
-ಶ್ರೀನಿವಾಸ ಬಾಬು ಎಲ್. ಅಧ್ಯಕ್ಷರು, ಕರ್ನಾಟಕ ರಾಜ್ಯ ವಕೀಲರ ಪರಿಷತ್ತು.
ವಕೀಲರ ಕಲ್ಯಾಣಕ್ಕಾಗಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಕರ್ನಾಟಕ ಸರ್ಕಾರದಿ0ದ ಐದು ಕೋಟಿ ರೂಗಳ ಧನಸಹಾಯ ಪಡೆಯಲು ಕಾರಣರಾದ ಕರ್ನಾಟಕ ಸರ್ಕಾರದ ಅಡ್ವೋಕೇಟ್ ಜನರಲ್ ಶ್ರೀ. ಪ್ರಭುಲಿ0ಗ್ ನಾವದಗಿ ಇವರಿಗೆ ಅಭಿನ0ದನೆ ಸಲ್ಲಿಸುತ್ತೇನೆ.
ಸರ್ಕಾರದ ಮನವೊಲಿಸಿ ಈ ಕಷ್ಟ ಕಾಲದಲ್ಲಿ ವಕೀಲರಿಗೆ ಹಣ ಬಿಡುಗಡೆ ಮಾಡಲು ಶ್ರೀ. ಪ್ರಭುಲಿ0ಗ್ ನಾವದಗಿ ಇವರು ಪಟ್ಟ ಪ್ರಯತ್ನ ಪರಿಷತ್ತಿನ ಎಲ್ಲ ಸದಸ್ಯರಿಗೂ ತಿಳಿದಿದೆ.
ಅಡ್ವೊಕೇಟ್ ಜನರಲ್ ರವರು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯರೂ ಕೂಡ ಆಗಿದ್ದಾರೆ. ಆದರೆ ಪರಿಷತ್ತನ್ನು ತನ್ನ ಸ0ಸ್ಥೆಯೆ0ದೇ ಭಾವಿಸಿ ಕಳೆದ ವರ್ಷ ಮತ್ತು ಈ ವರ್ಷ ಸರ್ಕಾರದಿ0ದ ಧನಸಹಾಯ ಪಡೆದಿದ್ದು ನಿಜಕ್ಕೂ ಅಭಿನ0ದನೀಯ.
ಸರಳ ವ್ಯಕ್ತಿತ್ವದ, ಅಪಾರ ಜ್ನಾನದ ವಕೀಲರೊಬ್ಬರು ಪರಿಷತ್ತಿನ ಎಕ್ಸ್ ಅಫ಼ಿಸಿಯೋ ಸದಸ್ಯರಾಗಿರುವುದು ಅಲ್ಲದೆ ಸರ್ಕಾರದ ಮನವೊಲಿಸುವಲ್ಲಿ ಮಹತ್ತರ ಪಾತ್ರವಹಿಸಿದ್ದು ಪರಿಷತ್ತಿನ ಹೆಮ್ಮ ಎ0ದು ಇಲ್ಲಿ ಹೇಳಲು ಇಚ್ಚಿಸುತ್ತೇನೆ.
ಯುವನಾಯಕತ್ವದಿ0ದ ಮಹತ್ತರ ಬದಲಾವಣೆ ತರಬಹುದು ಎನ್ನುವುದಕ್ಕೆ ಶ್ರೀ. ಪ್ರಭುಲಿ0ಗ್ ನಾವದಗಿ ಉದಾಹರಣೆ.
ಮು0ದಿನ ದಿನಗಳಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಎಲ್ಲಾ ಕಲ್ಯಾಣ ಕಾರ್ಯಕ್ರಮಗಳಿಗೆ ಶ್ರೀ. ಪ್ರಭುಲಿ0ಗ್ ನಾವದಗಿ ಸಹಾಯ, ಸಹಕಾರ ಮು0ದುವರೆಯಲಿ ಎ0ದು ಆಶಿಸುತ್ತೇನೆ.