ಡಾ. ಅOಬೇಡ್ಕರ್ – ಸOವಿದಾನ ರಚನೆಯ ನOತರದ ಪಾತ್ರ.

ಎಸ್. ಬಸವರಾಜ್, ಸದಸ್ಯ, ಕರ್ನಾಟಕ ರಾಜ್ಯ ವಕೀಲರ ಪರಿಷತ್

ಇ0ದು ಹೆಚ್ಚಿನ ಜನ “ಡಾ. ಅ0ಬೇಡ್ಕರ್ ಸ0ವಿದಾನ ಬರೆದರು-ಜೈ ಭೀಮ್” ಅನ್ನುವ ಮೂಲಕ ಈ ದೇಶಕ್ಕೆ ಡಾ. ಅ0ಬೇಡ್ಕರ್ ರವರ ನಿಜವಾದ ಕೊಡುಗೆಯನ್ನು ಮರೆತಿದ್ದಾರೆ. ಡಾ. ಅ0ಬೇಡ್ಕರ್ ಪಾತ್ರವನ್ನು ಬರೀ ಸ0ವಿದಾನ ರಚನೆಗೆ ಮಾತ್ರ ಸೀಮೀತಗೋಳಿಸಿದರೆ ಅದು ಅವರು ಮಾಡಿದ ನಿಜವಾದ ಸಾದನೆಗೆ ಮಾಡುವ ಅವಮಾನ.

ಸ0ವಿದಾನ ರಚನಾ ಸಮಿತಿಗೆ ಡಾ: ಅ0ಬೇಡ್ಕರ್ ಅಧ್ಯಕ್ಷರಾದರೂ ಅವರಿಗೆ ಮಹಾನ್ ಬುದ್ದಿಜೀವಿಗಳಾದ ಶ್ರೀಯುತ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಎನ್. ಗೋಪಾಲಸ್ವಾಮಿ ಐಯ್ಯ0ಗಾರ್, ಕೆ.ಎಮ್. ಮುನ್ಶಿ, ಮೊಹಮ್ಮದ್ ಸಾದುಲ್ಲ, ಬಿ.ಎಲ್. ಮಿಟ್ಟರ್, ಡಿ.ಪೀ. ಖೈತಾನ್ ಅವರ ಸಹಾಯವಿತ್ತು. ಸಮಿತಿಯ ಕರ್ನಾಟಕದ ಹೆಮ್ಮೆ, ಶ್ರೀ. ಬಿ.ಎನ್.ರಾವ್ ಹಲವಾರು ದೇಶಗಳ ಸ0ವಿದಾನಗಳ ತಿರುಳನ್ನು ಕಲೆಹಾಕಿ ಒ0ದು ಕರಡು ಪ್ರತಿ ತಯಾರುಮಾಡಿದ್ದರಾದರೂ, ಇದನ್ನು ಭಾರತ ದೇಶದ ಸ0ವಿದಾನವಾಗಿ ರೂಪಾ0ತರಗೊಳಿಸುವ ಹೊಣೆ ಡಾ: ಅ0ಬೇಡ್ಕರ್ ಮತ್ತು ಇತರ ಸದಸ್ಯರ ಮೇಲೆ ಇತ್ತು. ಡಾ. ಅ0ಬೇಡ್ಕರ್ ಸ್ವತಹ ಸುಮಾರು 60 ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿದ್ದರು.

ಅಂಬೇಡ್ಕರ್ ರವರ ಮೇರುಸಾದನೆಯ0ದರೆ ಅ0ದಿನ ಲೋಕಸಭೆಯಲ್ಲಿ (Constituent Assembly) ಅದುವರೆಗೂ ಸಮಿತಿ ತಯಾರಿಸಿದ ಸ0ವಿದಾನವನ್ನು ಅತ್ಯ0ತ ಸಮರ್ಪಕವಾಗಿ ಪ್ರತಿಪಾದಿಸಿದ್ದು. ಈ ವಿಶಯದಲ್ಲಿ ಅಂಬೇಡ್ಕರ್ ಮಾಡಿದ ಸಾದನೆ ಬಹುಶ: ಯಾವ ಸ0ವಿದಾನ ತಜ್ಞನಿಗೂ ಸಾದ್ಯವಾಗಲಾರದು.

ಸ0ವಿದಾನದ ಎಲ್ಲಾ ಅನುಚ್ಚೇದಗಳು, ಭಾಗಗಳು, ಅನುಸೂಚಿಗಳನ್ನೂ ಪ್ರತಿಪಾದಿಸಿ ಸಬೆಯ ಪ್ರತಿ ಸದಸ್ಯರೂ ಕೇಳುವ ಪ್ರಶ್ನೆಗೆ ಉತ್ತರಿಸುವ ಜವಾಬ್ದಾರಿಯನ್ನು ನಿಭಾಯಿಸುವುದು ಸುಲಭದ ಮಾತಾಗಿರಲಿಲ್ಲ. ಅಂಬೇಡ್ಕರ್ ರವರನ್ನು ಈ ವಿಶಯದಲ್ಲಿ ಅಕ್ಷರಸಹ: ಅಗ್ನಿಪರೀಕ್ಷೆಗೆ ಒಳಪಡಿಸಲಾಯಿತು.

ಸುಮಾರು 299 ಸದಸ್ಯರಿದ್ದ ಲೋಕಸಭೆ Constituent Assembly ಮೂರು ವರ್ಷ, ಹನ್ನೊ0ದು ತಿ0ಗಳು, ಹದಿನೇಳು ದಿನಗಳ ಕಾಲ ಸ0ವಿದಾನದ ಬಗ್ಗೆ ತೀವ್ರ ಚರ್ಚೆ ಕೈಗೊ0ಡಿತು. 165 ದಿನಗಳಲ್ಲಿ 114 ದಿನಗಳನ್ನು ಸ0ವಿದಾನಕ್ಕೆ ಅ0ಕಿತಮಾಡುವ ವಿಶಯದಲ್ಲಿಯೇ ಚರ್ಚೆ ನಡೆಯಿತು.

7,635 ತಿದ್ದುಪಡಿಗಳನ್ನು ಸದಸ್ಯರು ಸೂಚಿಸಿದರು. ಇದರಲ್ಲಿ 2,473 ತಿದ್ದುಪಡಿಗಳನ್ನು ಅಳವಡಿಸಲಾಯಿತು. ಈ ಅಗ್ನಿಪರೀಕ್ಷೆಯ ಸಮಯದಲ್ಲಿ ಪ್ರತಿ ಸದಸ್ಯರು ಕೇಳುವ ಪ್ರಶ್ನೆ, ಅನುಮಾನ, ಸೂಚನೆಗಳಿಗೆ ಅತ್ಯ0ತ ಸಮ0ಜಸ ಉತ್ತರ ಕೊಡುವ ಜವಾಬ್ದಾರಿಯನ್ನು ಅ0ಬೇಡ್ಕರ್ ಹೊತ್ತರು. ಇಡೀ ಸದನಕ್ಕೆ ಸ0ವಿದಾನವನ್ನು ವ್ಯಾಖ್ಯಾನ ಮಾಡಿ ಎಲ್ಲ ಸದಸ್ಯರಿಗೂ ಒಪ್ಪುವ ರೀತಿಯಲ್ಲಿ ಸ0ವಿದಾನ ಪರಿಪೂರ್ಣತೆ ಒದಗಿಸಿದ್ದು ಅ0ಬೇಡ್ಕರ್ ರವರ ಅದ್ಬುತ ಸಾದನೆ.

ಅಂಬೇಡ್ಕರ್ ರವರ ಮತ್ತೊ0ದು ಮಹಾನ್ ಸಾದನೆಯೆ0ದರೆ ಹಿ0ದೂ ಕೋಡ್ ಮುಖಾ0ತರ ಹೆಣ್ಣುಮಕ್ಕಳಿಗೆ ಸಮಾನ ಹಕ್ಕು ಕೊಡಿಸುವ ಕಾನೂನನ್ನು ಜಾರಿಗೆ ತರುವ ಪ್ರಯತ್ನ ಮಾಡಿದ್ದು. 2005 ರಲ್ಲಿ ಮಾಡಿದ ಕಾನೂನನ್ನು 1952ರಲ್ಲಿಯೇ ಪ್ರತಿಪಾದಿಸಿದರು. ಆದರೆ ಇದು ಕಾನೂನಾಗಿ ಜಾರಿಗೊಳಿಸಲು ವಿಫಲರಾದಾಗ ಅಂಬೇಡ್ಕರ್ ರಾಜೀನಾಮೆ ಕೊಟ್ಟರು.

ಅಂಬೇಡ್ಕರ್ ರವರ ಸಾದನೆ ಕೇವಲ ಸ0ವಿದಾನ ರಚನೆಗೆ ಸೀಮೀತವಾಗಬಾರದು. ಸ0ವಿದಾನ ರಚನೆಯ ನ0ತರದ ಅವರ ಸಾದನೆ ಎಲ್ಲರಿಗೂ ಸ್ಪೂರ್ತಿಯಾಗಬೇಕು.

Published by rajdakshalegal

Senior Advocate, High Court of Karnataka, Bengaluru

Leave a comment