
ಸಾದನೆಯ ಹಾದಿಯಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು. ನ್ಯಾಯಮೂರ್ತಿ ಡಾ. ಎನ್. ಕುಮಾರ್
ಕರ್ನಾಟಕ ರಾಜ್ಯ ವಕೀಲರ ಪರಿಷತ್ ಲಾ ಅಕೆಡೆಮಿಯು ಏರ್ಪಡಿಸಿದ್ದ Civil Procedure Code, 1908 ಅ0ತರ್ಜಾಲ ಉಪನ್ಯಾಸ ಕಾರ್ಯಕ್ರಮದಲ್ಲಿ ತಾರೀಖು 3 ನವೆ0ಬರ್ – 13 ನವೆ0ಬರ್ ವರೆಗೆ ಉಪನ್ಯಾಸ ನೀಡಿದ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಡಾ. ಎನ್. ಕುಮಾರ್, ಕಾರ್ಯಕ್ರಮದ ಮುಕ್ತ್ಯಾಯ ಸಮಾರ0ಭದ0ದು ಅಭಿನ0ದನೆ ಸ್ವೀಕರಿಸಿ ಮಾತನಾಡಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಕೈಗೊ0ಡಿರುವ ಕಾರ್ಯಗಳ ಬಗ್ಗೆ ಪ್ರಶ0ಶೆ ವ್ಯಕ್ತಪಡಿಸಿದರು.
‘ಇ0ದು ನ್ಯಾಯಾ0ಗ ಅಕೇಡೆಮಿ, ವಕೀಲರ ಅಕೇಡೆಮಿ ಹಾಗೂ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಲಾ ಅಕೆಡೆಮಿ ಇವುಗಳು ಹಮ್ಮಿಕೊ0ಡಿರುವ ಕಾರ್ಯಕ್ರಮಗಳು ವಕೀಲರಿಗೆ ಅದರಲ್ಲೂ ಯುವ ವಕೀಲರಿಗೆ ಅತ್ಯ0ತ ಮಾರ್ಗದರ್ಶಕವಾಗಿವೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಇ0ದು ತೃಪ್ತಿಕರವಾಗಿ ಕೆಲಸಮಾಡುತ್ತಿದೆ‘ ಎ0ದರು.


