
ಹಿರಿಯ ವಕೀಲ ಹಾಗೂ ಬೆ0ಗಳೂರು ವಕೀಲರ ಸ0ಘದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ, ಶ್ರೀ. ವಿವೇಕ್ ಸುಬ್ಬಾ ರೆಡ್ಡಿಯವರು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ ಕೃತಜ್ನತೆ ಹಾಗೂ ಕೋರಿಕೆಯನ್ನು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಕೋವಿಡ್ ಸ0ತ್ರಸ್ತ ವಕೀಲರಿಗೆ ಹಣಕಾಸಿನ ನೆರವು ಘೋಶಿಸಿರುವುದು ಸ್ವಾಗತಾರ್ಹ. ಇನ್ನೂ ಹೆಚ್ಚಿನ ಸಹಾಯ ಮಾಡಲು ಯೋಜನೆಗಳನ್ನು ರೂಪಿಸಬೇಕೆ0ದು ಪರಿಷತ್ತನ್ನು ಕೇಳಿದ್ದಾರೆ.
ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಹಾಗೂ ವಕೀಲರ ಸ0ಘಗಳು ಅದರಲ್ಲೂ ಬೆ0ಗಳೂರು ವಕೀಲರ ಸ0ಘ ಒಟ್ಟಾಗಿ ವಕೀಲರ ಕಲ್ಯಾಣಕ್ಕೆ ಕೈಜೋಡಿಸಬೇಕು ಎ0ಬುದು ಎಲ್ಲರ ಆಶಯ.
ಬೆ0ಗಳೂರು ವಕೀಲರ ಸ0ಘದ ಅಧ್ಯಕ್ಶ ಸ್ಥಾನಕ್ಕೆ ಸ್ಪರ್ಧಿಸಲಿರುವ ಅಭ್ಯರ್ಥಿಯೊಬ್ಬರು ಈ ನಿಟ್ಟಿನಲ್ಲಿ ಸಹಕಾರ ಹಾಗೂ ಸಲಹೆ ನೀಡಿರುವುದು ಸ್ವಾಗತಾರ್ಹ.
ಎಸ್. ಬಸವರಾಜ್,
ಸದಸ್ಯ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತು.
ಶ್ರೀ. ವಿವೇಕ್ ರೆಡ್ಡಿಯವರ ಪತ್ರ