
ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾದಿಕಾರವು ಇದೇ ತಿ0ಗಳು ತಾರೀಖು 14 ರ0ದು ಬೃಹತ್ ಲೋಕ ಅದಾಲತ್ ಅನ್ನು ಹಮ್ಮಿಕೊ0ಡಿದೆ. ರಾಜ್ಯದ ಎಲ್ಲಾ ನ್ಯಾಯಾಲಯಗಳ ಸಮುಚ್ಚಯಗಳಲ್ಲಿ ಈ ಲೋಕ ಅದಾಲತ ನಡೆಯಲಿದೆ. ಮೊಕದ್ದಮೆ ಪೂರ್ವ ವ್ಯಾಜ್ಯಗಳ ಕಕ್ಷಿದಾರರು ತಮ್ಮ ವ್ಯಾಜ್ಯಗಳ ನಿವಾರಣೆಗೆ ಸ0ಬ0ದಪಟ್ಟ ಕಾನೂನು ಸೇವಾ ಪ್ರಾದಿಕಾರ/ಸಮಿತಿಗಳನ್ನು ಆಗಸ್ಟ 14ರ ಮು0ಚೆ ನೇರವಾಗಿ, ಆನ್ ಲೈನ್, ವಿಡಿಯೋ ಸಬೆ, ಇಮೈಲ್, ಎಸ್. ಎಮ್. ಎಸ್ ಸ0ದೇಶ, ವಾಟ್ಸಪ್ ಮುಖಾ0ತರ ಸ0ಪರ್ಕಿಸಬೇಕಾಗಿ ಕೋರಲಾಗಿದೆ.
ನ್ಯಾಯಾಲಯಗಳಲ್ಲಿ ಈಗಾಗಲೇ ಬಾಕಿ ಇರುವ ಮೊಕದ್ದಮೆಗಳ ಕಕ್ಶಿದಾರರು ತಮ್ಮ ವ್ಯಾಜ್ಯಗಳನ್ನು ತ್ವರಿತವಾಗಿ ಹಾಗೂ ಖರ್ಚು ಇಲ್ಲದೆ ಪರಿಹರಿಸಿಕೊಳ್ಳಲು ಉಚ್ಚ ನ್ಯಾಯಾಲಯದ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಮತ್ತು ಶಾಶ್ವತ ಕಾನೂನು ಸೇವಾ ಸಮಿತಿಗಳನ್ನು ಮೇಲೆ ಹೇಳಿದ ರೀತಿ ಸ0ಪರ್ಕಿಸಬೇಕಾಗಿ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸ0ಪರ್ಕಿಸಿ:
ನ್ಯಾಯ ಸ0ಯೋಗ, ನ್ಯಾಯ ದೇಗುಲ, ಮೊದಲನೇ ಮಹಡಿ, ಹೆಚ್. ಸಿದ್ದಯ್ಯ ರಸ್ತೆ, ಬೆ0ಗಳೂರು, 560027.
ದೂರವಾಣಿ: 080-22111730
ವೆಬ್ ಸೈಟ್ ವಿಳಾಸ. http://www.kslsa.kar.nic.in
ಕಾರ್ಯದರ್ಶಿ, ಜಿಲ್ಲಾ ಕಾನೂನು ಪ್ರಾದಿಕಾರ
ಕಾರ್ಯದರ್ಶಿ, ತಾಲೂಕು ಕಾನೂನು ಸಮಿತಿ,
ಸಹಾಯವಾಣಿ: 1800-425-90900