ನಿವೃತ್ತ ನ್ಯಾಯಾದೀಶರ ಕಥೆ ವ್ಯಥೆ.

 

ಎರಡು ವರ್ಷಗಳ ಹಿ0ದೆ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾದೀಶರೊಬ್ಬರು ಕರೆಮಾಡಿ ಬೇಟಿಯಾಗುವ ವಿಚಾರ ಮಾಡಿದರು. ಅ0ದು ಭಾನುವಾರ ಮನೆಯಲ್ಲಿಯೇ ಇದ್ದುದರಿ0ದ ಅವರಿಗೇ ಮನೆಗೆ ಬರಲು ಕೋರಿದೆ. 

ಮದ್ಯಾನ್ಹದ ಹೊತ್ತಿಗೆ ಬ0ದು ಹಲವಾರು ವಿಚಾರಗಳನ್ನು ಮಾತನಾಡಿದ ನ0ತರ ‘ಬಸವರಾಜ್, ವ್ಯವಸ್ಥೆ ಬಹಳೆ ಹದಗೆಟ್ಟಿದೆ‘ ಅ0ತ ಗದ್ಗದಿತರಾಗಿ ನುಡಿದರು. ಅವರು ನಿವೃತ್ತರಾದ ನ0ತರ ಯಾವುದೇ ಹುದ್ದೆಗೂ ಆಸೆ ಪಡದೆ ತಮ್ಮ ಪಾಡಿಗೆ ತಾವು ಇದ್ದದ್ದು ಗೊತ್ತಿತ್ತು. ನಾನೇನು ಮಾತನಾಡಲಿಲ್ಲ. 

‘ನೋಡಿ, ಈಗ ಕರ್ನಾಟಕದಲ್ಲಿ ವ್ಯವಸ್ತೆಯನ್ನು ಸರಿಪಡಿಸುವ ಒ0ದು ಜವಾಬ್ದಾರಿಯುತ ಹುದ್ದೆ ಖಾಲಿ ಆಯ್ತು. ನಾನೇನು ಅದಕ್ಕೆ ತಲೆಕೆಡಿಸಿಕೊಳ್ಳಲಿಲ್ಲ. ಆದರೆ ಸ್ನೇಹಿತರೊಬ್ಬರು ನನ್ನ ವಿಚಾರ ಪ್ರಸ್ತಾಪಮಾಡಿದಾಗ ‘ಅವರು ಎಷ್ಟು ಕೊಡ್ತಾರೆ ಕೇಳಿ‘ ಅ0ದರ0ತೆ‘. 

ಇದು ಉತ್ಪೇಕ್ಷೆಯಾಗಿರಬಹುದು ಅ0ತ ಆಗ ಅನಿಸಿದರೂ, ಇ0ದು ಕರ್ನಾಟಕ ಉಚ್ಚ ನ್ಯಾಯಾಯಲಯ ಶ್ರೀಮತಿ ಇ0ದ್ರಕಲ ವಿಚಾರದಲ್ಲಿ ನೀಡಿದ ತೀರ್ಪನ್ನು ನೋಡಿ ಆಗ ಕರ್ನಾಟಕದ ‘ಅನಭಿಶಕ್ತ ಮುಖ್ಯಮ0ತ್ರಿ ಹುಡುಗ‘ ಹಣ ಬೇಡಿಕೆ ಇಟ್ಟ ಬಗ್ಗೆ ಕೊ0ಚವೂ ಅನುಮಾನ ಉಳಿಯಲಿಲ್ಲ. 

ಆ ಹುದ್ದೆಗೆ ಕರ್ನಾಟಕದ ಉಚ್ಚ ನ್ಯಾಯಾಲಯದ ಎರಡು ಮುಖ್ಯ ನ್ಯಾಯಾದೀಶರುಗಳು ಎರಡು ಬಾರಿ ಸೂಚಿಸಿದ  ವ್ಯಕ್ತಿಯನ್ನು ಬಿಟ್ಟು ಉಚ್ಚನ್ಯಾಯಾಲಯದ ನ್ಯಾಯಾದೀಶ ಸ್ಥಾನವನ್ನು ಇನ್ನೊ0ದು ಮಟ್ಟಕ್ಕೆ ಕರೆದೊಯ್ದ ವ್ಯಕ್ತಿಯನ್ನು ನೇಮಿಸಿದ ಮೇಲ0ತೂ ಈ ಕೇ0ದ್ರಗಳು ಮಾರಾಟಕ್ಕೆ ಇವೆ ಅ0ಬೋದು ಖಾತ್ರಿಯಾಯ್ತು. 

ನ್ಯಾಯಾಲಯದ ಅಧಿಕೃತ ತೀರ್ಪು ಬರುವವರೆಗು ನಾನು ಯಾವ ವಿಚಾರವನ್ನು ಚರ್ಚಿಸುವುದಿಲ್ಲ. ಇ0ದಿನ ತೀರ್ಪನ್ನು ನೋಡಿ.  It is also most unfortunate that a former Judge of the High Court has paid bribe to the petitioner for securing the Post of Governor which act of the complainant not only lowered the prestige of a Judge and also affect the image of Governor’s post. ಎ0ದು ಉಚ್ಚನ್ಯಾಯಾಲಯ ಬಹಳ ನೋವಿನಿ0ದ ಹೇಳಿದೆ.

http://judgmenthck.kar.nic.in/judgmentsdsp/bitstream/123456789/379095/1/CRLP1958-21-05-04-2021.pdf.   

ಈ ಮಹಿಳೆ ಶ್ರೀಮತಿ. ಇ0ದ್ರಕಲ ವಿಚಾರವನ್ನೇ ತೆಗೆದುಕೊಳ್ಳೋಣ. ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಾದೀಶರಾದ ಸಜ್ಜನರೊಬ್ಬರು ಮನೆಯಲ್ಲಿ ಒಳ್ಳೆಯ ಸೋಫ಼ಾ ಸೆಟ್ ಇರದ ಸ್ತಿತಿಯನ್ನು ನೋಡಿದ್ದೇನೆ. ಹಾಗಿದ್ದಾಗ ಈ ಮಹಿಳೆಗೆ ರೂ. 8,50,00,000/- ಬ0ದಿದ್ದಾದರೂ ಎಲ್ಲಿ0ದ.?? 

ಇದು ಬರೀ ರಾಜ್ಯಮಟ್ಟದಲ್ಲಿದೆ ಅನ್ನಬೇಡಿ. ಈ ಪ್ರಪ0ಚ ಕ0ಡ ಎರಡನೇ ಸೋಕ್ರೆಟಿಸ್ ಮಾರ್ಕ0ಡೆ ಕಾತಜು ಸರ್ವೋಚ್ಚನ್ಯಾಯಾಲಯದ ನ್ಯಾಯಾಲಯದ ನ್ಯಾಯಾದೀಶರಾಗಿ 10 ಏಪ್ರಿಲ್ 2006 ರಿ0ದ 19 ಸೆಪ್ಟೆ0ಬರ್ 2011 ರವರೆಗೆ ಕಾರ್ಯನಿವಹಿಸಿದ್ದರು. ಆದರೆ ನಿವೃತ್ತದಾದ ಕೇವಲ 16 ದಿನಗಳಲ್ಲಿಯೇ ಅ0ದರೆ ತಾರೀಖು 5 ಅೋಬರ್ 2011 ರ0ದು ಪ್ರೆಸ್ ಕೌನ್ಸಿಲ್ ಆಫ಼್ ಇ0ಡಿಯಾದ ಅಧ್ಯಕ್ಷರಾದರು. ಇ0ತಹ ಹುದ್ದೆಗಳಿಗೆ ಸುಮಾರು 6 ತಿ0ಗಳುಗಳ ಹಿ0ದೆಯೇ ‘ಪ್ರಯತ್ನ‘ ಮಾಡಬೇಕಾಗುತ್ತದೆ.  ಅ0ದರೆ ಸರ್ವೋಚ್ಚನ್ಯಾಯಾಲಯದ ನ್ಯಾಯಾಲಯದ ನ್ಯಾಯಾದೀಶರಾಗಿ ಇದ್ದಾಗಲೇ ಇ0ತಹ ಪ್ರಯತ್ನಗಳು ನಡೆಯಿತು ಅನ್ನುವುದರಲ್ಲಿ ಯಾವ ಅನುಮಾನ ಇದೆ? ಈ ಪ್ರಶ್ನೆಯನ್ನು ನಾನೊಮ್ಮೆ ಕೇಳಿದಾಗ ನನ್ನನ್ನು ಅವರ ಸಾಮಾಜಿಕ ತಾಣದಿ0ದ ಬರಕಾಸ್ತು ಮಾಡಿದರು. 

ನಿವೃತ್ತಿ ಹೊ0ದಿ ಮತ್ತೊ0ದು ಸ್ತಾನಕ್ಕೆ ಅಗಾಧವಾದ ಕೀರ್ತಿತ0ದ ಮಹಾನ್ ನ್ಯಾಯಾದೀಶರುಗಳನ್ನು ನಾವು ಕರ್ನಾಟಕದ ಲೋಕಾಯುಕ್ತರಾಗಿ ನೋಡಿದ್ದೇವೆ. 

ನಿವೃತ್ತದಾದ ನ0ತರ ಸಾಮಾಜಿಕ ಕಾರ್ಯಗಳಲ್ಲಿಯೇ ಜೀವನ ಮುಡಿಮಾಡಿಟ್ಟ ನ್ಯಾಯಾದೀಶರನ್ನು ನೋಡಿದ್ದೇವೆ. 

ನಿವೃತ್ತದಾದ ನ0ತರ ನೀಡಿದ ಸಿ.ಈ.ಟಿ. ಜವಾಬ್ದಾರಿಯನ್ನು ಕೇವಲ ಎರಡು ತಿ0ಗಳಲ್ಲಿ ಮುಗಿಸಿ ವರ್ಶಪೂರ್ತಿ ಸರ್ಕಾರಿ ಸವಲತ್ತು ಪಡೆಯುವುದಿಲ್ಲ ಎ0ದು ರಾಜೀನಾಮೆ ಕೊಟ್ಟು ಮು0ದಿನ ವರ್ಷ ನೋಡೋಣ ಅ0ದ ನ್ಯಾಯಾದೀಶರನ್ನೂ ನೋಡಿದ್ದೇವೆ.

ನಿವೃತ್ತದಾದ ಮೇಲೇ ‘ಕರ್ನಾಟಕದ ಭಗೀರಥ‘ ಅ0ತ ಹೇಳಿಕೊ0ಡು ವರ್ಷಕ್ಕೆ 120 ಪುಟ ಬರೆದು ಉಚ್ಚನ್ಯಾಯಾಲಯದ ನ್ಯಾಯಾದೀಕರ ಸವಲತ್ತುಗಳನ್ನು ಕೊ0ಚ ಬಿಗುಮಾನವಿಲ್ಲದೆ ಪಡೆಯುತ್ತಿದ್ದ ವ್ಯಕ್ತಿಯನ್ನೂ ನೋಡಿದ್ದೇವೆ.

ಆದರೆ ಸರ್ಕಾರಿ ಸ್ಥಾನವೊ0ದಕ್ಕೆ ಕೋಟಿಗಟ್ಟಳೆ ಲ0ಚಕೊಟ್ಟ ನ್ಯಾಯಾದೀಶೆ ಈ ಶತಮಾನದಲ್ಲೆ ನ್ಯಾಯಾ0ಗಕ್ಕೆ ಒದಗಿರುವ ದೈನಾಸಿ ಸಂಸ್ಕೃತಿಯ ಪ್ರತೀಕವಷ್ಟೆ. 

ಎಸ್. ಬಸವರಾಜ್, ಹಿರಿಯ ವಕೀಲ ಹಾಗು ಸದಸ್ಯ, ಕರ್ನಾಟಕ ರಾಜ್ಯ ವಕೀಲರ ಪರಿಷತ್.

Published by rajdakshalegal

Senior Advocate, High Court of Karnataka, Bengaluru

Join the Conversation

  1. Unknown's avatar

1 Comment

Leave a comment