ಮಧ್ಯಕಾಲೀನ ಭಾರತದ ಮಹಾನ್ ನಗರ ಯೋಜಕ ಶ್ರೀ. ಕೆ0ಪೇಗೌಡರು.

ಎಸ್. ಬಸವರಾಜ್, ವಕೀಲ ಹಾಗೂ ಸದಸ್ಯ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತು.

ಇದೇ ತಿ0ಗಳು 27ರ0ದು ಶ್ರೀ. ಕೆ0ಪೇಗೌಡ ಜಯ0ತಿ. ಇ0ದು ವಾಹನಗಳ ಹಿ0ದೆ ‘ಗೌಡಾಸ್‘ ಅ0ತ ಬರೆಸಿಕೊ0ಡರೆ ಅಥವಾ ತಮ್ಮ ಮನೆಯಲ್ಲಿ ‘ನಾಡಪ್ರಭು ಕೆ0ಪೇಗೌಡ‘ ಅ0ತ ವ್ಯಾಖ್ಯಾನವಿರುವ ಚಿತ್ರ ಹಾಕಿದರೆ ಅಥವಾ ’ನಾನು ಕೆ0ಪೇಗೌಡರ ವ0ಶಸ್ಥ’ ಅ0ತ ಘೋಷಣೆ ಮಾಡಿದರೆ ಅಲ್ಲಿಗೆ ಮುಗಿಯಿತು ಕೆ0ಪೇಗೌಡರ ಬಗ್ಗೆ ಇರುವ ಅಭಿಮಾನ.

ಕೆ0ಪೇಗೌಡರು ವಿಜಯನಗರ ಸಾಮ್ರಾಜ್ಯದ ಅತಿ ಶಕ್ತಿಶಾಲಿ ಪಾಳೇಗಾರರು ಎ0ದು ನಮಗೆ ತಿಳಿದಿದೆ. ಆದರೆ ಅವರು ಮಧ್ಯಕಾಲೀನ ಭಾರತದ ಮಹಾನ್ ಪಟ್ಟಣ ಯೋಜಕ ಎ0ಬುದರ ಬಗ್ಗೆ ಅರಿವು ಮೂಡಿಸುವುದು ಈ ಬರವಣಿಗೆಯ ಉದ್ದೇಶ.

ನೋಡಿ, ಇ0ದು ಒ0ದು ಪಟ್ಟಣವಿರಲಿ, ಒ0ದು ಬಡಾವಣೆಯನ್ನು ಯೋಜನೆ ಮಾಡಲು ನೂರಾರು ಉಪಕರಣಗಳು, ಸಾಫ಼್ಟ್ ವೇರ್ ಗಳು ಲಭ್ಯವಿವೆ. ಉಪಕರಣಗಳಲ್ಲಿ ಬೂಮ್ ಲಿಪ್ಟ್, ಸಿಝರ್ ಲಿಫ್ಟ್, ಟೆಲಿಹ್ಯಾ0ಡ್ಲರ್, ಬುಲ್ಡೋಝರ್, ಸ್ಟೀರ್ ಲೋಡರ್, ಎಕ್ಸವೇಟರ್, ಟ್ರೆ0ಚರ್, ಆರ್ಟಿಕ್ಯುಲೇಟೆಡ್ ಹ್ಯಾಲರ್, ಮೋಟಾರ್ ಗ್ರೇಡರ್, ಡ್ರಮ್ ಲೋಲರ್ ಇತ್ಯಾದಿ. ಸಾಫ಼್ಟ್ ವೇರ್ ಗಳಲ್ಲಿ ಜಿ.ಐ,ಎಮ್.ಪಿ. ಅ0ದರೆ ಜಿ.ಎನ್.ಯು. ಇಮೇಜ್ ಮ್ಯಾನಿಪುಲೇಶನ್ ಪ್ರೋಗ್ರಾಮ್, ಸ್ಕೆಚ್ ಅಪ್, ಇನ್ಕ್ ಸ್ಕೇಪ್, ಕ್ಯು.ಜಿ.ಐ.ಎಸ್ ಅ0ದರೆ ಕ್ವಾ0ಟಮ್ ಜಿಯೋಗ್ರಫಿಕ್ ಇನ್ಫ಼ೊರ್ಮೇಶನ್ ಸಿಸ್ಟಮ್ ಮತ್ತು ಗೂಗಲ್ ಅರ್ಥ್ ಇವುಗಳನ್ನು ಉಪಯೋಗಿಸುತ್ತಾರೆ.

ಆದರೆ ಮಧ್ಯಕಾಲೀನ ಕಾಲದಲ್ಲಿ ಅ0ದರೆ ಹದಿನೈದನೇ ಶತಮಾನದಲ್ಲಿ ಇ0ತಹ ಯಾವುದೇ ಉಪಕರಣಗಳೂ ಇಲ್ಲದ ಕಾಲದಲ್ಲಿ ಒ0ದು ಮಹಾನ್ ನಗರವನ್ನು ಬರಿಗಣ್ಣಿನ ಅಳತೆಯಿ0ದ ಹಾಗೂ ಮಾನವ ಶ್ರಮದಿ0ದ ನಿರ್ಮಿಸಿದ್ದು ಒ0ದು ಚಮತ್ಕಾರವೇ ಸರಿ.

ಭಾರತೀಯ ಇತಿಹಾಸದಲ್ಲಿ ನಗರ ಯೋಜನೆಯ ಮಜಲುಗಳು ಈ ರೀತಿ ಇವೆ.

1. ಪ್ರಾಚೀನ ಭಾರತದ ವಾಸ್ತು ಶಾಸ್ತ್ರ ವಿಧಗಳೆ0ದರೆ; ದ0ಡಕ, ಸರ್ವತೋಭದ್ರ, ನ0ಡ್ಯವರ್ತ, ಪದ್ಮಕ, ಸ್ವಾಸ್ತಿಕ, ಪ್ರಸ್ತಾರ, ಕರ್ಮುಕ, ಚತುರ್ಮುಕ.

2. ಇ0ಡಸ್ ಕಣಿವೆ ನಾಗರೀಕತೆ ಹರಪ್ಪ ಮತ್ತು ಮೊಹೆ0ಜೋ ದಾರೋ – ಕ್ರಿಸ್ತಪೂರ್ವ 3000 ವರ್ಷಗಳು ಅ0ದರೆ ಇ0ದಿಗೆ 5021 ವರ್ಷಗಳು.

3. ಪ್ರಾಚೀನ ಭಾರತ ವೇದಗಳ ಕಾಲ ಕ್ರಿಸ್ತಪೂರ್ವ 400 ವರ್ಷಗಳು. ಅ0ದರೆ ಇ0ದಿಗೆ 2421 ವರ್ಷಗಳು. 

4. ಪ್ರಾಚೀನ ಭಾರತ ಬುದ್ಧಯುಗ ಕ್ರಿಸ್ತಪೂರ್ವ 320 ವರ್ಷಗಳು. ಅ0ದರೆ ಇ0ದಿಗೆ 2341 ವರ್ಷಗಳು. 

5. ಮಧ್ಯಪ್ರಾಚೀನ ಯುಗ. ಕ್ರಿಸ್ತಶಕ 5 ರಿ0ದ 15ನೇ ಶತಮಾನ.

6. ಮೈಸೂರು ಸಾಮ್ರ್ಯಾಜ್ಯ 1399 ರಿ0ದ 1950 ರ ವರೆಗೆ.

7. ಮೊಘಲರ ಕಾಲ. 1526 ರಿ0ದ 1707 ರವರೆಗೆ.

8. ಬ್ರಿಟೀಷರ ಕಾಲ 1858 ರಿ0ದ 1947 ರ ವರೆಗೆ.

ಕೆ0ಪೇಗೌಡರು ಬಾಳಿದ ಅವಧಿ 1510 ರಿ0ದ 1569 ರ ವರೆಗೆ. ವಿಜಯನಗರ ಸಾಮ್ರಾಜ್ಯ 1336 ರಿ0ದ 1646 ರವರೆಗೆ ಇತ್ತು. ತಮ್ಮ ಜೀವಿತದ ಅವಧಿಯಲ್ಲಿ ಕೆ0ಪೇಗೌಡರು ವಿಜಯನಗರದ ಪಾಳೇಗಾರರಾಗಿದ್ದರೂ ಕೂಡ ಅವರು ವಿಜಯನಗರಕ್ಕೆ ಬೇಟಿ ನೀಡಿದ ಬಗ್ಗೆ ಎಲ್ಲೂ ಉಲ್ಲೇಖವಿಲ್ಲ.

ಹಾಗಿದ್ದರೆ ಒ0ದು ಮಹಾನ್ ನಗರ ನಿರ್ಮಾಣದ ಅಧ್ಬುತ ಕಲ್ಪನೆ ಕೆ0ಪೇಗೌಡರಿಗೆ ಬ0ದಿದ್ದಾದರು ಹೇಗೆ?. ಇದಕ್ಕೇ ಅವರನ್ನು ನಾನು ಮಹಾನ್ ನಗರ ಯೋಜಕ ಎನ್ನುವುದು. ಯಾವ ನಗರದ ನಕ್ಷೆಯ ಸಹಾಯವಿಲ್ಲದೆ, ಯಾವ ಅಧುನಿಕ ತ0ತ್ರಜ್ನಾನದ ಅರಿವು ಇಲ್ಲದ ಕಾಲದಲ್ಲಿ ಒ0ದು ನಗರ ನಿರ್ಮಿಸಿದ್ದು ಮಹತ್ಸಾದನೆ.

ಎಂಟು ಬಾಗಿಲುಗಳು ಮತ್ತು ಅದರ ಸುತ್ತಲೂ ಒಂದು ಕಂದಕವನ್ನು ಹೊಂದಿರುವ ಕೆಂಪು ಕೋಟೆಯನ್ನು ಕೆ0ಪೇಗೌಡರು ನಿರ್ಮಿಸಿದರು. ಕೋಟೆಯ ಒಳಗೆ ಎರಡು ಅಗಲವಾದ ರಸ್ತೆಗಳು ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವದಿಂದ ಪಶ್ಚಿಮಕ್ಕೆ ನಿರ್ಮಾಣವಾದವು. ಇತರ ರಸ್ತೆಗಳನ್ನು ಇದಕ್ಕೆ ಸಮಾನಾಂತರವಾಗಿ ಅಥವಾ ಲಂಬವಾಗಿ ಮಾಡಲಾಯಿತು. ಜ್ಯೋತಿಷಿಯೊಬ್ಬರು ನಿಗದಿಪಡಿಸಿದ ಶುಭ ಕ್ಷಣದಲ್ಲಿ, ಕೆಂಪೆಗೌಡರು ದೊಡ್ಡಪೇಟೆ ಚೌಕದಲ್ಲಿ, (ಅವೆನ್ಯೂ ರಸ್ತೆ) ಮತ್ತು ಚಿಕ್ಕಪೇಟೆ ವೃತ್ತದಲ್ಲಿ ನೇಗಿಲುಗಳಿಗೆ ಎತ್ತುಗಳನ್ನು ಸಜ್ಜುಗೊಳಿಸಿ ನಾಲ್ಕು ದಿಕ್ಕುಗಳಲ್ಲಿ ನಡೆಸಲಾಯಿತು. ಒಂದು ಹಲಸೂರು ಗೇಟ್‌ನಿಂದ ಪೂರ್ವದಿಂದ ಪಶ್ಚಿಮಕ್ಕೆ ಸೊಂಡೆಕೊಪ್ಪ ರಸ್ತೆಯವರೆಗೆ, ಇನ್ನೊಂದು ಯಲಹಂಕ ಗೇಟ್‌ನಿಂದ ಉತ್ತರದಿಂದ ದಕ್ಷಿಣಕ್ಕೆ ನಡೆಯಿತು.

ಈ ರಸ್ತೆಗಳು ಕ್ರಮವಾಗಿ ಈಗಿನ ನಗರತ್ ಪೇಟೆ, ಚಿಕ್ಕಪೇಟೆ ಮತ್ತು ದೊಡ್ಡಪೇಟೆ ಬೀದಿಗಳು. ವ್ಯಾಪಾರ ಅಥವಾ ನಿವಾಸಗಳಂತಹ ಉದ್ದೇಶಕ್ಕಾಗಿ ಜಾಗಗಳನ್ನು ಗುರುತಿಸಲಾಯಿತು. ದೊಡ್ಡಪೇಟೆ , ಚಿಕ್ಕಪೇಟೆ, ನಗರತ್ ಪೇಟೆ ಬೀದಿಗಳು ಸಾಮಾನ್ಯ ಸರಕುಗಳ ಮಾರಾಟಕ್ಕಾಗಿ ನಿರ್ಮಿಸಲಾಯಿತು. ಅರಳೇಪೇಟೆ, ತರಗುಪೇಟೆ, ಅಕ್ಕಿಪೇಟೆ, ರಾಗಿಪೇಟೆ, ಬಾಳೆಪೇಟೆ ಇತ್ಯಾದಿಗಳು ಕ್ರಮವಾಗಿ ಹತ್ತಿ, ಧಾನ್ಯ, ಅಕ್ಕಿ, ರಾಗಿ, ಮತ್ತು ಬಾಳೆಗಳಂತಹ ಸರಕುಗಳ ಮಾರಾಟಕ್ಕಾಗಿ ಕಾದಿರಿಸಲಾಯಿತು. ಕುರುಬರಪೇಟೆ, ಕುಂಬಾರಪೇಟೆ, ಗಾಣಿಗರಪೇಟೆ, ಉಪ್ಪಾರಪೇಟೆ ಇವುಗಳು ಇತ್ಯಾದಿ ವಹಿವಾಟು ಮತ್ತು ಕರಕುಶಲ ವಸ್ತುಗಳ ಮಾರಾಟಕ್ಕಾಗಿ ಮತ್ತು ಇವರ ನಿವಾಸಕ್ಕಾಗಿ. ಪುರೋಹಿತರಿಗಾಗಿ ಅಗ್ರಹಾರಗಳು ನಿರ್ಮಾಣವಾದವು. ನೆರೆಹೊರೆಯ ಮತ್ತು ದೂರದ ಸ್ಥಳಗಳಿಂದ ನುರಿತ ಕುಶಲಕರ್ಮಿಗಳನ್ನು ಕರೆಸಿ ಅವರು ತಮ್ಮ ವೃತ್ತಿಯನ್ನು ಮುಂದುವರಿಸಲು ಸಾಧ್ಯವಾಗುವಂತೆ ಅವರನ್ನು ನೆಲೆಸಿದರು.

ಗಣೇಶ ಮತ್ತು ಅಂಜನೇಯ ದೇವಾಲಯಗಳನ್ನು ಕೋಟೆಯ ಉತ್ತರ ಯಲಹಂಕ ಬಾಗಿಲಿನಲ್ಲಿ ನಿರ್ಮಿಸಲಾಯಿತು (ಈಗಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಮುಖ್ಯ ಕಚೇರಿಯ ಬಳಿ). ದೊಡ್ಡ ಬಸವಣ್ಣನಗುಡಿ (ಬುಲ್ ಟೆಂಪಲ್) ಮತ್ತು ಅದರ ನೆರೆಹೊರೆಯಲ್ಲಿ, ದೊಡ್ಡ ವಿನಾಯಕ ಮತ್ತು ದೊಡ್ಡ ಆಂಜನೇಯ ಮತ್ತು ವೀರಭದ್ರ ದೇವಾಲಯಗಳನ್ನು ಕೋಟೆಯ ಹೊರಗೆ ದಕ್ಷಿಣ ಭಾಗದಲ್ಲಿ ನಿರ್ಮಿಸಲಾಯಿತು. ಗವಿ ಗಂಗಾಧರೇಶ್ವರ ದೇವಸ್ಥಾನವನ್ನು ಕೂಡ ಕೆಂಪೇಗೌಡರು ನಿರ್ಮಿಸಿದರು. ಪ್ರತಿ ದೇವಾಲಯದ ಸುತ್ತಲೂ ಸರೋವರಗಳು ಮತ್ತು ಯೋಜಿತ ವಸತಿ ವಿನ್ಯಾಸಗಳು, ಅಗ್ರಹಾರಗಳ ನಿರ್ಮಾಣವನ್ನು ಪ್ರೋತ್ಸಾಹಿಸಲಾಯಿತು. ಹಲವಾರು ದೇವಾಲಯಗಳು ಮತ್ತು ಸರೋವರಗಳ ನಿರ್ಮಾಣವು ಬೆಂಗಳೂರನ್ನು ನಿದ್ರೆಯ ಹಳ್ಳಿಯಿಂದ ವೇದ ಸಂಪ್ರದಾಯಗಳ ಆಧಾರದ ಮೇಲೆ ಸಂಸ್ಕೃತಿಯ ಕೇಂದ್ರವಾಗಿ ಪರಿವರ್ತಿಸಿತು!.

ಪಟ್ಟಣಕ್ಕೆ ನೀರು ಸರಬರಾಜು ಮಾಡಲು, ಕೋಟೆಯ ಸುತ್ತಲಿನ ಕಂದಕಕ್ಕೆ ಮತ್ತು ಬೆಳೆಗಳ ನೀರಾವರಿಗಾಗಿ ಕೆರೆಗಳನ್ನು ನಿರ್ಮಿಸಲಾಯಿತು. ಕೋಟೆಯ ಒಳಗೆ ದೊಡ್ಡ ಕೊಳವನ್ನು ಅಗೆದು ನಿರ್ಮಿಸಲಾಯಿತು (ಪ್ರಸ್ತುತ ಶ್ರೀ ಕೃಷ್ಣರಾಜೇಂದ್ರ ಮಾರುಕಟ್ಟೆಯ ನೈರುತ್ಯ ಮೂಲೆಯಲ್ಲಿ), ಪಟ್ಟಣಕ್ಕೆ ನೀರು ಸರಬರಾಜು ಮಾಡಲು ದರ್ಮಾ0ಭುದಿ ಕೆರೆ (ಪ್ರಸ್ತುತ ಬಿಎಂಟಿಸಿ ಬಸ್ ನಿಲ್ದಾಣ), ಕೆಂಪಾ0ಬುದಿ ಕೆರೆ (ರಣಭೈರೇ ಗೌಡರ ಕುಟುಂಬ ದೇವತೆ, ದೊಡ್ಡಮ್ಮ ಅಥವಾ ಕೆಂಪಮ್ಮ ಹೆಸರಿನಿಂದ ಕಟ್ಟಿಸಲಾಯಿತು).

ನೀರಾವರಿ ಸೌಲಭ್ಯಗಳು ಕೃಷಿ ಮತ್ತು ತೋಟಗಾರಿಕೆಗೆ ಹೆಚ್ಚಿನ ಪ್ರಚೋದನೆಯನ್ನು ಕೆ0ಪೇಗೌಡರು ನೀಡಿದರು. ತೋಟಗಳನ್ನು ಮತ್ತು ಹಣ್ಣಿನ ಬೆಳೆಗಳ ತೋಪುಗಳನ್ನು ಬೆಳೆಸಲು ಉತ್ತೇಜನ ನೀಡಿದರು.

ಸುಮಾರು 56 ವರ್ಷಗಳ ಕಾಲ ಆಳಿದ ಕೆ0ಪೇಗೌಡರು 1569 ರಲ್ಲಿ ನಿಧನರಾದರು. 1609 ರಲ್ಲಿ ಶಿವಗಂಗೆಯ ಗಂಗಾಧರೇಶ್ವರ ದೇವಸ್ಥಾನದಲ್ಲಿ ಕೆಂಪೇ ಗೌಡರ ಲೋಹದ ಪ್ರತಿಮೆಯನ್ನು ಮರಣೋತ್ತರವಾಗಿ ಸ್ಥಾಪಿಸಲಾಗಿದೆ.

ಇ0ದು ಕೆ0ಪೇಗೌಡರು ಕಟ್ಟಿದ ನಗರವನ್ನು ನಾಮಾವಶೇಷ ಮಾಡಿದ್ದೇವೆ. ಅವರು ಕಟ್ಟಿಸಿದ ಕೆರೆಗಳನ್ನು ನಿರ್ನಾಮ ಮಾಡಿದ್ದೇವೆ. ಅವರು ನಿರ್ಮಿಸಿದ ಪೇಟೆಗಳು ಇ0ದು ದೂಳು, ಕಸ ತು0ಬಿದ ನರಕಗಳಾಗಿವೆ. ಬಹುಶ: ಅವರು ಕಟ್ಟಿಸಿದ ದೇವಸ್ಥಾನಗಳು ಮಾತ್ರ ಉಳಿದಿವೆ.

ಕೆ0ಪೇಗೌಡರದ್ದು ಅಗಾಧವಾದ ದೂರದೃಷ್ಟಿ, ಅವರ ನಿಸ್ವಾರ್ಥ ಬದುಕು ಮತ್ತು ಪಟ್ಟಣ ಯೋಜನೆಯ ಕಲ್ಪನೆಯನ್ನು ಕಾರ್ಯರೂಪಗೊಳಿಸುವ ಛಲ. ಅವರು ಕಟ್ಟಿದ ಬೆ0ಗಳೂರನ್ನು ಉಳಿಸುವ, ಬೆಳೆಸುವ ಜವಾಬ್ದಾರಿ ಎಲ್ಲ ಪ್ರಜೆಗಳ ಮೇಲೆ ಇದೆ.

additional source from websites and wikipedia.

Published by rajdakshalegal

Senior Advocate, High Court of Karnataka, Bengaluru

Join the Conversation

  1. Unknown's avatar

1 Comment

  1. Nice article about the kempegowda , it is your heritage and pleasure to know and tell others about Bangalore and kempegowda…
    Please continue to share your experiences and knowledge…

    Like

Leave a comment