
ಅ0ತರ್ಜಾಲ ಮುಖಾ0ತರ ವಕೀಲರ ದಾಖಲಾತಿ. ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಮು0ಚೂಣಿ ಸಾದನೆ.
ಕೋವಿಡ್ ನಿ0ದ ಉ0ಟಾದ ಸಮಸ್ಯಯನ್ನು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಅ0ತರ್ಜಾಲ ಮುಖಾ0ತರ ವಕೀಲರ ದಾಖಲಾತಿ ಮೂಲಕ ಯಶಸ್ವಿಯಾಗಿ ನಿಭಾಯಿಸಿದೆ.
ಇದುವರೆಗೂ ಐದಕ್ಕೂ ಹೆಚ್ಚು ಅ0ತರ್ಜಾಲ ದಾಖಲಾತಿ ಪ್ರಕ್ರಿಯೆ ನಡೆದಿದ್ದು, ಆರುನೂರಕ್ಕೂ ಹೆಚ್ಚು ವಕೀಲರನ್ನು ದಾಖಲಾತಿ ಮಾಡಲಾಗಿದೆ. ಮೊದಲನೆಯ ದಾಖಲಾತಿ ಸಮಾರ0ಭವನ್ನು ಕರ್ನಾಟಕ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ಉದ್ಘಾಟಿಸಿದ್ದರು.
ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ದಾಖಲಾತಿ ಕಮಿಟಿಯ ಅಧ್ಯಕ್ಶರಾಗಿ ಶ್ರೀ. ದೇವರಾಜ್, ಹಾಗೂ ಸದಸ್ಯರಾಗಿ ಶ್ರಿ. ವಿಶಾಲ್ ರಘು ಹಾಗೂ ಶ್ರಿ. ವಿನಯ್ ಮಾ0ಗಳೇಕರ್ ಇವರುಗಳು ಇರುತ್ತಾರೆ.
ದೇಶದ ಹಲವಾರು ಕಾನೂನು ಕಾಲೇಜಿನಲ್ಲಿಹಾಗೂ ವಿಶ್ವ ವಿಧ್ಯಾಲಯಗಳಲ್ಲಿ ಅಭ್ಯಾಸ ಮಾಡಿದ ನೂರಾರು ವಿಧ್ಯಾರ್ಥಿಗಳು ಅ0ತರ್ಜಾಲ ಮುಖಾ0ತರ ವಕೀಲರ ದಾಖಲಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದನ್ನು ಇಲ್ಲಿ ಗಮನಿಸಬಹುದಾಗಿದೆ.