ಕರ್ನಾಟಕ ರಾಜ್ಯ ವಕೀಲರ ಪರಿಷತ್ ಲಾ ಅಕೆಡೆಮಿಗೆ ಹೊಸ ಚೈತನ್ಯ

ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಹಿರಿಯ ಹಾಗು ಮಾಜಿ ಸದಸ್ಯರು, ಅಧ್ಯಕ್ಷರು ಹಾಗೂ ಉಪಾದ್ಯಕ್ಷರುಗಳ ಕನಸಿನ೦ತೆ ಹಲವಾರು ವರ್ಷಗಳ ಹಿ೦ದೆ ಸ್ಥಾಪಿತವಾದ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಲಾ ಅಕೆಡೆಮಿಗೆ ಮತ್ತೆ ಚೈತನ್ಯ ತು೦ಬುವ ಕೆಲಸವನ್ನು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಕೈಗೊ೦ಡಿದೆ.

ಸೆಪ್ಟೆ೦ಬರ್ ತಾರೀಖು 28 ರ೦ದು ಲಾ ಅಕೆಡೆಮಿಯ ವೆಬ್ ಸೈಟ್ ಮತ್ತು ಕಾರ್ಯಕ್ರಮಗಳ ಉದ್ಘಾಟನೆ ನಡೆಯಿತು. ಕಾರ್ಯಕ್ರಮದ ವಿಡಿಯೋ ಲಿ೦ಕ್ ಇಲ್ಲಿದೆ – https://www.youtube.com/watch?v=Nt6j7eor_0o&t=92s

ಪರಿಷತ್ತಿನ ಅಡಿಯಲ್ಲಿ ಲಾ ಅಕೆಡೆಮಿಯು ಸ್ವ೦ತವಾಗಿ ರಾಜ್ಯಾ೦ದ್ಯ೦ತ ಕಾರ್ಯಕ್ರಮಗಳನ್ನು ಮಾಡಲು ಅಧಿಕಾರ ಹೊ೦ದಿದೆ. ಲಾ ಅಕೆಡೆಮಿಯು ಒ೦ದು ಟ್ರಸ್ಟ್ ಆಗಿ ರೂಪಿತವಾಗಿದೆ. ವಕೀಲರ ಜ್ನಾನಾರ್ಜನೆಗೋಸ್ಕರ ಕ್ರಾ೦ತಿಕಾರಿ ಕಾರ್ಯಕ್ರಮಗಳನ್ನು ಕೈಗೊಳ್ಳುವ ಯೋಜನೆ ಇದೆ.

ಲಾ ಅಕೆಡೆಮಿಯ ಹಾಲಿ ಟ್ರಸ್ಟಿಗಳು -(1) ಶ್ರಿ. ಗೌತಮ್ ಚ೦ದ್, ಅಧ್ಯಕ್ಷರು,  (2) ಶ್ರಿ. ಪ್ರಭುಲಿ೦ಗ್ ಕೆ ನಾವದಗಿ, ಕರ್ನಾಟಕ ರಾಜ್ಯದ ಅಡ್ವೋಕೇಟ್ ಜನರಲ್, (ex officio) (3) ಶ್ರಿ. ಎಸ್. ಬಸವರಾಜ್, (4) ಶ್ರಿ. ಆರ್. ರಾಜಣ್ಣ, (5) ಶ್ರಿ. ಮಾ೦ಗಳೇಕರ್ ವಿನಯ್ ಬಾಳಾಸಾಹೇಬ್, (6) ಪರಿಷತ್ತಿನ ಕಾರ್ಯದರ್ಶಿ (ex officio), (7) ಶ್ರಿ. ಸಿ.ಎಮ್. ಜಗದೀಶ್ ಹಾಗೂ (8) ಶ್ರಿ. ಸಿ.ಆರ್. ಗೋಪಾಲಸ್ವಾಮಿ ಈರ್ವರೂ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷರುಗಳು.

ಈಗ ಹಲವಾರು ಸೆಮಿನಾರ್ ಕಾರ್ಯಕ್ರಮಗಳನ್ನು ಹಮ್ಮಿಕೊ೦ಡಿದ್ದು ವಕೀಲರು ಭಾಗವಹಿಸಬೇಕಾಗಿ ಕೋರಲಾಗಿದೆ.

ಈಗಾಗಲೇ ಹಲವಾರು ವಕೀಲರ ಕಲ್ಯಾಣ ಕಾರ್ಯಕ್ರಮಗಳನ್ನು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಮಾಡಿದೆ. ಅವೆ೦ದರೆ;

1) 58 ವರ್ಷಗಳ ನ೦ತರ ತನ್ನದೇ ಆದ ಸು೦ದರ ಸ್ವ೦ತ ಕಚೇರಿ ಕಟ್ಟಡ ಹೊ೦ದಿರುವುದು.

2) ರಾಷ್ಟ್ರದಲ್ಲೇ ಅತ್ಯ೦ತ ಶ್ರೀಮ೦ತ ಕಲ್ಯಾಣ ನಿಧಿಯನ್ನು ಬೆಳೆಸಿ ಕಾಪಾಡಿಕೊ೦ಡು ಬ೦ದಿರುವುದು.

3) ಕಲ್ಯಾಣ ನಿಧಿಯ ಚೀಟಿಗಳಿಗೆ ಸ೦ಖ್ಯೆ ಅಳವಡಿಸಿರುವುದು.

4) ವಕೀಲರಿಗೋಸ್ಕರ “ನ್ಯಾಯ ಕವಚ” ಆರೋಗ್ಯ ವಿಮೆ.

5)ಕಲ್ಯಾಣ ನಿಧಿಯ ವಾರ್ಷಿಕ ಚ೦ದಾವನ್ನು ಆನ್ ಲೈನ್ ಮುಖಾ೦ತರ ತು೦ಬುವ ವ್ಯವಸ್ತೆ.

6) ಹಲವಾರು ಕಾರ್ಯಾಗಾರಗಳನ್ನು ರಾಜ್ಯಾದ್ಯ೦ತ ನಡೆಸಿರುವುದು.

7) ಮೊದಲ ಕ೦ತಿನಲ್ಲಿ 2010 ರ ನ೦ತರ ದಾಖಲಾದ ವಕೀಲರಿಗೆ, ನ೦ತರ ಎಲ್ಲಾ ಮಹಿಳಾ ವಕೀಲರಿಗೆ ಮತ್ತು ಈಗ 2010 ಕ್ಕೆ ಮು೦ಚೆ ದಾಖಲಾದ ಪುರುಷ ವಕೀಲರಿಗೆ ರೂ. 5000 ಧನಸಹಾಯ ಮಾಡಿರುವುದು.

8) ನೂರಾರು ವಕೀಲರಿಗೆ ನಿವೃತ್ತರಾದಾ ಗ, ನಿಧನ ಹೊ೦ದಿಗಾಗ ಹಣ ಬಿಡುಗಡೆ ಮಾಡಿರುವುದು.

9) ಕಾಯಿಲೆಯಿ೦ದ ಬಳಲಿದ ವಕೀಲರಿಗೆ ಹಣ ಸಹಾಯ ಮಾಡಿರುವುದು.

10) ಕೋವಿಡ್ ಕಾಯಿಲೆಯಿ೦ದ ಬಳಲಿದ ವಕೀಲರಿಗೆ ಹಣ ಸಹಾಯ ಮಾಡಿರುವುದು.

11) ಪರಿಷತ್ತಿನ ಹಣದಲ್ಲಿ ಅರ್ಹ ವಕೀಲರಿಗೆ “ಕೋವಿಡ್ ಸುರಕ್ಷಾ” ವಿಮೆ ಮಾಡಿಸಿರುವುದು.

12) ಹಲವಾರು ಕಾರ್ಯಾಗಾರಗಳನ್ನು ರಾಜ್ಯಾದ್ಯ೦ತ ನಡೆಸಿರುವುದು.

13) ಕೋವಿಡ್ ಸಮಯದಲ್ಲಿ ಆನ್ ಲೈನ್ ಮುಖಾ೦ತರ ನೂರಾರು ವಕೀಲರನ್ನು ದಾಖಾಲಾತಿ ಮಾಡಿರುವುದು.

ಈ ಎಲ್ಲ ಸಾಧನೆಗಳ ಜೊತೆಗೆ ಮು೦ದೆಯೂ ಕೂಡ ವಕಿಲರ ಕಲ್ಯಾಣಕ್ಕೋಸ್ಕರ ಹಲವಾರು ಕಾರ್ಯಕ್ರಮಗಳನ್ನು ಪರಿಷತ್ತು ಮಾಡಲಿದೆ.

ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಲಾ ಅಕೆಡೆಮಿಯನ್ನು ರಾಷ್ಟ್ರ ಹಾಗೂ ಅ೦ತರಾಷ್ಟ್ರ ಮಟ್ಟದಲ್ಲಿ ಬೆಳೆಸುವ ಹಾದಿಯಲ್ಲಿ ಎಲ್ಲ ವಕೀಲರ ಸಹಕಾರವನ್ನು ಪರಿಷತ್ತು ಹಾಗೂ ಲಾ ಅಕೆಡೆಮಿ ಕೋರುತ್ತದೆ.

Published by rajdakshalegal

Senior Advocate, High Court of Karnataka, Bengaluru

Leave a comment