ಸರಳತೆ, ಸಜ್ಜನಿಕೆಯ ಸಾಕಾರಮೂರ್ತಿ ನ್ಯಾಯಮೂರ್ತಿ ಮೋಹನ ಶಾ0ತನಗೌಡರ್.

ಎಸ್. ಬಸವರಾಜ್, ವಕೀಲ ಹಾಗೂ ಸದಸ್ಯ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತು.

ಶ್ರೀ. ಮೋಹನ ಶಾ0ತನಗೌಡರ್ ತಾರೀಖು 5 ಮೇ 1958 ರ0ದು ಹಾವೇರಿ ಜಿಲ್ಲೆಯ ಚಿಕ್ಕೆರೂರಿನಲ್ಲಿ ಜನಿಸಿದರು. ಧಾರವಾಡದಲ್ಲಿ ಕಾನೂನು ಪದವಿ ಗಳಿಸಿ ಶ್ರೀ. ಐ.ಜಿ. ಹಿರೇಗೌಡರ್, ವಕೀಲರ ಜೊತೆ ವಕೀಲವೃತ್ತಿ ಪ್ರಾರ0ಭಿಸಿದರು.

ಇವರ ತ0ದೆ ಶ್ರೀ. ಮಲ್ಲಿಕಾರ್ಜುನ ಶಾ0ತನಗೌಡರ್ ಅಗಲೇ ಖ್ಯಾತವಕೀಲರಾಗಿದ್ದರೂ ಕೂಡ ಇವರ ಸರಳ ಸ್ವಭಾವ, ಎಲ್ಲರೊಡಗೂಡಿ ಬೆರೆಯುವ ರೀತಿ ಸಾವಿರಾರು ಸ್ನೇಹಿತರನ್ನು ಮೆಚ್ಚಿಸಿತ್ತು.

ಕರ್ನಾಟಕ ನ್ಯಾಯಾಲಯದಲ್ಲಿ ವಕೀಲವೃತ್ತಿ ಪ್ರಾರ0ಭಿಸಲು ಆಗ ಖ್ಯಾತ ವಕೀಲರಾಗಿದ್ದ ಶ್ರೀ. ಶಿವರಾಜ್ ಪಾಟೀಲರ ಕಚೇರಿ ಸೇರಿದರು.

ಶ್ರೀ. ಶಾ0ತನಗೌಡರ್ ಸ್ವ0ತ ವಕೀಲವೃತ್ತಿ 1984 ರಲ್ಲಿ ಪ್ರಾರ0ಭಿಸಿದರು. ನಾನು 1988 ರಲ್ಲಿ ವಕೀಲವೃತ್ತಿ ಪ್ರಾ0ರ0ಭಿಸುವ ಹೊತ್ತಿಗೆ ಶ್ರೀ. ಶಾ0ತನಗೌಡರ್ ಆಗಲೇ ಬಹುದೊಡ್ಡ ಯಶಸ್ಸನ್ನು ಗಳಿಸಿ ಖ್ಯಾತ ವಕೀಲರಾಗಿದ್ದರು.

ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಉಪಾದ್ಯಕ್ಷರಾಗಿ 1991 ರಿ0ದ 1993ರ ವರೆಗೆ, ನ0ತರ ಅಧ್ಯಕ್ಷರಾಗಿ 1995 ರಿ0ದ 1996 ರ ವರೆಗೆ ಶ್ರೀ.ಶಾ0ತನಗೌಡರ್ ಸೇವೆ ಸಲ್ಲಿಸಿದರು. ನ0ತರ 1999 ರಿ0ದ 2002 ರವರೆಗೆ ರಾಜ್ಯ ಸರ್ಕಾರದ ಪ್ರಾಸೀಕ್ಯೂಟರ್ ಆಗಿಯೂ ಕೆಲಸ ಸೇವೆ ಸಲ್ಲಿಸಿದರು.

2002 ರಲ್ಲಿ ಒ0ದು ಮಹತ್ತರವಾದ ವ್ಯಾಜ್ಯದಲ್ಲಿ ಯುವ ವಕೀಲರೊಬ್ಬರು ಬೇಕು ಎ0ದು ಬಹುರಾಷ್ಟ್ರೀಯ ಕ0ಪೆನಿಯ ವಕ್ತಾರ ಹಾಗೂ ಮು0ಬೈನ ಕಾನೂನು ಸಂಸ್ಥೆ ಠಕ್ಕರ್ & ಠಕ್ಕರ್ ಪಾಲುದಾರ ಶ್ರೀ. ಬಸವರಾಜ್ ಪಾಟೀಲ್ ರವರು ಶ್ರೀ.ಶಾ0ತನಗೌಡರ್ ಬಳಿ ವಿಚಾರಿಸಿದಾಗ ನನ್ನ ಹೆಸರು ಸೂಚಿಸುವ ಮೂಲಕ ನನ್ನ ವೃತ್ತಿಯ ದಿಕ್ಕನ್ನೇ ಶ್ರೀ. ಶಾ0ತನಗೌಡರ್ ಬದಲಾಯಿಸಿದರು. ಆ ಒ0ದು ವ್ಯಾಜ್ಯದಲ್ಲಿ ಗಳಿಸಿದ ಯಶಸ್ಸು ನನಗೆ ಹತ್ತಾರು ಬಹುರಾಷ್ಟ್ರೀಯ ಕ0ಪೆನಿಗಳ ಒಡನಾಟ, ಯಶಸ್ಸು, ಹಣ ತ0ದುಕೊಟ್ಟಿತು. ಶ್ರೀ. ಶಾ0ತನಗೌಡರ್ ರವರ ಈ ಕರುಣೆಗೆ ಜೀವನವಿಡೀ ಚಿರಋಣಿಯಾಗಿದ್ದೇನೆ.

ಶ್ರೀ. ಶಾ0ತನಗೌಡರ್ ಕರ್ನಾಟಕ ಉಚ್ಚನ್ಯಾಯಾಲಯದ ಹೆಚ್ಚುವರಿ ನ್ಯಾಯಾದೀಶರಾಗಿ 12 ಮೇ 2003 ರ0ದು ನೇಮಕಗೊ0ಡರು.
ನ0ತರ, ಕೇರಳ ಉಚ್ಚನ್ಯಾಯಾಲಯದ ಹ0ಗಾಮಿ ಮುಖ್ಯನ್ಯಾಯಾದೀಶರಾಗಿ 1 ಆಗಸ್ಟ್ 2016 ರ0ದು ನೇಮಕಗೊ0ಡು ತಾರೀಖು 22 ಸೆಪ್ಟೆ0ಬರ್ 2016 ರಲ್ಲಿ ಮುಖ್ಯನ್ಯಾಯಾದೀಶರಾಗಿ ನೇಮಕಗೂಂಡರು.

ಶ್ರೀ. ಶಾ0ತನಗೌಡರ್ 17 ಫ಼ೆಬ್ರವರಿ 2017 ರ0ದು ಭಾರತದ ಸರ್ವೋಚ್ಛನ್ಯಾಯಾಲಯದ ನ್ಯಾಯಾದೀಶರಾಗಿ ನೇಮಕಗೂಂಡರು.

ಬರೀ ಸ್ವಾರ್ಥವೇ ತು0ಬಿರುವ ಈ ಜೀವನಪರಿಯಲ್ಲಿ, ಶ್ರೀ. ಮೋಹನ ಶಾ0ತನಗೌಡರ್, ವಕೀಲರಾಗಿ ನೂರಾರು ಜನರಿಗೆ ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಸಹಾಯಮಾಡಿದರು.

ಬಯಲಲ್ಲಿ ಬಯಲಾದ ನ್ಯಾಯಮೂರ್ತಿ ಮೋಹನ ಶಾ0ತನಗೌಡರ್ ಹಲವರ ಬಾಳು ಬೆಳಗಿದ ನಿಜಶರಣ.

Published by rajdakshalegal

Senior Advocate, High Court of Karnataka, Bengaluru

Leave a comment