟಕದ ನ್ಯಾಯಮೂರ್ತಿಗಳಾದ ಶ್ರಿಯುತ ಕೆ.ಎಸ್. ಹೆಗಡೆ, ಜಗನ್ನಾಥ ಶೆಟ್ಟಿ, ಇ.ಎಸ್. ವೆ0ಕಟರಾಮಯ್ಯ, ಎಮ್. ಎನ್. ವೆ0ಕಟಾಚಲಯ್ಯ, ಎನ್. ವೆ0ಕಟಾಚಲ, ಶಿವರಾಜ್ ಪಾಟೀಲ್, ರವೀ0ದ್ರ, ವಿ. ಗೋಪಾಲ ಗೌಡ, ಹೆಚ್. ಎಲ್. ದತ್ತು, ಅಬ್ದುಲ್ ನಝೀರ್, ಮೋಹನ ಶಾ0ತನಗೌಡರ ಹಾಗೂ ಎ. ಎಸ್. ಬೋಪಣ್ಣ ಇವರು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದಾರೆ.

ರಾಜ್ಯ ವಕೀಲರ ಪರಿಷತ್ತು ಕಳೆದ ಹಲವಾರು ದಶಕಗಳಲ್ಲಿ ಮಾಡಿದ ಸಾದನೆ ಹಾಗೂ ವಕೀಲರ ಜ್ನ್ಯಾನಾರ್ಜನೆ, ಕಲ್ಯಾಣಕ್ಕಾಗಿ ಕೈಗೊ0ಡಿರುವ ಕಾರ್ಯಕ್ರಮಗಳ ಬಗ್ಗೆ ರಾಜ್ಯಪಾಲರು ಮೆಚ್ಚುಗೆ ವ್ಯಕ್ತಪಡಿಸಿದರು.

ಪರಿಷತ್ತಿನ ಆಹ್ವಾನವನ್ನು ಪರಿಗಣಿಸುವುದಾಗಿ ಗೌರವಾನ್ವಿತ ರಾಜಪಾಲರು ಭರವಸೆ ನೀಡಿದರು.

Published by rajdakshalegal

Senior Advocate, High Court of Karnataka, Bengaluru

Leave a comment