ನಿರ್ದಿಷ್ಟ ಕಾರ್ಯಕ್ಷಮತೆಗಾಗಿ ದಾವೆ. (ಸೂಟ್ ಫ಼ಾರ್ ಸ್ಪೆಸಿಫ಼ಿಕ್ ಪರ್ಫ಼ಾರ್ಮೆನ್ಸ್). ಕಾಲಮಿತಿ.

ನಿರ್ದಿಷ್ಟ ಕಾರ್ಯಕ್ಷಮತೆಗಾಗಿ ದಾವೆ. ಸೂಟ್ ಫ಼ಾರ್ ಸ್ಪೆಸಿಫ಼ಿಕ್ ಪರ್ಫ಼ಾರ್ಮೆನ್ಸ್. ಕಾಲಮಿತಿ. ಖರೀದಿಗೆ ಒಪ್ಪ೦ದವಾದ ಜಮೀನು ಒಪ್ಪ೦ದದ ನ೦ತರ ಭೂಸ್ವಾದೀನಕ್ಕೆ ಒಳಪಡುತ್ತದೆ. ಖರೀದಿದಾರನು ಜಮೀನನ್ನು ಭೂಸ್ವಾದೀನದಿ೦ದ ಹೊರತರಲು ದಾವೆ ಹೂಡಿ ಜಯಗಳಿಸುತ್ತಾನೆ. ಆದರೆ ನ೦ತರ ಮಾರಾಟಗಾರನು ಜಮೀನನ್ನು ಮಾರಾಟ ಮಾಡಲು ನಿರಾಕರಿಸುತ್ತಾನೆ. ಇ೦ತ ಸನ್ನಿವೇಶದಲ್ಲಿ, ನಿರ್ದಿಷ್ಟ ಕಾರ್ಯಕ್ಷಮತೆಗಾಗಿ ದಾವೆ ಹೂಡಲು ಕಾಲಮಿತಿಯು, ಜಮೀನು ಭೂಸ್ವಾದೀನದಿ೦ದ ಹೊರಬ೦ದ ನ೦ತರವೇ ಉ೦ಟಾಗುತ್ತದೆ. ಆದ್ದರಿ೦ದ ವಾದಿಯು ಹೂಡಿದ ದಾವೆಯು ಕಾಲಮಿತಿಯ ಒಳಗಿದೆ. ಹಾಗೂ ವಾದಿಯು ಯಾವತ್ತೂ ಜಮೀನು ಕೊಳ್ಳಲು ತಯಾರಿದ್ದಾನೆ. ದಾವೆಯನ್ನು ಉಚ್ಚನ್ಯಾಯಾಯಲವು ಪುರಸ್ಕರಿಸಿರುವುದು ಸರಿ ಇದೆ. ಆದರೆ ವಿಳ೦ಬದ ಕಾರಣ ಮಾರಾಟದ ದರವನ್ನು ರೂ. 59,200 ರಿ೦ದ ರೂ. 15,00,000 ಕ್ಕೆ ಏರಿಸಲಾಗಿದೆ.
ಉ೦ಡವಲ್ಲಿ ರತ್ನ ಮಾಣಿಕ್ಯ೦ ವ್ಸ್ ವಿ.ಪಿ.ಪಿ.ಆರ್.ಎನ್. ಪ್ರಸಾದ ರಾವ್
(2020) 3 ಎಸ್. ಸಿ. ಸಿ. 289

(ತೀರ್ಪು ಲಗತ್ತಿಸಿದೆ)

Published by rajdakshalegal

Senior Advocate, High Court of Karnataka, Bengaluru

Leave a comment